ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಗಮನಸೆಳೆದ ಹಣ್ಣುಗಳ ವೈವಿಧ್ಯ ಮೇಳ

June 19, 2019
10:00 AM

ಮಡಿಕೇರಿ : ಭಾರತೀಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ರಾಜ್ಯ ಕೃಷಿ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಬೆಣ್ಣೆಹಣ್ಣು ಮತ್ತು ಮಡಹಾಗಲದ ವೈವಿಧ್ಯತಾ ಮೇಳ ನಡೆಯಿತು.

Advertisement
Advertisement
Advertisement
Advertisement

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ ಅವರು ಸಂಸ್ಥೆಯು ಇಂದು ಆಯೋಜಿಸಿರುವ ಬೆಣ್ಣೆಹಣ್ಣು ಮತ್ತು ಮಡಹಾಗಲದ ಮೇಳದಲ್ಲಿ ವಿವಿಧ ತಳಿಗಳನ್ನು ಪರಿಚಯಿಸುತ್ತಿದ್ದು, ಇದರ ಅನುಕೂಲವನ್ನು ಈ ಜಿಲ್ಲೆಯ ರೈತರು ಪಡೆಯುವಂತಾಗಬೇಕು. ಕಾಫಿ ತೋಟಗಳಲ್ಲಿ ಕಿತ್ತಳೆಯೊಂದಿಗೆ ಬೆಣ್ಣೆಹಣ್ಣು ಮಿಶ್ರ ಬೆಳೆಯಾಗಿ ಬೆಳೆದು ಹೆಚ್ಚಿನ ಆದಾಯ ಗಳಿಸುವಂತೆ ಅವರು ತಿಳಿಸಿದರು.

Advertisement

ಕಾಫಿ ಬೋರ್ಡ್‍ನ ಮಾಜಿ ಅಧ್ಯಕ್ಷರು ಹಾಗೂ ಕಾಫಿ ಬೆಳೆಗಾರರಾದ ಬೋಸ್ ಮಂದಣ್ಣ ಅವರು ಮಾತನಾಡಿ ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರವು ಬೆಣ್ಣೆಹಣ್ಣಿನ ವಿವಿಧ ತಳಿಗಳನ್ನು ಸಂಶೋಧಿಸಿದ್ದು ಕಾಫಿ ತೋಟಗಳಲ್ಲಿ ಉತ್ತಮ ಮಿಶ್ರ ಬೆಳೆಯಾಗಿ ಬೆಳೆಸಿ ಉತ್ತಮ ಆದಾಯ ಪಡೆಯಬಹುದು. ಬೆಣ್ಣೆಹಣ್ಣಿನಿಂದ ವಿವಿಧ ಮೌಲ್ಯಾಧಾರಿತ ಪದಾರ್ಥಗಳನ್ನು ಉತ್ಪಾದಿಸಿ ದೀರ್ಘಕಾಲಿಕ ಆದಾಯ ಗಳಿಸಬಹುದು. ಕಾಫಿ ತೋಟದಲ್ಲಿ ಯಾವ ರೀತಿ ಬೆಣ್ಣೆಹಣ್ಣಿನ ಮರಗಳನ್ನು ಬೆಳೆಯಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರಿನ ಮಡಹಾಗಲದ ಬೆಳೆಗಾರರಾದ ಜಿ.ಪಿ.ಶೆಣೈಯವರು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಮಡಹಾಗಲದ ಕೃಷಿಯನ್ನು ಹನ್ನೆರಡು ವರ್ಷಗಳಿಂದ ನಡೆಸುತ್ತಾ ಬಂದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಚೆಟ್ಟಳ್ಳಿಯ ಸಂಶೋಧನಾ ಕೇಂದ್ರವು 50 ವಿವಿಧ ತಳಿಯ ಮಡಹಾಗಲದ ತಳಿಯನ್ನು ಸಂಶೋಧಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಾರುಕಟ್ಟೆಯಲ್ಲಿ ಮಡಹಾಗಲದ ತರಕಾರಿಗೆ ಹೆಚ್ಚಿನ ಬೇಡಿಕೆಯಿದ್ದು ಇದನ್ನು ಕೃಷಿಕರು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಧೃಡವಾಗಬೇಕೆಂದು ತಿಳಿಸಿದರು.

Advertisement

ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಆರ್ ದಿನೇಶ್ ಅವರು ಮಾತನಾಡಿ ಭಾರತೀಯ ರೈತ ಒಬ್ಬ ವಿಜ್ಞಾನಿ ಇದ್ದಂತೆ ಇವರಲ್ಲಿ ಪಾರಂಪರಿಕ ಕೃಷಿ ಜ್ಞಾನವು ಅತ್ಯುನ್ನತ ಮಟ್ಟದಲ್ಲಿದ್ದು ಇದನ್ನು ಬಳಸಿಕೊಂಡು ಕೆಲವು ರೈತರು ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿದ್ದಾರೆ ಎಂದು ಅವರು ನುಡಿದರು.ಭಾರತ ಸರ್ಕಾರವು 2022 ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದ್ದು ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಗೊಳ್ಳಲಿದೆ ಎಂದು ತಿಳಿಸಿದರು. ಭಾರತೀಯ ಕೃಷಿ ಸಂಶೋಧನೆ ಸಂಸ್ಥೆಯು ಕಳೆದ ವರ್ಷ 13,224 ಕೋಟಿ ಆದಾಯ ಗಳಿಸಿದ್ದು ಆರ್ಥಿಕತೆಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಸಂಸ್ಥೆಯು ಹವಾಮಾನ ಬದಲಾವಣೆಗೆ ಅನುಗುಣವಾಗಿ ವಿಶೇಷ ತಳಿಗಳ ಸಂಶೋಧನೆ ನಡೆಸಿ ರೋಗ ನಿರೋಧಕ ತಳಿಯ ವಿವಿಧ ತರಕಾರಿ ಬೆಳೆಗಳನ್ನು ರೈತರಿಗೆ ಪರಿಚಯಿಸಿದ್ದು ಇದರಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ರೈತರು ಬೆಳೆಯುವ ಮೌಲ್ಯಧಾರಿತಾ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಸಂಸ್ಥೆಯು ಮಾರುಕಟ್ಟೆ ಒದಗಿಸುತ್ತಿದ್ದು ರೈತರು ಒಂದು ಹೆಜ್ಜೆ ಮುಂದೆ ಬಂದರೆ ಸಂಸ್ಥೆಯು ನಿಮ್ಮೊಂದಿಗೆ ಹತ್ತು ಹೆಜ್ಜೆ ಮುಂದೆ ಬಂದು ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿ ಕೊಡುತ್ತದೆ. ಕೃಷಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಣ್ಣೆಹಣ್ಣು ಹಾಗೂ ಮಡಹಾಗಲದ ವಿಸ್ತರಣೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಆರ್ಕ ಹರ್ಬಲ್ ತರಕಾರಿ ಹಾಗೂ ಹೂವಿನ ಬೆಳೆಗಳ ಕಿಟ್‍ನ್ನು ಮತ್ತು ಮೇಳದಲ್ಲಿ ಬೆಣ್ಣೆಹಣ್ಣು ಮತ್ತು ಮಡಹಾಗಲದ ತಳಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಹಾಗೂ ರಿಯಾಯಿತಿ ದರದಲ್ಲಿ ಆರ್ಕ ಹರ್ಬಲ್ ತರಕಾರಿ ಹಾಗೂ ಹೂವಿನ ಬೆಳೆಗಳ ಕಿಟ್‍ನ್ನು ಮತ್ತು ಗಿಡಗಳನ್ನು ಮಾರಾಟ ಮಾಡಲಾಯಿತು.

Advertisement

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್ ಅವರು ಬೆಣ್ಣೆಹಣ್ಣು ಬೆಳೆ ವಿಸ್ತರಣೆಗೆ ಪ್ರತೀ ಹೆಕ್ಟೇರ್‍ಗೆ 20 ಸಾವಿರ ಪ್ರೋತ್ಸಾಹಧನವಿದೆ. ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಇರುವಂತಹ ಇತರೆ ಸೌಲಭ್ಯಗಳ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಭಾರತಿ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವೀರೇಂದ್ರ ಕುಮಾರ್ ಇತರರು ಇದ್ದರು. ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಂಜು ಜಾರ್ಜ್  ವಂದಿಸಿದರು.

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಬೆಂಬಲಬೆಲೆಯಲ್ಲಿ ಕಡಲೆಕಾಳು ಖರೀದಿಸಲು ಒಂದು ವಾರದೊಳಗೆ ನೊಂದಣಿ ಪ್ರಕ್ರಿಯೆ ಆರಂಭ
January 25, 2025
7:04 AM
by: The Rural Mirror ಸುದ್ದಿಜಾಲ
ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ
January 25, 2025
6:57 AM
by: The Rural Mirror ಸುದ್ದಿಜಾಲ
ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆಗೆ 67 ಕೋಟಿ ರೂಪಾಯಿ ನಿರೀಕ್ಷೆ | ಕರ್ನಾಟಕ ಸರ್ಕಾರದಿಂದಲೂ ತನ್ನ ಪಾಲನ್ನು ಮೀಸಲಿಡಲು ಒತ್ತಾಯ |
January 24, 2025
8:57 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror