ಗಣೇಶೋತ್ಸವ ಹತ್ತರ ಹುತ್ತರಿ ಸಮಾರಂಭ : ಮನ ಮುದಗೊಳಿಸಿದ ಸಾಂಸ್ಕೃತಿಕ ವೈಭವ..!

September 3, 2019
2:18 PM

ಬೆಳ್ಳಾರೆ: ಮುಕ್ಕೂರು ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಮುಕ್ಕೂರು ಶಾಲಾ ವಠಾರದಲ್ಲಿ ಪ್ರದರ್ಶನಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ಮುದಗೊಳಿಸಿತು.

Advertisement

 

ಆರಂಭದಲ್ಲಿ ಮುಕ್ಕೂರು ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಪ್ರದರ್ಶನಗೊಂಡಿತ್ತು. ಅನಂತರ ಅವನಿ ಕೋಡಿಬೈಲು ಅವರಿಂದ ಶಿವನ ಕುರಿತಾದ ವರ್ಣನೆಯ ಭರತನಾಟ್ಯ ಮತ್ತು ತ್ರಿನಯನ ನಾಟ್ಯಾಲಯದ ವಿದುಷಿ ಆರಾಧತಾ ಕಾಯರ್‍ಮಾರ್ ಅವರ ಭರತನಾಟ್ಯ ಪ್ರೇಕ್ಷಕ ವರ್ಗದ ಕಣ್ಮನ ಸೆಳೆಯಿತು.

Advertisement

ಅದಾದ ಬಳಿಕ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಮತ್ತು ಅಪೇಕ್ಷಾ ಪೈ ಕಾಸರಗೋಡು ಅವರಿಂದ ಒಂದುವರೆ ಗಂಟೆಗಳ ಕಾಲ ನಡೆದ ಗಾನಯಾನ ಸಂಗೀತ ರಸಸಂಜೆ ಸಬಿಕರ ಮನ ತಣಿಸಿತು. ರಂಗದರಾಜೆ ಸುಂದರ ರೈ ಮಂದಾರ ಅವರ ನಿರ್ದೇಶನ ಮತ್ತು ಅಭಿನಯದ ಬಲೆ ತೆಲಿಪಾಲೆ ಕಾಮಿಡಿ ಎಕ್ಸ್‍ಪ್ರೆಸ್ ಕಾರ್ಯಕ್ರಮವು ನೋಡುಗರ ಪ್ರಶಂಸೆಗೆ ಪಾತ್ರವಾಯಿತು. ಸಾವಿರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಸಾಂಸ್ಕೃತಿಕ ಸಂಭ್ರಮವನ್ನು ಕಣ್ತುಂಬಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಿಕ್ಷಕ ಶಶಿಕುಮಾರ್ ಬಿ.ಎನ್. ನಿರೂಪಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತಾಳಮದ್ದಳೆ ಸಪ್ತಾಹ ಸಮಾರೋಪ | ಕುರಿಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಪಡೆವ ಕಲಾವಿದನ ಬದುಕು ಆದರ್ಶವಾಗಿರಬೇಕು
July 7, 2025
8:22 PM
by: The Rural Mirror ಸುದ್ದಿಜಾಲ
ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲಾ ಪ್ರದರ್ಶನ | ಐದು ಜನರ ಕಲಾವಿದರ ಕಲಾಕೃತಿಗಳ ಅನಾವರಣ
July 2, 2025
9:53 PM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ
June 26, 2025
7:05 AM
by: The Rural Mirror ಸುದ್ದಿಜಾಲ
ಜೂನ್ 1 : ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ‘ಈಶಾವಾಸ್ಯ ಪ್ರಶಸ್ತಿ’ | ಗೋವಿಂದ ಗಾಥೆ’ ಕೃತಿ ಅನಾವರಣ
May 31, 2025
9:45 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group