ಚಿಕಿತ್ಸೆಗೊಂಡರೂ ಕಾಡಾನೆಗೆ ತಪ್ಪದ ಸಂಕಟ….! , ಮತ್ತೆ ಚಡಪಡಿಸುತ್ತಿರುವ ಕಾಡಾನೆ

Advertisement

ಬಾಳುಗೋಡು: ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗೆ ಒಳಗಾಗಿದ್ದ ಕಾಡಾನೆಗೆ ಮತ್ತೆ ಸಂಕಟಕ್ಕೆ ಒಳಗಾಗಿದೆ. ಕಾಡಿನಲ್ಲಿದ್ದ ಕಾಡಾನೆಗೆ ಇನ್ನೊಂದು ಆನೆ ತಿವಿದು ಮತ್ತೆ ನೋವಿಗೆ ಒಳಗಾಗಿದೆ. ನೋವಿನಿಂದ ಇದ್ದ ಆನೆಗೆ ಮತ್ತೆ ಸಂಕಟ ಎದುರಾಗಿದೆ.

Advertisement

ಬಾಳುಗೋಡು ಮೀಸಲು ಅರಣ್ಯದಲ್ಲಿ ಮುಂಗಾಲಿಗೆ ಗಾಯಗಳಾಗಿದ್ದ ಸ್ಥಿತಿಯಲ್ಲಿದ್ದ ಆನೆಗೆ  ಚಿಕಿತ್ಸೆ ನೀಡಿ ಬಿಡಲಾಗಿತ್ತು. ಅರಣ್ಯ ಇಲಾಖೆಯ ಸಿಬಂದಿಗಳು ನಂತರ ಆನೆಯ ಚಲನವಲನ ಗಮನಿಸುತ್ತಿದ್ದರು. ಇದೀಗ ಭಾನುವಾರ ಮತ್ತೆ ಇನ್ನೊಂದು ಕಾಡಾನೆ ತಿವಿದು ಗಾಯಗೊಂಡಿರುವ ಬಗ್ಗೆ ಅರಣ್ಯ ಇಲಾಖಾ ಸಿಬಂದಿಗಳು ಮಾಹಿತಿ ನೀಡಿದ್ದಾರೆ.

Advertisement

 

Advertisement

ಈ ವೇಳೆ ಸ್ಥಳೀಯರು ಆನೆಯನ್ನು ಶಬ್ಧ ಮಾಡಿ ಓಡಿಸುವ ಪ್ರಯತ್ನ ನಡೆಸಿ ಗಾಯಗೊಂಡ ಆನೆಯನ್ನು ಧಾಳಿಯಿಂದ ರಕ್ಷಿಸುವ ಪ್ರಯತ್ನಿಸಿದರು. ಈ ವೇಳೆ ಆನೆ ಕಾಡಿನ ಆನೆ ಸ್ಥಳೀ ಯರನ್ನು ಬೆನ್ನಟ್ಟಿದೆ.  ಗಾಯಗೊಂಡಿದ್ದ ಆನೆಯ ದೇಹದಿಂದ ರಕ್ತ ಸೋರಿಕೆಯಾಗುತ್ತಿತ್ತು ಮತ್ತು ನೆಲದಲ್ಲಿ ಭಾರಿ ಪ್ರಮಾಣದಲ್ಲಿ ರಕ್ತ ಚೆಲ್ಲಿತ್ತು. ಧಾಳಿಯಿಂದ ಬೆದರಿದ ಆನೆ ಕಾಡಿನತ್ತ ತೆರಳಲು ಹಿಂದೇಟು ಹಾಕುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಗಾಯಗೊಂಡ ಆನೆ ಮೇಲೆ ಸ್ಥಳೀಯರು  ಪ್ರೀತಿ ತೋರುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆನೆಗೆ ಆಹಾರದ ಕೊರತೆ ಆಗದಂತೆ ಬೈನೆಮರದ ಮೇವನ್ನು ಸ್ಥಳಿಯರು ಕಾಡಿಗೆ ತೆಗೆದುಕೊಂಡು ಹೋಗಿ ಆನೆಗೆ ಪೂರೈಸುತ್ತಿದ್ದಾರೆ. ಜತೆಗೆ ನೀರು ಇತ್ಯಾದಿ ಆಹಾರವನ್ನು ಒದಗಿಸಿ ಆರೈಕೆ ನಡೆಸುತ್ತಿದ್ದಾರೆ. ಸ್ಥಳಿಯ ನಿವಾಸಿ ಸುಬ್ರಹ್ಮಣ್ಯ ಕೆ.ಎಸ್‍ಎಸ್ ಕಾಲೇಜಿನ ವಿದ್ಯಾರ್ಥಿ ದೀಪಕ್ ಕಳೆದ ಮೂರು ದಿನಗಳಿಂದ ಆನೆಗೆ ಆಹಾರ ಪೂರೈಕೆಯಲ್ಲಿ ನಿರತನಾಗಿದ್ದಾನೆ.

 

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಚಿಕಿತ್ಸೆಗೊಂಡರೂ ಕಾಡಾನೆಗೆ ತಪ್ಪದ ಸಂಕಟ….! , ಮತ್ತೆ ಚಡಪಡಿಸುತ್ತಿರುವ ಕಾಡಾನೆ"

Leave a comment

Your email address will not be published.


*