ಬಾಳುಗೋಡು: ಛೆ…… ಆನೆಗೆ ಕಡಿಮೆಯೇ ಆಗಿಲ್ಲ…!. ಹೀಗೆಂದು ಪ್ರೀತಿ ತೋರಿಸುತ್ತಿರುವವರು ಬಾಳುಗೋಡು ಪ್ರದೇಶದ ಜನ. ಅರಣ್ಯ ಇಲಾಖೆ ತನ್ನ ಪ್ರಯತ್ನ ಮಾಡುತ್ತಿದ್ದರೂ ಕಾಡಾನೆಗೆ ಒಂದಿಲ್ಲೊಂದು ಕಾಟ ತಪ್ಪಲಿಲ್ಲ. ಈಗ ಚೇತರಿಕೆ ಕಂಡುಬಂದಿಲ್ಲ. ಕೀವು ತುಂಬಿದ ಕಾಲಿನಲ್ಲಿ ಅತ್ತಿತ್ತ ಓಡಾಡುತ್ತಿದೆ.
ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸಲಗದ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಿಲ್ಲ . ಸ್ಥಳೀಯ ಮಂದಿ ಕಾಡಿಗೆ ತೆರಳಿ ಆನೆಯ ಚಲನವಲನವನ್ನು ವೀಕ್ಷಿಸಿದ್ದಾರೆ. ಜೊತೆಗೆ ಬೈನೆ ಮರದ ಆಹಾರವನ್ನು ಆನೆಗೆ ನೀಡಿ ಬಂದಿದ್ದಾರೆ.ಈ ವೇಳೆ ಆನೆಯು ಚಿಕಿತ್ಸೆ ಪಡೆದ ನಂತರದಲ್ಲಿ ಕೂಡ ಚೇತರಿಕೊಳ್ಳದಿರುವುದು ಅವರಿಗೆ ಕಂಡುಬಂದಿದೆ.ಆನೆಯು ಶಕ್ತಿ ಹೀನವಾಗಿದ್ದು ನೋವು ಉಲ್ಬಣಿಸಿ ನಡೆಯಲು ಕಷ್ಟ ಪಡುತ್ತಿದೆ.
ಈ ನಡುವೆ ಅರಣ್ಯ ಇಲಾಖೆ ಸಿಬಂದಿಗಳು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆನೆಯು ಓಡಲಾಗದೆ ಚಡಪಡಿಸುತಿದ್ದ ಬಗ್ಗೆಯು ಸ್ಥಳಿಯರು ಮಾಹಿತಿ ನೀಡಿದ್ದು ಇದೇ ರೀತಿ ಆನೆಯನ್ನು ಬಿಟ್ಟರೆ ಅದರ ಆರೋಗ್ಯ ಪೂರ್ಣವಾಗಿ ಹದಗೆಡಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಚೇತರಿಕೆ ಕಾಣದ ಕಾಡಾನೆ : ಹೆಚ್ಚಿದ ಜನರ ಕಾಳಜಿ"