ಸವಣೂರು: ಬುಧವಾರ ರಾತ್ರಿ ಮಳೆ ಗಾಳಿಯೊಂದಿಗೆ ಬಂದ ಸಿಡಲಿಗೆ ಪಾಲ್ತಾಡಿ ಗ್ರಾಮದ ಚೆನ್ನಾವರದಲ್ಲಿ ಮನೆಯೊಂದರ ವಿದ್ಯುತ್ ಪರಿಕರಗಳು ಸುಟ್ಟು ಹೋಗಿದೆ.
ಚೆನ್ನಾವರ ಪಟ್ಟೆ ಚಂದ್ರಹಾಸ ರೈ ಅವರ ಮನೆಯ ವಿದ್ಯುತ್ ಮೀಟರ್ ,ಫ್ಯಾನ್ ಸೇರಿದಂತೆ ಹಲವು ವಿದ್ಯುತ್ ಪರಿಕರಗಳು ಸುಟ್ಟು ಹೋಗಿದ್ದು,ಸಿಡಿಲಿನ ತೀವ್ರತೆಗೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.
ಪ್ರತೀ ಮಳೆಗಾಲದಲ್ಲಿ ಇವರ ಕೃಷಿ ತೋಟಕ್ಕೆ ಸಿಡಿಲು ಬಡಿದು ಹಲವು ಅಡಿಕೆ ಮರಗಳು ನಾಶವಾಗಿತ್ತು.ಈ ಬಾರಿ ಮನೆಯ ವಿದ್ಯುತ್ ಪರಿಕರಗಳು ಹಾನಿಯಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಚೆನ್ನಾವರ: ಸಿಡಿಲಬ್ಬರಕ್ಕೆ ಸುಟ್ಟು ಹೋದ ವಿದ್ಯುತ್ ಪರಿಕರಗಳು"