ಗುತ್ತಿಗಾರು ಕಮಿಲ ಬಳ್ಪ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

March 8, 2020
8:18 PM

ಗುತ್ತಿಗಾರು: ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಭಾನುವಾರ ಸಂಜೆ ನೆರವೇರಿತು. ಶಾಸಕ ಎಸ್ ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.

Advertisement
Advertisement
Advertisement

1.20 ಕೋಟಿ ರೂಪಾಯಿಯಲ್ಲಿ  ಅಭಿವೃದ್ಧಿಗೊಳ್ಳುವ ರಸ್ತೆಯು  ಗುತ್ತಿಗಾರಿನಿಂದ ದೇವಸ್ಯದವರೆಗೆ  ಲೋಕೊಪಯೋಗಿ ಇಲಾಖೆಯ ಮೂಲಕ ಕಾಂಕ್ರೀಟೀಕರಣ ಹಾಗೂ ಕಮಿಲ ಶಾಲೆಯವರೆಗೆ ಜಿಪಂ ಮೂಲಕ ಕಾಂಕ್ರೀಟೀಕರಣ ಹಾಗೂ ಕಮಿಲದಲ್ಲಿ  ಕಾಂಕ್ರೀಟೀಕರಣ ಮಾಡಿ ನಂತರ ಉಳಿಕೆ ಭಾಗವನ್ನು ಸುಗ್ರಾಮ ಯೋಜನೆಯ ಮೂಲಕ ಅಥವಾ ಬೇರೆ ಯಾವುದಾದರೂ ಅನುದಾನದ ಮೂಲಕ ದುರಸ್ತಿ ಮಾಡಿಸುವುದಾಗಿ ಶಾಸಕ  ಅಂಗಾರ  ಹೇಳಿದರು.

Advertisement

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಅಂಗಾರ, ಗ್ರಾಮಗಳ ಅಭಿವೃದ್ಧಿ ಕಡೆಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಆದರೆ ಯಾವ ಯೋಜನೆಗಳು ಕೂಡಾ ತಾತ್ಕಾಲಿಕವಾಗಿ ಆಗಿರದೆ ಶಾಶ್ವತವಾಗಿರಬೇಕು ಎಂಬ ಕಾರಣಕ್ಕೆ ಕೆಲವೊಮ್ಮೆ ವಿಳಂಬ ಆಗಬಹುದು.ಆದರೆ ಅದನ್ನೇ ಗೇಲಿ ಮಾಡುವುದು ಹಾಗೂ ಅಪಹಾಸ್ಯ ಮಾಡುವುದು ಸಮಂಜಸವಲ್ಲ ಎಂದ ಅವರು ಅಭಿವೃದ್ಧಿ ಮಾಡುವುದಕ್ಕೆ ನಾವೇ ಆಗಬೇಕಾಗಿದೆ. ಹೀಗಾಗಿ ಏನೇ ಟೀಕೆಗಳು ಬಂದರೂ ಅಭಿವೃದ್ಧಿ ಕಾರ್ಯದ ಮೂಲಕವೇ ಉತ್ತರ ನೀಡಲಾಗುವುದು ಎಂದು ಅಂಗಾರ ಹೇಳಿದರು.

ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಅನೇಕ ಸಮಯದ ಬೇಡಿಕೆಯಾಗಿದ್ದ ಕಮಿಲ-ಬಳ್ಪ ರಸ್ತೆ ಅಭಿವೃದ್ದಿ ಮಾತ್ರವಲ್ಲ ಶಾಶ್ವತವಾದ ಕಾಮಗಾರಿಯನ್ನು  ಈಗ ಶಾಸಕರು ಅನುದಾನ ನೀಡಿ ಮಾಡಲಾಗುತ್ತಿದೆ. ಹೀಗಾಗಿ ಕ್ಷುಲ್ಲಕ ಟೀಕೆ, ಅಬಿವೃದ್ದಿ ಕಾರ್ಯಗಳಿಗೆ ಅಡ್ಡ ಮಾಡುವುದರ ಬದಲಾಗಿ ಸಹಕಾರ ಮಾಡಬೇಕಿದೆ ಎಂದರು.

Advertisement

ಈ ಸಂದರ್ಭ  ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ತಾ.ಪಂ. ಸದಸ್ಯೆ ಯಶೋಧ ಬಾಳೆಗುಡ್ಡೆ, ಗ್ರಾ. ಪಂ. ಅಧ್ಯಕ್ಷ ಅಚ್ಚುತ ಗುತ್ತಿಗಾರು,  ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ,  ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಮುಂಡೋಡಿ, ಗುತ್ತಿಗಾರು ಗ್ರಾ.ಪಂ. ಸದಸ್ಯರಾದ ಜಯಪ್ರಕಾಶ್ ಮೊಗ್ರ,   ರಾಕೇಶ್ ಮೆಟ್ಟಿನಡ್ಕ, ಶ್ರೀದೇವಿ ಕೊಂಬೆಟ್ಟು, ಭಾಗೀರಥಿ ಕಾಜಿಮಡ್ಕ, ಯಮಿತಾ ಪೂರ್ಣಚಂದ್ರ , ಜಿಪಂ ಇಂಜಿನಿಯರ್ , ದೇವಿಪ್ರಸಾದ್ ಚಿಕ್ಮುಳಿ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |
November 23, 2024
5:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror