ಗಾಯಗೊಂಡ ಆನೆಗೆ ಚಿಕಿತ್ಸೆ ನಡೆಯಲಿಲ್ಲ…!

Advertisement

ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದೊಳಗಿನ ಕಾಡಿನಲ್ಲಿ ಕಾಡಾನೆಯೊಂದು ಗಾಯಗೊಂಡ ಸ್ಥಿತಿಯಲ್ಲಿ  ಬುಧವಾರ ಕಂಡುಬಂದ ಕಾಡಾನೆಗೆ ಗುರುವಾರ ಸಂಜೆಯವರೆಗೆ ಚಿಕಿತ್ಸೆ ನಡೆಯಲಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.

Advertisement

Advertisement
Advertisement

ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು ಕಾಡಿನತ್ತ ತೆರಳಿದಾಗ ಗಾಯಗೊಂಡ ಆನೆ ಪತ್ತೆಯಾಗಿತ್ತು. ಬಳಿಕ ಅರಣ್ಯ  ಸುಬ್ರಹ್ಮಣ್ಯ ಅರಣ್ಯ ಇಲಾಖೆ ಸಿಬಂದಿಗಳಿಗೆ ಮಾಹಿತಿಯನ್ನು ಸ್ಥಳೀಯರು  ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಸಿಬಂದಿಗಳು ಬುಧವಾರ ಬೆಳಗ್ಗೆ ಆನೆಯಿರುವ ಕಾಡಿನತ್ತ ತೆರಳಿ ಪರಿಶೀಲಿಸಿದರು.ಗುರುವಾರ ಮತ್ತೆ ಆಗಮಿಸಿ ಕಾಡಾನೆಗೆ ನೋವಾಗಿರುವ ಭಾಗವನ್ನು ಬೈನಾಕುಲರ್ ಮೂಲಕ ಗಮನಿಸಿದರು. ಈ ಸಂದರ್ಭ ಗಾಯವಾದ ಹಾಗೂ ಕೀವು ತುಂಬಿರುವುದು ಕಂಡುಬಂದಿದೆ. ಪಶುವೈದ್ಯರು ಸ್ಥಳಕ್ಕೆ ಆಗಮಿಸಿದರೂ ಯಾವುದೇ ಚಿಕಿತ್ಸೆ ನೀಡಲು ಸಾಧ್ಯವಾಗಿರಲಿಲ್ಲ. ಗುರುವಾರ ಆನೆಯು ಘೀಳಿಡುತ್ತಿತ್ತು ಹಾಗೂ ಅತ್ತಿತ್ತ ಚಲನೆಯಲ್ಲಿದ್ದ ಕಾರಣ ಆನೆಯ ಸಮೀಪಕ್ಕೆ ಹೋಗಲು ಸಾಧ್ಯವಾಗಲಿಲ್ಲ.

Advertisement

ಮಧ್ಯಾಹ್ನದ ಬಳಿಕ ಹಿರಿಯ ಅಧಿಕಾರಿಗಳು ಮಾಹಿತಿ ಪಡೆದರು. ಸಂಜೆಯವರೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು  ಆನೆಯ ಚಲನವಲ ಗಮನಿಸಿ ತೆರಳಿದರು.

ಶುಕ್ರವಾರ ಮತ್ತೆ ಕಾಡಾನೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆಯಲಿದೆ. ಚುಚ್ಚುಮದ್ದು ನೀಡುವ ವ್ಯವಸ್ಥೆಯ ಬಗ್ಗೆ ಕಾರ್ಯಯೋಜನೆ ನಡೆಯುತ್ತಿದೆ ಎಂದು ಅರಣ್ಯ ಇಲಾಖೆಯ ಸಿಬಂದಿಗಳು ಮಾಹಿತಿ ನೀಡಿದ್ದಾರೆ.

Advertisement

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಗಾಯಗೊಂಡ ಆನೆಗೆ ಚಿಕಿತ್ಸೆ ನಡೆಯಲಿಲ್ಲ…!"

Leave a comment

Your email address will not be published.


*