ಜನಾನುರಾಗಿ ವೈದ್ಯ ಬಾಳಿಲದ ಡಾ|ಪಿ ಜಿ ಎಸ್ ಪ್ರಕಾಶ್ ನಿಧನ

April 30, 2020
8:40 AM

ಬೆಳ್ಳಾರೆ: ಜನಾನುರಾಗಿ ವೈದ್ಯರಾಗಿದ್ದ ಬಾಳಿಲದ ಡಾ|ಪಿ ಜಿ ಎಸ್ ಪ್ರಕಾಶ್(59)  ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಬಾಳಿಲದಲ್ಲಿ ಕ್ಲಿನಿಕ್ ಹೊಂದಿದ್ದ ಡಾ|ಪಿ ಜಿ ಎಸ್ ಪ್ರಕಾಶ್ ಗ್ರಾಮೀಣ ಭಾಗದ ಜನಾನುರಾಗಿ ವೈದ್ಯರಾಗಿದ್ದರು. ಕಡಿಮೆ ದರದಲ್ಲಿ ಔಷಧಿ ಹಾಗೂ ನಿಖರ ಚಿಕಿತ್ಸೆ ಮೂಲಕ ಹೆಸರುವಾಸಿಯಾಗಿ  ಬೆಳ್ಳಾರೆ ಸಹಿತ ವಿವಿದೆಡೆಯಿಂದ ರೋಗಿಗಳು ಆಗಮಿಸುತ್ತಿದ್ದರು. ಇದೀಗ ಡಾ|ಪಿ ಜಿ ಎಸ್ ಪ್ರಕಾಶ್ ನಿಧನರಾಗಿರುವುದು  ಗ್ರಾಮೀಣ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ.

ಬುಧವಾರ ರಾತ್ರಿಯೂ ಕ್ಲಿನಿಕ್ ಗೆ ಆಗಮಿಸಿದ ರೋಗಿಗಳಿಗೆ ಔಷಧಿ ನೀಡಿದ್ದರು. ಬಳಿಕ ಮನೆಯ ಗೇಟ್ ಹಾಗೂ ಕ್ಲಿನಿಕ್ ಬಾಗಿಲು ಹಾಕಲು ತೆರಳಿದ ವೇಳೆ  ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು. ವಿಷಯ ತಿಳಿದ ತಕ್ಷಣವೇ ಮನೆಯವರು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗೆ ಮೃತಪಟ್ಟಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಹಾರಾಷ್ಟ್ರದಲ್ಲಿ ತಡೆಹಿಡಿದ ಅಡಿಕೆ ಲಾರಿಗಳ ಬಿಡುಗಡೆಗೆ ಫಡ್ನವೀಸ್‌ಗೆ ಮನವಿ
July 7, 2026
9:35 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿವಿದೆಡೆ ಭಾರೀ ಮಳೆ – ಜುಲೈ 8 ರಂದು ಹಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 7, 2026
9:16 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಬೆಳೆ ಸಮೀಕ್ಷೆ ಆರಂಭ | ರೈತರೇ ಮೊಬೈಲ್‌ ಮೂಲಕ ಬೆಳೆ ವಿವರ ದಾಖಲಿಸಿ – ಕೃಷಿ ಇಲಾಖೆ ಮನವಿ
July 7, 2026
8:41 PM
by: ಮಿರರ್‌ ಡೆಸ್ಕ್‌
ಮಾಣಿ–ಸಂಪಾಜೆ ರಸ್ತೆ ದುರಸ್ತಿಗೆ ₹49.22 ಕೋಟಿ ಮಂಜೂರು | ಚತುಷ್ಪಥ ಯೋಜನೆಗೆ ವೇಗ
July 7, 2026
8:33 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror