ಬದಿಯಡ್ಕ: ಕ್ಯಾಂಪ್ಕೊ ಇನ್ ಸೇವಾ ಹಲವು ಸೇವಾ ಕಾರ್ಯಕ್ರಮದ ಬಳಿಕ ತನ್ನ 6 ನೇ ಕಾರ್ಯಕ್ರಮದ ಅಂಗವಾಗಿ ಎಸ್ ಎಸ್ ಎಲ್ ಪಿ ಕಿರಿಯ ಪ್ರಾಥಮಿಕ ಶಾಲೆ, ಉದಯಗಿರಿ, ಬಾಂಜತಡ್ಕ, ಬದಿಯಡ್ಕ , ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ಪುಸ್ತಕೇತರ ಸಾಮಗ್ರಿಗಳ ವಿತರಣೆ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಅಂಬಿಕ ಸ್ವಾಗತದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಮಾಜಿ ಕ್ಯಾಂಪ್ಕೋ ಉಪಾಧ್ಯಕ್ಷರು ಕೃಷ್ಣ ಭಟ್ ವಾಶೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಹಾಗು ವೇದಿಕೆಯಲ್ಲಿ ಕ್ಯಾಂಪ್ಕೊ ಇನ್ ಸೇವಾ ಸಂಯೋಜಕ ಗಣೇಶ್, ಪಿ.ಟಿ. ಎ ಅಧ್ಯಕ್ಷ ಕುಸುಮ ಎಂ ಟಿ ಎ ಅಧ್ಯಕ್ಷ ಬೆಬಿ ಶಾಲಿನಿ, ಕೃಷ್ಣ ಪ್ರಸಾದ್ ಅವರು ಉಪಸ್ಥತರಿದ್ದರು.
ಅಧ್ಯಾಪಕರಾದ ರಾಜೇಶ್ ಅಗಲ್ಪಾಡಿ ವಂದಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ"