ಮಂಗಳೂರು: ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣವಿದೆ, ಸಾತ್ವಿಕತೆಯಿದೆ. ಇಂತಹ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ, ಶಕ್ತಿ ದೊರೆಯುತ್ತದೆ. ಗೋವು ನಮಗೆ ಹಾಲಿನ ಮೂಲಕ ಪ್ರೀತಿಯ ಧಾರೆಯೆರೆಯುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ
ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.
ಅವರು ಶಂಕರ ಪಂಚಮೀ ಉತ್ಸವ ನಿಮಿತ್ತ ಗೋಸ್ವರ್ಗದಲ್ಲಿ ನಡೆದ “ಮಕ್ಕಳ ಮಹಾಸಮ್ಮೇಳನ”ದಲ್ಲಿ ಆಶಿರ್ವಚನ ನೀಡಿದರು. ಮಕ್ಕಳಿಗೆ ಹಾಲು ಜೇನು ಇಷ್ಟ. ಗೋವು ಹಾಲಿನಂತೆ, ಮಕ್ಕಳು ಜೇನಿನಂತೆ, ಇವೆರಡರ ಸಮಾಗಮವು ಇಂದು ಗೋಸ್ವರ್ಗದಲ್ಲಿ ಸಾಕ್ಷಾತ್ಕಾರವಾಗಿದೆ. ಗೋವುಗಳು ಮಕ್ಕಳು ಒಂದಾಗಬೇಕು, ಮಕ್ಕಳಲ್ಲಿ ಗೋವಿನ ಕುರಿತು ಪ್ರೀತಿ ಹೆಚ್ಚಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿ ಮಕ್ಕಳೊಂದಿಗೆ ಆತ್ಮೀಯ ಸಂವಾದ ನಡೆಸಿಕೊಟ್ಟರು.
ಡಿ.ಎಸ್.ಹೆಗಡೆ ದೇಶೀಯ ಆಕಳ ಹಾಲಿನಲ್ಲಿಯ ವಿವಿಧ ಅಂಶಗಳ ಕುರಿತು ವಿವರಣೆ ನೀಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಕುಮಾರಸ್ವಾಮಿ ವರ್ಮುಡಿ, ಆರ್.ಎಸ್.ಹೆಗಡೆ ಹರಗಿ, ಆರ್.ಎಸ್.ಎಸ್ ನ ಅ.ಪು.ನಾರಾಯಣ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು.



ಮಹಾಮಂಡಲ ವ್ಯಾಪ್ತಿಯ ಮಂಗಳೂರು, ಕಾಸರಗೋಡು, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಕ್ಕಳು ವಿವಿಧ ಆಟ-ಪಾಠಗಳಲ್ಲಿ ತನ್ಮಯತೆ, ಉತ್ಸಾಹದಿಂದ ಪಾಲ್ಗೊಂಡು ಹರ್ಷೋದ್ಘಾರ ಮಾಡಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel