ಬೆಳ್ಳಾರೆ: ಕಳಂಜ ಬಾಳಿಲ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕಳಂಜ ರೈತ ಸ್ನೇಹಿತರ ಕೂಟದ ಜಂಟಿ ಸಹಯೋಗದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಾಣು ಹಾಗು ಸಾವಯವ ಗೊಬ್ಬರ ತಯಾರಿಕ ಘಟಕದ ಉತ್ಪನ್ನ ಸಾವಯವ ಸೂಕ್ಷ್ಮಾಣು ಪೋಷಕಾಂಶ ಗೊಬ್ಬರದ ಕುರಿತು ಮಾಹಿತಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವು ಕೋಟೆಮುಂಡುಗಾರಿನ ಸಂಘದ ಪ್ರಧಾನ ಕಚೇರಿ ಸಭಾಭವನದಲ್ಲಿ ನಡೆಯಿತು.
ಮಾಹಿತಿ ಮತ್ತು ತರಬೇತುದಾರ ವಿಷ್ಣುಮೂರ್ತಿ.ಜಿ.ರಾವ್ ಸಾವಯವ ಪೋಷಕಾಂಶ ಗೊಬ್ಬರ ತಯಾರಿಕೆ ಮತ್ತು ಬಳಸುವಿಕೆಯ ರೀತಿ, ಗೊಬ್ಬರದ ಪ್ರಮಾಣದ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾಹಿತಿದಾರ ಮತ್ತು ಗ್ರಾಮದ ಕೃಷಿಕರ ಮಧ್ಯೆ ವಿವಿಧ ಪ್ರಶ್ನೋತ್ತರ ಹಾಗು ಚರ್ಚೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಕಳಂಜ ಬಾಳಿಲ ಪ್ರಾಕೃಪಸ ಸಂಘದ ಅಧ್ಯಕ್ಷ ಸುಧಾಕರ.ರೈ ಎ.ಎಂ, ಉಪಾಧ್ಯಕ್ಷ ಲಿಂಗಪ್ಪ ಗೌಡ ತಂಟೆಪ್ಪಾಡಿ, ನಿರ್ದೇಶಕರಾದ ಕುಞ್ಞಂಣ್ಣ ನಾಯ್ಕ ಬಾಳೆಗುಡ್ಡೆ, ಮುಗುಪ್ಪು ಕೂಸಪ್ಪ ಗೌಡ, ವಿಶ್ವನಾಥ ರೈ ಕಳಂಜ, ಕಾರ್ಯನಿರ್ವಹಣಾಧಿಕಾರಿ ವೆಂಕಪ್ಪಯ್ಯ.ಕೆ, ಹಾಗೂ ಕಳಂಜ ಗ್ರಾಮದ ರೈತರು, ಕೃಷಿಕರು ಉಪಸ್ಥಿತರಿದ್ದರು.
ಕಳಂಜ ರೈತ ಸ್ನೇಹಿತರ ಕೂಟದ ಸಂಚಾಲಕ ಪವನ ವೆಂಕಟ್ರಮಣ ಭಟ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕೋಟೆಮುಂಡುಗಾರಿನಲ್ಲಿ ರೈತರೊಂದಿಗೆ ಸಂವಾದ"