ಗೋಸ್ವರ್ಗದಲ್ಲಿ ಮಕ್ಕಳ ಸಮ್ಮೇಳನ  

May 10, 2019
7:30 PM
ಮಂಗಳೂರು:  ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣವಿದೆ, ಸಾತ್ವಿಕತೆಯಿದೆ. ಇಂತಹ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ, ಶಕ್ತಿ ದೊರೆಯುತ್ತದೆ. ಗೋವು ನಮಗೆ ಹಾಲಿನ ಮೂಲಕ ಪ್ರೀತಿಯ ಧಾರೆಯೆರೆಯುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ
 ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.
ಅವರು  ಶಂಕರ ಪಂಚಮೀ ಉತ್ಸವ ನಿಮಿತ್ತ ಗೋಸ್ವರ್ಗದಲ್ಲಿ ನಡೆದ “ಮಕ್ಕಳ ಮಹಾಸಮ್ಮೇಳನ”ದಲ್ಲಿ ಆಶಿರ್ವಚನ ನೀಡಿದರು.  ಮಕ್ಕಳಿಗೆ ಹಾಲು ಜೇನು ಇಷ್ಟ. ಗೋವು ಹಾಲಿನಂತೆ, ಮಕ್ಕಳು ಜೇನಿನಂತೆ, ಇವೆರಡರ ಸಮಾಗಮವು ಇಂದು ಗೋಸ್ವರ್ಗದಲ್ಲಿ ಸಾಕ್ಷಾತ್ಕಾರವಾಗಿದೆ. ಗೋವುಗಳು ಮಕ್ಕಳು ಒಂದಾಗಬೇಕು, ಮಕ್ಕಳಲ್ಲಿ ಗೋವಿನ ಕುರಿತು ಪ್ರೀತಿ ಹೆಚ್ಚಬೇಕು ಎಂದು ಶ್ರೀಗಳು ಆಶಯ  ವ್ಯಕ್ತಪಡಿಸಿ ಮಕ್ಕಳೊಂದಿಗೆ ಆತ್ಮೀಯ ಸಂವಾದ ನಡೆಸಿಕೊಟ್ಟರು.
 ಡಿ.ಎಸ್.ಹೆಗಡೆ ದೇಶೀಯ ಆಕಳ ಹಾಲಿನಲ್ಲಿಯ ವಿವಿಧ ಅಂಶಗಳ ಕುರಿತು ವಿವರಣೆ ನೀಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಕುಮಾರಸ್ವಾಮಿ ವರ್ಮುಡಿ, ಆರ್.ಎಸ್.ಹೆಗಡೆ ಹರಗಿ, ಆರ್.ಎಸ್.ಎಸ್‍ ನ  ಅ.ಪು.ನಾರಾಯಣ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು.
ಮಹಾಮಂಡಲ ವ್ಯಾಪ್ತಿಯ ಮಂಗಳೂರು, ಕಾಸರಗೋಡು, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಕ್ಕಳು ವಿವಿಧ ಆಟ-ಪಾಠಗಳಲ್ಲಿ ತನ್ಮಯತೆ, ಉತ್ಸಾಹದಿಂದ ಪಾಲ್ಗೊಂಡು ಹರ್ಷೋದ್ಘಾರ ಮಾಡಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ | ಕಠಿಣ ಕ್ರಮಕ್ಕೆ  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರ್ದೇಶನ
July 17, 2025
10:13 PM
by: The Rural Mirror ಸುದ್ದಿಜಾಲ
ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ | ಮಳೆಗೆ ಎಲ್ಲೆಲ್ಲಿ ಏನೇನಾಯ್ತು…? |
July 17, 2025
8:51 PM
by: The Rural Mirror ಸುದ್ದಿಜಾಲ
ಗ್ರಾಮೀಣಾಭಿವೃದ್ಧಿಯೇ ನಮ್ಮ ಗುರಿ ಎಂದ ಶಾಲಿನಿ ರಜನೀಶ್
July 16, 2025
9:24 PM
by: The Rural Mirror ಸುದ್ದಿಜಾಲ
ಕಳಪೆ ಗೊಬ್ಬರ ಮಾರಿದ್ದ ಆರೋಪ | ರಾಣೆಬೆನ್ನೂರಿನಲ್ಲಿ ಕೇಸು ದಾಖಲು
July 16, 2025
8:52 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group