ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾ.ಪಂ.ಸದಸ್ಯನ ಜವಾಬ್ದಾರಿ ಮಹತ್ತರವಾದುದು- ಕೋಟ ಶ್ರೀನಿವಾಸ ಪೂಜಾರಿ

Advertisement
Advertisement

ಬಾಳಿಲ: ತ್ರಿಸ್ತರ ಪಂಚಾಯತ್ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯತ್ ಸದಸ್ಯನ ಜವಾಬ್ದಾರಿ ಮಹತ್ತರವಾದುದು. ಗ್ರಾಮದ ಅಭಿವೃದ್ಧಿಯಲ್ಲಿ  ಆತನ ಜವಾಬ್ದಾರಿ ಮಹತ್ವದ್ದಾಗಿದೆ.  ಗ್ರಾಮ ಪಂಚಾಯತ್‍ಗಳು ಇಡೀ ಆಡಳಿತ ವ್ಯವಸ್ಥೆಯ ತಳಹದಿ ಎಂದು ಕರ್ನಾಟಕ ವಿಧಾನ ಪರಿಷತ್‍ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಬಾಳಿಲ ಗ್ರಾಮ ಪಂಚಾಯತ್‍ನ ನೂತನ ಕಟ್ಟಡ ಮತ್ತು ಆರ್.ಜಿ.ಎಸ್.ವೈ ಅನುದಾನದಿಂದ ನಿರ್ಮಾಣಗೊಂಡ ಮಿನಿ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಿನಿ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಜನರ ಪ್ರಥಮ ಪರಿಹಾರ ಕೇಂದ್ರ. ಸಾರ್ವಜನಿಕರಿಗೆ ಪೂರಕವಾಗುವ ರೀತಿಯಲ್ಲಿ ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸಬೇಕು ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಸದ ನಳಿನ್‍ಕುಮಾರ್ ಕಟೀಲ್ ಗ್ರಾಮ ಪಂಚಾಯತ್ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಆಡಳಿತ ಹಾಗು ಪ್ರತಿಪಕ್ಷ ಜೊತೆಯಾಗಿ ಕಾರ್ಯಪ್ರವೃತ್ತರಾದಲ್ಲಿ ಆ ಗ್ರಾಮ ಆದರ್ಶ ಗ್ರಾಮವಾಗುವುದು. ಕ್ರಿಯಾತ್ಮಕ ರಾಜಕಾರಣವಿದ್ದಲ್ಲಿ ಅಭಿವೃದ್ಧಿಯ ಸಮೃದ್ದಿಯಾಗುವುದು ಎಂದರು.
ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೂನತ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಟ್ಟಡ ನಿರ್ಮಾಣಕ್ಕೆ ಸ್ಥಳದಾನಗೈದ ಕೆದ್ಲ ನರಸಿಂಹ ಭಟ್ ಹಾಗು ಗುತ್ತಿಗೆದಾರ ಶಬ್ಬೀರ್ ಅವರನ್ನು ಬಾಳಿಲ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿಸಲಾಯಿತು.

Advertisement
Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಅಂಗಾರ ವಹಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್ ಮನ್ಮಥ, ಪುಷ್ಪಾವತಿ ಬಾಳಿಲ, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದ ಎಸ್.ರೈ, ಸದಸ್ಯೆ ಜಾಹ್ನವಿ ಕಾಂಚೋಡು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆರ್.ಮಧುಕುಮಾರ್, ಸುಳ್ಯ ಪಂಚಾಯತ್‍ರಾಜ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಹನುಮಂತರಾಯಪ್ಪ, ಕಳಂಜ ಬಾಳಿಲ ಪ್ರಾ. ಕೃ.ಪ.ಸ ಸಂಘದ ಅಧ್ಯಕ್ಷ ಸುಧಾಕರ ರೈ ಎ.ಎಂ, ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷೆ ಹೇಮಲತಾ ಕಾಯಾರ ಉಪಸ್ಥಿತರಿದ್ದರು.
ರವೀಂದ್ರ ಸ್ವಾಗತಿಸಿ, ರಮೇಶ್ ರೈ ಅಗಲ್ಪಾಡಿ ವಂದಿಸಿದರು. ಯು.ರಾಧಾಕೃಷ್ಣ ರಾವ್ ಪ್ರಸ್ತಾವನೆಗೈದು, ಪಿಡಿಒ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.

 

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾ.ಪಂ.ಸದಸ್ಯನ ಜವಾಬ್ದಾರಿ ಮಹತ್ತರವಾದುದು- ಕೋಟ ಶ್ರೀನಿವಾಸ ಪೂಜಾರಿ"

Leave a comment

Your email address will not be published.


*