ಪುತ್ತುರು: ಪುತ್ತೂರಿನ ಕೆಮ್ಮಿಂಜೆಯಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸಂವಿಧಾನ ದಿನಾಚರಣೆಯನ್ನು26 ರಂದು ಆಚರಿಸಲಾಯಿತು. ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಎ. ಸಿ. ಜೆ. ಎಮ್. ಅಧ್ಯಕ್ಷರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರಿನ ಮಂಜುನಾಥ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ವಿಶೇಷ ಅತಿಥಿಗಳಾಗಿ ಪ್ರಧಾನ ಹಿರಿಯ ನ್ಯಾಯಾಧೀಶರು ಮತ್ತು ಜೆ ಎಮ್ ಎಫ್ ಸಿ ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರಿನ ಪ್ರಕಾಶ್ ಪಿ. ಎಮ್ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರಿನ ವಕೀಲರು ಹಾಗೂ ಸದಸ್ಯರಾದ ಉದಯ ಶಂಕರ್ ಶೆಟ್ಟಿ, ಪುತ್ತೂರಿನ ಹೆಚ್ಚುವರಿ ಸರಕಾರಿ ಪ್ಲೀಡರ್ ಪ್ರವೀಣ್ ಕುಮಾರ್, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪುತ್ತೂರಿನ ಪ್ರಾಂಶುಪಾಲರಾದ ಪ್ರೋ. ಕ್ಷೇವಿಯರ್ ಡಿ’ಸೋಜರವರು ಭಾಗವಹಿಸಿದ್ದರು. ಪುತ್ತೂರಿನ ವಕೀಲರ ಸಂಘದ ಅಧ್ಯಕ್ಷರಾದ ಮನೋಹರ್ ಕೆ. ವಿ, ಸುರೇಶ್ ರೈ, ಕಾರ್ಯದರ್ಶಿಗಳಾದ ಮಂಜುನಾಥ್ ಎನ್ ಎಸ್, ಸಹಕಾರ್ಯದರ್ಶಿ ಮಮತಾ ಸುವರ್ಣ, ಇವರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಡಾ. ಎಮ್. ಜಿ ನಾಯಕ್ ರವರು ಅತಿಥಿಗಳನ್ನು ಸ್ವಾಗತಿಸುತ್ತಾ ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದ ಬಗ್ಗೆ ಪ್ರತಿಜ್ಞಾವಿಧಿ ಭೋಧಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮವನ್ನು ಉಧ್ಘಾಟಿಸಿದ ಮಂಜುನಾಥ್ ಮಾತನಾಡುತ್ತಾ ಭಾರತವೊಂದು ಜಾತ್ಯತೀತ ರಾಷ್ಟ್ರವಾಗಿದ್ದು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆಯೆಂದು ತಿಳಿಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕಾನಂದ ಕಾನೂನು ವಿದ್ಯಾಲಯ ಪುತ್ತೂರಿನ ಕಾನೂನು ಸೇವೆ ನಿರ್ದೇಶಕರಾದ ಡಾ. ಬಿ ಕೆ ರವೀಂದ್ರರವರು, “ಭಾರತದ ಸಂವಿಧಾನ ಮತ್ತು ಪ್ರಜೆಗಳ ಕರ್ತವ್ಯ” ಎನ್ನುವ ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸಿದರು. ಭಾರತದ ಸಂವಿಧಾನವು ಪ್ರಪಂಚಕ್ಕೇ ಮಾದರಿಯಾಗಿದ್ದು ಪ್ರಜೆಗಳ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳಿಗೆ ಮಹತ್ವ ಕೊಟ್ಟಿದೆ. ಭಾರತದ ಸಂವಿಧಾನದೊಂದಿಗೆ ಅಮೆರಿಕಾ, ರಷ್ಯಾ ಹಾಗು ಫ್ರಾನ್ಸ್ ಸಂವಿಧಾನಗಳ ಬಗೆಗೂ ಮಾಹಿತಿ ನೀಡಿ ಅವುಗಳು ಪ್ರಜೆಗಳಿಗೆ ನೀಡಿದ ಹಕ್ಕುಗಳ ಬಗ್ಗೆ ತಿಳಿಹೇಳಿದರು. ಭಾರತದ ಸಂವಿಧಾನವು ಯಾವುದೇ ಬೇಧ ಭಾವ ಮಾಡದೇ ಸಮಾನ ನಾಗರಿಕ ಹಕ್ಕುಗಳನ್ನು ನೀಡಿದ್ದು ಅವುಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮನೋಹರ್ ಕೆವಿ, ಉದಯಶಂಕರ್ ಶೆಟ್ಟಿ ಹಾಗು ಪ್ರೊ. ಕ್ಷೇವಿಯರ್ ಡಿಸೋಜಾ ರವರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ. ವನಿತಾ ಕೆ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಂಸ್ಥೆಯ ಹಿರಿಯ ತಾಂತ್ರಿಕ ಅಧಿಕಾರಿ ಪ್ರಕಾಶ್ ಜಿ ಭಟ್ ರವರು ಕಾರ್ಯಕ್ರಮ ನಿರೂಪಿಸಿದರು.