ಮಂಗಳೂರು: ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪ್ಕೊ ಬೈಕಂಪಾಡಿ ಎಪಿಯಂಸಿ ಯಲ್ಲಿ ನಿರ್ಮಿಸಿದ ನೂತನ ಅಡಿಕೆ ಸಂಸ್ಕರಣೆ ಮತ್ತು ಗೋದಾಮು ಕಟ್ಟಡವನ್ನು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಲೋಕಾರ್ಪಣೆ ಮಾಡಿದರು.
ಈ ಸಂದರ್ಭ ಕ್ಯಾಂಪ್ಕೊ ಅಧ್ಯಕ್ಷ ಶ್ರೀ ಎಸ್. ಆರ್. ಸತೀಶ್ಚಂದ್ರ, ಉಪಾಧ್ಯಕ್ಷ ಶಂ. ನಾ. ಖಂಡಿಗೆ , ನಿರ್ದೇಶಕರಾದ ಚನಿಲ ತಿಮ್ಮಪ್ಪ ಶೆಟ್ಟಿ, ಶಂಕರನಾರಾಯಣ ಕಿದೂರು, ಕೋಳಾರು ಸತೀಶ್ಚಂದ್ರ ಭಂಡಾರಿ, ದಯಾನಂದ ಹೆಗ್ಡೆ, ಕ್ಯಾಂಪ್ಕೊ ಜನರಲ್ ಮೆನೇಜರ್ ರೇಶ್ಮಾ ಮಲ್ಯ, ಅಧಿಕಾರಿಗಳಾದ ವಿ. ಸುರೇಶ್, ಶ್ರೀಧರ ಶೆಟ್ಟಿ, ಪ್ರೇಮ್ ಜಿ, ಜಯರಾಂ ಶೆಟ್ಟಿ, ರಾಮಚಂದ್ರ ಕಾಮತ್, ಜಯ ಭಂಡಾರಿ ಮತ್ತು ಇತರರು ಭಾಗವಹಿಸಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel