ಚುನಾವಣೆಯ ಸಂದರ್ಭ ಕೋವಿ ಡೆಪಾಸಿಟ್ ವಿನಾಯತಿ : ಜಯಪ್ರಸಾದ್ ಜೋಶಿ ಹೋರಾಟ ಕೃಷಿಕರಿಗೆ ಪ್ರಯೋಜನ

Advertisement

ಬೆಳ್ಳಾರೆ: ಪ್ರತೀ ಬಾರಿ ಚುನಾವಣೆ ಬಂದಾಗ ಕೋವಿ ಪರವಾನಿಗೆ ಹೊಂದಿದವರೇ ಆರೋಪಿಗಳು ಎಂಬಷ್ಟರ ಮಟ್ಟಿಗೆ ಕಿರುಕುಳ ಕಂಡುಬರುತ್ತಿತ್ತು. ಚುನಾವಣೆ ಬಂದಾಗ ಕೃಷಿಕರು ಹಾಗೂ ಪ್ರಮುಖ ಉದ್ಯಮಿಗಳಿಗೆ ಯಾವತ್ತೂ ಕಿರಿಕಿರಿ. ಚುನಾವಣೆ ಯಾಕಪ್ಪಾ ಬಂತು ಎಂಬ ಸಿಟ್ಟು ಸಹಜವಾಗಿಯೇ ಬರುತ್ತಿತ್ತು. ಆದರೆ ಪೊಲೀಸ್ ಇಲಾಖೆಯ ಸೂಚನೆ ಪಾಲಿಸಲೇಬೇಕಾಗಿತ್ತು. ಈ ಸೂಚನೆ ಪಾಲಿಸದೇ ಇದ್ದರೆ ಕರೆ ಮಾಡಿ ಗದರಿಸಿದ ಘಟನೆಗಳೂ ನಡೆದಿತ್ತು. ಇದೀಗ ಅಂತಹ ಪ್ರಕರಣಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. ಬೆಳ್ಳಾರೆಯ ಜಯಪ್ರಸಾದ್ ಜೋಶಿ ಅವರು ಹೈಕೋರ್ಟು ಮೆಟ್ಟಿಲೇರಿದ್ದು, ನ್ಯಾಯಾಲಯ ಕೋವಿ ಪರವಾನಿಗೆದಾರರ ಪರವಾಗಿ ಮಧ್ಯಂತರ ಆದೇಶ ನೀಡಿ  ಬಹುಪಾಲು ಮಂದಿಗೆ ನೆಮ್ಮದಿ ಸಿಗುವಂತಾಗಿದೆ.

Advertisement

ಕಳೆದ ಬಾರಿ ಚುನಾವಣೆ ಹಾಗೂ ಅದಕ್ಕೂ ಹಿಂದಿನ ಚುನಾವಣೆಯಲ್ಲಿ  ಅನೇಕ ಕೃಷಿಕರು ತಮಗೆ ಕಾಡು ಪ್ರಾಣಿಗಳ ಹಾವಳಿ ಇದೆ ಆತ್ಮ ರಕ್ಷಣೆಗೆ ಕೋವಿ ಬೇಕು ಎಂದರೂ ಇಲಾಖೆಗಳು ಈ ಮಾತನ್ನು  ಕೇಳಲಿಲ್ಲ. ಚುನಾವಣಾ ಆಯೋಗ ಈ ಹಿಂದೆಯೇ ಹೇಳಿತ್ತು, ಚುನಾವಣೆಯ ಸಂದರ್ಭದಲ್ಲಿ  ಕ್ರಿಮಿನಲ್ ಹಿನ್ನೆಲೆಯ, ಅಪರಾಧಿಗಳ ಕೋವಿ, ಆಯುಧಗಳನ್ನು ಡೆಪಾಸಿಟ್ ಇಡುವಂತೆ ಸೂಚನೆ, ಆದೇಶ ಮಾಡಬೇಕೆಂದು. ಆದರೆ ಇಲಾಖೆಗಳು ಇದನ್ನೇ ಜನರಲ್ ಆದೇಶ ಮಾಡಿ ಎಲ್ಲರೂ ಕೋವಿ ಡೆಪೋಸಿಟ್ ಇಡಬೇಕು ಎಂದು ತಿಳಿಸಿತ್ತು.  ಹೀಗಾಗಿ ಪ್ರತೀ ಬಾರಿಯೂ ಜನಸಾಮಾನ್ಯರಿಗೆ ತೊಂದರೆ ಆಗುತ್ತಿತ್ತು.

Advertisement
Advertisement

ಈ ಬಾರಿಯ ಚುನಾವಣೆಯ ಸಂದರ್ಭ ಬೆಳ್ಳಾರೆ ಜಯಪ್ರಸಾದ್ ಜೋಶಿಯವರು ತನ್ನ ಕೋವಿ ಡೆಪಾಸಿಟ್ ಇಡುವುದರಿಂದ ವಿನಾಯಿತಿ ಕೊಡಬೇಕೆಂದು ಕೋರಿ ಅಗತ್ಯ ದಾಖಲೆಗಳೊಂದಿಗೆ 12.3.2019ರಂದು ಜಿಲ್ಲಾ ದಂಡಾಧಿಕಾರಿಯ  ಅರ್ಜಿ ಸಲ್ಲಿಸಿದರು. 27.3.2019ರಂದು ಸಾಮಾನ್ಯ ಆದೇಶದಲ್ಲಿ(ಜನರಲ್ ಆರ್ಡರ್) ತಿರಸ್ಕರಿಸಲ್ಪಟ್ಟಿತು. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಳೆದ ಕೆಲವು ವರ್ಷಗಳಿಂದ ಜಾರಿಯಲ್ಲಿದ್ದಂತೆ 2019 ರ ಸಾಲಿನ ಚುನಾವಣೆಗೂ ದೇಶದ ಎಲ್ಲೆಡೆಯಂತೆಯೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪರವಾನಿಗೆ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಠೇವಣಿ ಇಡುವವರು ಎಂಆರ್ ಎಂ (1)176/2019 ಇ 65067ಸಿ3 11.03.2019 ಪ್ರಕಾರದ ಆದೇಶವಾಗಿತ್ತು. ಅನಿವಾರ್ಯ ಇರುವ ಪರವಾನಿಗೆದಾರರು ವಿನಾಯಿತಿ ಕೋರಿ ಅರ್ಜಿ ಸಲ್ಲಿಸಬಹುದೆಂದು ಘೋಷಿಸಲ್ಪಟ್ಟಿತ್ತು. ಈ ಪ್ರಕಾರ ಪರವಾನಿಗೆದಾರ ಬೆಳ್ಳಾರೆ ಜಯಪ್ರಸಾದ್ ಜೋಶಿಯವರು ತನ್ನ ಕೋವಿ ಡೆಪಾಸಿಟ್ ಇಡುವುದರಿಂದ ವಿನಾಯಿತಿ ಕೊಡಬೇಕೆಂದು ಕೋರಿ ಅಗತ್ಯ ದಾಖಲೆಗಳೊಂದಿಗೆ 12.3.2019ರಂದು ಅರ್ಜಿ ಸಲ್ಲಿಸಿದರು. 27.3.2019ರಂದು ಸಾಮಾನ್ಯ ಆದೇಶದಲ್ಲಿ ತಿರಸ್ಕರಿಸಲ್ಪಟ್ಟಿತು.

Advertisement

ಜಯಪ್ರಸಾದ ಜೋಶಿಯವರು ಜಿಲ್ಲಾ ದಂಡಾಧಿಕಾರಿಯ ಈ ಆದೇಶವನ್ನು ತನ್ನ ಮಟ್ಟಿಗೆ ರದ್ದುಗೊಳಿಸಲು ಹಾಗೂ ಜಿಲ್ಲಾ ದಂಡಾಧಿಕಾರಿಯವರು ಠೇವಣಿಯಿಂದ ವಿನಾಯಿತಿ ನೀಡಿ ಆದೇಶ ನೀಡುವಂತೆ ನಿರ್ದೇಶನ ನೀಡಲು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಡಬ್ಲ್ಯುಪಿ 18813/2019 ರಲ್ಲಿಯೂ ಆಧಾರ ಸಹಿತ ರಿಟ್ ಅರ್ಜಿ ಸಲ್ಲಿಸಿದ್ದರು.

ರಿಟ್ ಅರ್ಜಿಯನ್ನು ಪರಿಶೀಲಿಸಿದ ಉಚ್ಛ ನ್ಯಾಯಾಲಯ ಅದನ್ನು ಪರಿಗಣಿಸಿ ವಿವರಣಾತ್ಮ ಆದೇಶವನ್ನು ವಾರದೊಳಗೆ ಮಾಡಬೇಕೆಂದು, ಆ ವಾರದಲ್ಲಿ ಕೋವಿ ಡೆಪಾಸಿಟ್ ಮಾಡದವರ ಮೇಲೆ ಬಲವಂತದ ಕ್ರಮಕೈಗೊಂಡಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದೆಂದು ಉಚ್ಛ ನ್ಯಾಯಾಲಯ 24.4.2019ರಂದು ಆದೇಶ ಮಾಡಿದೆ.

Advertisement

ಉಚ್ಛ ನ್ಯಾಯಾಲಯದ ಮಧ್ಯಂತರ ನಿರ್ದೇಶನದಂತೆ ದ.ಕ ಜಿಲ್ಲಾಧಿಕಾರಿಯವರಿಗೆ ತಿಳುವಳಿಕೆ ಸಲ್ಲಿಸಿ ಚುನಾವಣಾ ಜಿಲ್ಲಾ ಮಟ್ಟದ ಠೇವಣಿ ಸ್ಕ್ರೀನಿಂಗ್ ಕಮಿಟಿ ಜಯಪ್ರಸಾದ್ ಜೋಶಿಯವರಿಗೆ ಶಸ್ತ್ರಾಸ್ತ್ರಗಳನ್ನು ಠೇವಣಿಯಿಡುವುದರಿಂದ ವಿನಾಯಿತಿ ನೀಡಿ ಪ್ರತ್ಯೇಕ ವಿಶೇಷ ನಡಾವಳಿ ಹೊರಡಿಸಿರುತ್ತದೆ. ಇಲ್ಲಿ ಜಯಪ್ರಸಾದ್ ಜೊಶಿ ಅವರು ಸ್ಪಷ್ಟವಾಗಿ ಹೇಳಿದ್ದು, ಆಯುಧ ಪರವಾನಿಗೆ ಹಾಗೂ ಆಯುಧವು ನನ್ನ ಆತ್ಮರಕ್ಷಣೆ ಇರುವುದು, ಹೀಗಾಗಿ ಚುನಾವಣೆ ಸಮಯದಲ್ಲಿ ರಕ್ಷಣೆಗೆ ಅಗತ್ಯವಾಗಿದೆ, ಯಾವುದೇ ಕಾರಣಕ್ಕೂ ಆಯುಧ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿದ್ದರು. ಜಯಪ್ರಸಾದ್ ಜೋಶಿಯವರ ಈ ಹೋರಾಟದಿಂದ ಬಹುಪಾಲು ಮಂದಿಗೆ ಪ್ರಯೋಜನವಾಗಿದೆ. ಕೆಲವು ಜಿಲ್ಲೆಗಳಲ್ಲಿ  ಕೋವಿ ಡಿಪಾಸಿಟ್ ನಿಂದ ವಿನಾಯತಿ ಇತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮಾತ್ರಾ ಈ ತೊಡಕು ಕಂಡುಬಂದಿತ್ತು. ಇದೀಗ ಜಯಪ್ರಸಾದ್ ಹೋರಾಟದ ಫಲವಾಗಿ ರಿಲೀಫ್ ಸಿಕ್ಕಿದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಚುನಾವಣೆಯ ಸಂದರ್ಭ ಕೋವಿ ಡೆಪಾಸಿಟ್ ವಿನಾಯತಿ : ಜಯಪ್ರಸಾದ್ ಜೋಶಿ ಹೋರಾಟ ಕೃಷಿಕರಿಗೆ ಪ್ರಯೋಜನ"

Leave a comment

Your email address will not be published.


*