ಕೊಲ್ಲಮೊಗ್ರು: ಕೊಲ್ಲಮೊಗ್ರು ಗ್ರಾಮದ ಕಾರಣಿಕ ದೈವ ನಿಲ್ಕೂರು ಶಿರಾಡಿ ದೈವಸ್ಥಾನದ ಕಾಣಿಕೆ ಹುಂಡಿ ಕಳವಿಗೆ ಯತ್ನ ಮಂಗಳವಾರ ರಾತ್ರಿ ನಡೆದಿದೆ.
ಬುಧವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಹರಿಹರಪಲ್ಲತ್ತಡ್ಕ-ಕೊಲ್ಲಮೊಗ್ರು ರಸ್ತೆಯ ನಿಲ್ಕೂರು ಎಂಬಲ್ಲಿ ರಸ್ತೆಯ ಬದಿಯಲ್ಲಿ ಕಾರಣಿಕ ಪ್ರಸಿದ್ಧ ಶಿರಾಡಿ ದೈವಸ್ಥಾನದ ಕಾಣಿಕೆ ಡಬ್ಬಿ ಇದೆ. ಇದರ ಬೀಗವನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಕಳ್ಳರ ಪ್ರಯತ್ನ ಸಫಲವಾಗದ ಕಾರಣ ಹಣ ಕಳ್ಳತನವಾಗಿಲ್ಲ. ಈ ಹಿಂದೆ ಅನೇಕ ಬಾರಿ ಇಲ್ಲಿ ಕಳವಿಗೆ ಯತ್ನ ನಡೆದಿತ್ತು. ಪ್ರತೀ ಬಾರಿ ವಿಫಲ ಯತ್ನವಾಗಿದೆ.
ಈ ಹಿಂದೆ ಕೂಡ ಮೂರ್ನಾಲ್ಕು ಬಾರಿ ಇದೇ ರೀತಿ ಪ್ರಯತ್ನ ಇಲ್ಲಿ ನಡೆದಿತ್ತು. ಈ ಕುರಿತು ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿತ್ತು. ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಈ ಬಾರಿ ದೈವಸ್ಥಾನದ ಆಡಳಿತ ಮಂಡಳಿ ಯಾವುದೇ ದೂರು ನೀಡದೆ ದೈವದ ಮುಂದೆ ಪ್ರಾರ್ಥನೆ ಮಾಡಿದೆ. ಶಿರೂರು ಶ್ರೀ ಶಿರಾಡಿ ದೈವಸ್ಥಾನವೂ ಅತ್ಯಂತ ಕಾರಣಿಕ ದೈವಸ್ಥಾನವಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕೊಲ್ಲಮೊಗ್ರು: ನಿಲ್ಕೂರು ಶಿರಾಡಿ ದೈವಸ್ಥಾನದ ಕಾಣಿಗೆ ಡಬ್ಬಿ ಕಳವಿಗೆ ಯತ್ನ"