ಗಾಯಗೊಂಡ ಕಾಡಾನೆಗೆ ಚಿಕಿತ್ಸೆ

Advertisement

ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದಲ್ಲಿ  ಗಾಯಗೊಂಡ ಸ್ಥಿತಿಯಲ್ಲಿದ್ದ ಕಾಡಾನೆಗೆ ಶುಕ್ರವಾರ ಚಿಕಿತ್ಸೆ ನೀಡಲಾಗಿದೆ. ನಾಗರಹೊಳೆ ಅಭಯಾರಣ್ಯ ವನ್ಯ ಜೀವಿ ವಿಭಾಗದ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.

Advertisement

ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡು ಘೀಳಿಡುತ್ತಿದ್ದ ಕಾಡಾನೆಯನ್ನು  ಕಳೆದ ಎರಡು ದಿನಗಳಿಂದ ಸಮತಟ್ಟಾದ ಜಾಗಕ್ಕೆ ಕರೆತರಲು ಅರಣ್ಯ ಇಲಾಖಾ ಸಿಬಂದಿಗಳು ಪ್ರಯತ್ನ ಪಟ್ಟು ಶುಕ್ರವಾರ ಬೆಳಗ್ಗೆ  ಆನೆಗೆ ಚಿಕಿತ್ಸೆ ನೀಡಲು ಇಲಾಖೆಯ ಸಿಬಂದಿಗಳು ಮುಂದಾದರು. ಮಧ್ಯಾಹ್ನದ ಬಳಿಕ  ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಚಿಕಿತ್ಸೆ ಆರಂಭ ಮಾಡಲಾಯಿತು.  ಗಾಯಗೊಂಡ ಜಾಗಕ್ಕೆ ಔಷಧಿ ಸಿಂಪಡಿಸಿ ಶುಚಿತ್ವಗೊಳಿಸಿ ಚುಚ್ಚುಮದ್ದು ನೀಡಲಾಯಿತು.

Advertisement
Advertisement

Advertisement

 

Advertisement

ಚಿಕಿತ್ಸೆ ಬಳಿಕ ಸ್ವಲ್ಪ ಹೊತ್ತಿನಲ್ಲೇ  ಆನೆ ಎಚ್ಚರಗೊಂಡು ಚಲನವಲನ ಆರಂಭಿಸಿದೆ. ವೈದ್ಯರ ಸೂಕ್ತ ಚಿಕಿತ್ಸೆ ವಿಧಾನ, ಸಿಬಂದಿಗಳ ಹಾಗೂ ವಿಶೇಷವಾಗಿ ಸ್ಥಳಿಯರು ನೀಡಿದ ಸಹಕಾರದಿಂದ ಚಿಕಿತ್ಸೆ ಕಾರ್ಯಾಚರಣೆ ನಡೆಯಿತು. ಇನ್ನು ಒಂದು ವಾರಗಳ ಕಾಲ ಆನೆಯ ಆರೋಗ್ಯದ ಮೇಲೆ ಅರಣ್ಯ ಇಲಾಖೆಯ ಸಿಬಂದಿಗಳು ನಿಗಾ ಇಡಲಿದ್ದಾರೆ ಎಂದು ಕಾರ್ಯಾಚರಣೆ ಬಳಿಕ ಎ.ಸಿಎಪ್ ಆಸ್ಟ್ರಿನ್ ಪಿ ಸೋನ್ಸ್ ಪ್ರತಿಕ್ರಿಯಿಸಿದರು.

ಗುತ್ತಿಗಾರು ಪಶುವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ  ಅವರು ಚಿಕಿತ್ಸೆಗೆ ಸಹಕರಿಸಿದರು.

Advertisement
Advertisement

 

Advertisement

ಸುಳ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟ್ರಿನ್ ಪಿ ಸೋನ್ಸ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿ ತ್ಯಾಗರಾಜ್ ಮತ್ತು ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು, ಸಿಬಂದಿಗಳು ಕಾಡಾನೆ ಚಿಕಿತ್ಸೆಯಲ್ಲಿ  ತೊಡಗಿದರು. ಇಲಾಖೆಯ ಸಿಬಂದಿಗಳಾದ  ಸಂತೋಷ್, ಸುಬ್ರಹ್ಮಣ್ಯ ಹಾಗೂ ಪಂಜ ವಲಯದ ಸಿಬಂದಿಗಳು ಕಳೆದೆರಡು ದಿನಗಳಿಂದ ಸತತ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

Advertisement

 

Advertisement

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಗಾಯಗೊಂಡ ಕಾಡಾನೆಗೆ ಚಿಕಿತ್ಸೆ"

Leave a comment

Your email address will not be published.


*