ಪುತ್ತೂರು: ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಮಂಚಿ ಪುದ್ದೋಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ, ಕ್ಯಾಂಪ್ಕೊ ಇನ್ ಸೇವಾ ಸಂಯೋಜಕ ಗಣೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ್ ನಾಯಕ್ ಪಿ, ಸಮೂಹ ಸಂಪನ್ನೂಲ ವ್ಯಕ್ತಿ ಇಂದಿರಾ, ಶ್ರೀ ಕ್ರಷ್ಣ ಮಿತ್ರ ಮಂಡಳಿ (ರಿ) ಮಂಚಿ ಕೊಳ್ನಾಡು ಇದರ ಅಧ್ಯಕ್ಷ ದಿನೇಶ್ ಕುಮಾರ್ , ಕ್ಯಾಂಪ್ಕೋ ಜನರಲ್ ಮ್ಯಾನೇಜರ್ ರೇಶ್ಮಾ ಮಲ್ಯ, ಹಾಗೂ ಸುರೇಶ್ , ಅರುಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನವ್ಯಶ್ರೀ ಬಳಗದವರು ವಂದನಾ ಗೀತೆ ಹಾಡಿದರು. ದಿನೇಶ್ ಕುಮಾರ್ ಸ್ವಾಗಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ"