ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಮುದುವದಲ್ಲಿರುವ ಸಂಘದ ಕೇಂದ್ರ ಕಚೇರಿ ಪರಿಸರದಲ್ಲಿ ಗೇರು ಮತ್ತು ವಿವಿಧ ತಳಿಯ ಸಸಿಗಳ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ದ.ಕ.ಹಾಲು ಒಕ್ಕೂಟದ ನಿರ್ದೇಶಕರಾದ ನಾರಾಯಣ ಪ್ರಕಾಶ್ ಮತ್ತು ಎಸ್.ಬಿ.ಜಯರಾಮ ರೈ ಬಳಜ್ಜ , ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಮಾಧವಿ ಕೋಡಂದೂರು,ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ ಅವರು ತೋಟ ನಿರ್ಮಾಣಕ್ಕೆ ಚಾಲನೆ ನೀಡಿ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಯೋಜನೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಪುತ್ತೂರು ಭೂ ಅಭಿವೃದ್ದಿ ಬ್ಯಾಂಕ್‍ನ ನಿರ್ದೇಶಕ,ಗ್ರಾ.ಪಂ.ಸದಸ್ಯ ಗಣೇಶ್ ಉದನಡ್ಕ, ದೇವಯ್ಯ ಖಂಡಿಗ,ಉದ್ಯಮಿ ಪ್ರದೀಪ್ ಬೊಬ್ಬೆಕೇರಿ, ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ರಾಮಕೃಷ್ಣ ಭಟ್,ಕಾಣಿಯೂರು ಗ್ರಾ.ಪಂ.ಸದಸ್ಯ ದಿನೇಶ್ ಘೌಡ ಇಡ್ಯಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹರೀಶ್ ಅಂಬುಲ,ಕಮಲಾ ಮುದುವ,ರತ್ನಾ ಮುದುವ,ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಇಡ್ಯಡ್ಕ,ನಿರ್ದೇಶಕರಾದ ಕಾಂತ ಪರವ,ಮಾಧವ ಎಣ್ಮೂರು,ಜಯಂತ್,ಸದಾನಂದ,ಪರಮೇಶ್ವರ ,ಉಮೇಶ್,ರಾಜೀವಿ,ಸುಂದರ ಕೀಲೆ, ಹಾಗೂ ವಿಶ್ವನಾಥ ಖಂಡಿಗ, ನಿಶ್ಚಿತ್ ,ತಿಲಕ್,ಪ್ರಶಾಂತ್,ತೇಜಸ್ವಿನಿ, ಹರಿಣಿ ಮೊದಲಾದವರು ಉಪಸ್ಥಿತರಿದ್ದರು.
ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಸ್ವಾಗತಿಸಿ, ಕಾರ್ಯದರ್ಶಿ ದಮಯಂತಿ ಮುದುವ ವಂದಿಸಿದರು.