ಗೆಳೆತನಕ್ಕೊಂದು ವ್ಯಾಖ್ಯಾನ

Advertisement
Advertisement
ಮಗು ಬೆಳೆಯುತ್ತಾ ಸುತ್ತಲಿನ ‌ಪರಿಸರವನ್ನು ಗಮನಿಸಲು ತೊಡಗುತ್ತದೆ. ತನಗೆ ಹತ್ತಿರದವರನ್ನು ಇಷ್ಟಪಡುತ್ತದೆ, ನೆಚ್ಚಿಕೊಳ್ಳುತ್ತದೆ. ಶಾಲಾ ಪರಿಸರ ವನ್ನು ಪ್ರವೇಶಿಸುವ ಮಗು ಪರಿಚಿತ ಮುಖದ ಹುಡುಕಾಟದಲ್ಲಿ ತೊಡಗುತ್ತದೆ. ಯಾವುದೋ ಒಂದು ಮುಖದಲ್ಲಿ ತನ್ನ ತಂಗಿಯೋ, ಅಕ್ಕನೋ , ತಮ್ಮನೋ, ಅಣ್ಣನೋ, ಗೆಳೆಯನೋ ಕಂಡುಬಿಡುತ್ತದೆ. ಮುಖದಲ್ಲಿ ಒಂದು ಮಂದಹಾಸ ಮೂಡುತ್ತದೆ, ಗೆಳೆತನ ಹುಟ್ಟುತ್ತದೆ.
ಕೆಲವೊಮ್ಮೆ ಪುಟ್ಟ ಮಕ್ಕಳಲ್ಲಿ ನಿನ್ನ ಗೆಳೆಯರು ಯಾರು ಎಂದು ಕೇಳಿದಾಗ ತರಗತಿಗಳಲ್ಲಿ ಹತ್ತಿರ ಕುಳಿತವರ ಹೆಸರು  ಹೇಳಿ ಬಿಡುತ್ತಾರೆ. ಯಾಕೆ ಇಷ್ಟ ಅಂದರೆ ಆಕೆ ಚೆಂದ ಇದ್ದಾಳೆ, ಅವಳು ಚಾಕೊಲೇಟ್ ಕೊಡುತ್ತಾಳೆ ಹೀಗೆ  ಮನಸಿಗೆ ಏನು ಅನ್ನಿಸುತ್ತದೋ ಅದನ್ನು ಹೇಳಿ ಮಗು ಹೇಳಿ ಬಿಡುತ್ತವೆ.
ಯಾವಾಗಲೂ ಚಟುವಟಿಕೆ ಯಲ್ಲಿರುವವರಿಗೆ ಗೆಳೆಯರು ಜಾಸ್ತಿ. ಹೋದ ಬಂದಲ್ಲೆಲ್ಲಾ ಅವರಿಗೆ ಮಿತ್ರರೇ. ಕೆಲವರು ಕಲ್ಲನ್ನೂ ಮಾತಾಡಿಸುವಂತವರಿರುತ್ತಾರೆ.  ಸ್ವಲ್ಪ ಮಾತು ಜಾಸ್ತಿ ಇದ್ದು ನೋಡಲೂ  ಸ್ಮಾರ್ಟ್ ಆಗಿ ಇದ್ದರಂತೂ ಕೇಳಲೇ ಬೇಡಿ . ಬೇಡ ಬೇಡವೆಂದರೂ ಹೋದ ಕಡೆಗಳಲ್ಲಿ ಗೆಳೆಯರಾಗಿ ಬಿಡುತ್ತಾರೆ.
ನಾವು ಬಾಲ್ಯ ಸ್ನೇಹಿತರು ಎಂದು ಹೆಮ್ಮೆಯಿಂದ ಹೇಳುವ ಕೆಲವೇ ಕೆಲವು ಗೆಳೆಯರು ನಮ್ಮ ಸುತ್ತ ಮುತ್ತಲಿರುತ್ತಾರೆ. ಅವರ ಭಾವನೆಗಳೂ ಒಂದೇ, ಒಬ್ಬರಿಗೊಬ್ಬರು ಕನಸುಗಳನ್ನು ಹಂಚಿಕೊಂಡಿ ರುತ್ತಾರೆ. ಬಾಳಿನ ಪಥಗಳು ಬೇರೆ ಬೇರೆಯಾದರೂ  ಮನಸುಗಳು ಒಂದೇ ಆಗಿರುತ್ತವೆ. ಬಾಳಿನಲ್ಲಿ ಎದುರಾಗುವ ಕಷ್ಟ, ಸುಖಗಳನ್ನು ಹಂಚಿಕೊಳ್ಳು ವಷ್ಟು ಸಲುಗೆ ಬೆಳೆಸಿಕೊಂಡಿರುತ್ತಾರೆ. ಬಾಯಿಬಿಟ್ಟು ಹೇಳದಿದ್ದರೂ ಕಷ್ಟಗಳ ಸಂಧರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಆರಾಮಾವಾಗಿದ್ದು ಬಿಡುತ್ತಾರೆ.
ಜೀವನದ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಿ ದ್ದಂತೆ ಬೇರೆ ಬೇರೆ ಮುಖಗಳು ಜೊತೆಯಾಗುತ್ತವೆ. ಗುರಿಗಳು ಬೇರೆಯಾಗುತ್ತವೆ, ಬದುಕಿನ ದೃಷ್ಠಿಕೋನ ಗಳು  ಬದಲಾಗುತ್ತದೆ, ಆದ್ಯತೆಗಳು ಬದಲಾಗುತ್ತವೆ. ಜೀವನದ ಆವಶ್ಯಕತೆಗಳಿಗನುಗುಣವಾಗಿ ಆ ಕ್ಷಣ ದಲ್ಲಿ  ಒಂದಾಗುತ್ತಾರೆ, ದಿನ ಕಳೆದಂತೆ ಮಿತ್ರರಾಗು ತ್ತಾರೆ. ತಮ್ಮ ತಮ್ಮ ಅಭಿರುಚಿಗಳಲ್ಲಿ ಸಾಮ್ಯತೆಯಿದ್ದರೆ ಯಶಸ್ವಿ ಗೆಳೆಯರಾಗುತ್ತಾರೆ, ಇಲ್ಲವಾದರೆ ಅಲ್ಲಿ ಗೆ ಗೆಳೆತನವೊಂದು ಮುಗಿದಂತೆ.
ಶಾಲಾ ಕಾಲೇಜುಗಳಲ್ಲಿ  ಗೆಳೆತನ ಪಕ್ವವಾದುದಾದರೆ  ಬಿಡಿಸಲಾಗದ ನಂಟಾಗುತ್ತದೆ. ಮುಂದೆ ತಮ್ಮ ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿದ್ದರೂ ಒಂದು ಫೋನ್ ಕಾಲ್, ವರ್ಷಕ್ಕೊಂದು ಭೇಟಿ ತಪ್ಪಿಸು ವುದಿಲ್ಲ. ಅಲ್ಲಿ ಬಣ್ಣ, ದುಡ್ಡು , ಜಾತಿ ಯಾವುದೂ ಪ್ರಭಾವ ಬೀರುವುದಿಲ್ಲ. ಕೇವಲ ಗೆಳೆತನ ಮಾತ್ರ ಮೂಡುತ್ತದೆ. ನಂಬಿಕೆ ಬೆಳೆಯುತ್ತದೆ.  ಈಗ ಬಿಡಿ, ಸೋಷಿಯಲ್ ಮೀಡಿಯಾದಿಂದಾಗಿ  ಯಾರು ದೂರವಲ್ಲ, ಹಾಗೆಂದೂ ಹತ್ತಿರವೂ ಅಲ್ಲ. ಅವರವರಷ್ಟಕೆ ಎಲ್ಲರೂ ಬ್ಯುಸಿ . ಆದರೂ ಮೊಬೈಲ್ನಲ್ಲಿ  ಎಲ್ಲರೂ ಉತ್ತರಿಸಿ ಬಿಡುತ್ತಾರೆ. ಅಲ್ಲಿ ಎಲ್ಲರೂ ಆಪ್ತರೇ.  ಎಲ್ಲರೂ ಮಿತ್ರರೇ.
ಬರೆದಷ್ಟು ಮುಗಿಯದ , ನೆನೆದಷ್ಟು  ಖುಷಿಯಾಗುವ ,  ಮಾತಾಡಿದಷ್ಟೂ  ಇನ್ನೂ ಮಾತಾನಾಡಬೇಕೆನಿಸುವ  ವಿಷಯಕ್ಕೆ  ವಸ್ತುವೇ ಗೆಳೆತನ.
Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಗೆಳೆತನಕ್ಕೊಂದು ವ್ಯಾಖ್ಯಾನ"

Leave a comment

Your email address will not be published.


*