ಕ್ಯಾಂಪ್ಕೋ ಖರೀದಿ ಮಾಡಿದ ಅಡಿಕೆ 57209.64 ಮೆಟ್ರಿಕ್ ಟನ್‍

Advertisement

ಮಂಗಳೂರು: ಅಡಿಕೆ ಬೆಳೆಗಾರರ ಹೆಮ್ಮೆಯ ಸಂಸ್ಥೆ ಕ್ಯಾಂಪ್ಕೋ ಈ ಬಾರಿ ಅಧಿಕ ಪ್ರಮಾಣದಲ್ಲಿ ಅಡಿಕೆ ಖರೀದಿ ಮಾಡಿದ್ದು ಈ ಬಾರಿ ಸಂಸ್ಥೆಯು 1589.15 ಕೋಟಿ ರೂಪಾಯಿಗಳ ಮೌಲ್ಯದ 57209.64 ಮೆ.ಟನ್‍ಅಡಿಕೆಯನ್ನು ಖರೀದಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.

Advertisement

ಇವುಗಳಲ್ಲಿ 882.61ಕೋಟಿರೂಪಾಯಿ ಮೌಲ್ಯದ 27362.90 ಮೆ.ಟನ್‍ ಕೆಂಪಡಿಕೆ ಮತ್ತು 706.54 ಕೋಟಿ ರೂಪಾಯಿ ಮೌಲ್ಯದ 29846.74 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ. 1593.40 ಕೋಟಿ ರೂಪಾಯಿಗಳ ಮೌಲ್ಯದ 54767.30 ಮೆ.ಟನ್‍ಅಡಿಕೆಯನ್ನು ಮಾರಾಟ ಮಾಡಿದೆ. ಇವುಗಳಲ್ಲಿ 826.03 ಕೋಟಿರೂಪಾಯಿ ಮೌಲ್ಯದ 25066.57 ಮೆ.ಟನ್‍ಕೆಂಪಡಿಕೆ ಮತ್ತು 767.37 ಕೋಟಿರೂಪಾಯಿ ಮೌಲ್ಯದ 29700.73 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ.

Advertisement
Advertisement

ಒಟ್ಟು ಈ ಬಾರಿ ಕ್ಯಾಂಪ್ಕೋ 2018-19 ನೇ ಸಾಲಿನಲ್ಲಿ1878 ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ ಮೂಲಕ ತನ್ನ 46 ವರ್ಷಗಳ ಸದಸ್ಯ ಕೃಷಿಕರ ಸೇವೆಯಲ್ಲಿ ಹೊಸದಾಖಲೆ ನಿರ್ಮಿಸಿದೆ.  193 ಕೋಟಿ ರೂಪಾಯಿಗಳ ಮೌಲ್ಯದ ಚಾಕಲೇಟು ಮತ್ತು ಕೊಕ್ಕೊ ಕೈಗಾರಿಕೋತ್ಪನ್ನಗಳು ಮಾರಾಟವಾಗಿದ್ದು, ಇದರಲ್ಲಿ 16.75 ಕೋಟಿ ರೂಪಾಯಿಗಳ ಮೌಲ್ಯದ 1106 ಮೆ.ಟನ್‍ ರಫ್ತು ಒಳಗೊಂಡಿರುತ್ತದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕ್ಯಾಂಪ್ಕೋ ಖರೀದಿ ಮಾಡಿದ ಅಡಿಕೆ 57209.64 ಮೆಟ್ರಿಕ್ ಟನ್‍"

Leave a comment

Your email address will not be published.


*