ಕೊರೊನಾ ವೈರಸ್ ಮಹಾಮಾರಿಯಾಗಿ ಕಾಡುತ್ತಿದೆ. ಸದ್ದಿಲ್ಲದೆ ಅಲ್ಲಲ್ಲಿ ಕಂಡುಬರುತ್ತಿದೆ. ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಎಚ್ಚರಿಸಿದರೂ ಜನರು ಕ್ಯಾರೇ ಅನ್ನುತ್ತಿಲ್ಲ. ಹೀಗಾದರೆ ಏನು ಮಾಡಬಹುದು ಎಂಬುದರ ಬಗ್ಗೆ ಅನೇಕರು ವ್ಯಾಟ್ಸಪ್ ಮೂಲಕ ದಿನವೂ ತಮ್ಮ ಐಡಿಯಾ ನೀಡುತ್ತಾರೆ. ಇದರಲ್ಲಿ ಆಯ್ದ ಬರಹಗಳನ್ನು ಇಲ್ಲಿ ಪ್ರಕಟಿಸಲು ಇಂದಿನಿಂದ ನಿರ್ಧರಿಸಲಾಗಿದೆ. ಉತ್ತಮ ಯೋಚನೆ ಇದ್ದರೆ ತಿಳಿಸಿ.. ಪ್ರಕಟಿಸಲಾಗುತ್ತದೆ
Advertisement
- (ಸಂ- ಸುಳ್ಯನ್ಯೂಸ್.ಕಾಂ)
ಕೊರೋನ ಕುರಿತು, ಅದರ ತೀವ್ರತೆ ಬಗ್ಗೆ ಜನಸಾಮಾನ್ಯರಿಗೆ ಇನ್ನೂ ಗೊತ್ತಾಗಿರುವಂತೆ ಕಾಣುತ್ತಿಲ್ಲ. ಅವರುಗಳು ಈಗಲು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪೇಟೆಗೆ ಬರುತ್ತಿರುವುದು ಕಂಡುಬರುತ್ತದೆ. ಸಾಮಾನು ಖರೀದಿಗೆ ಗುಂಪು.. ಗುಂಪಾಗಿ.. ಸೇರುವುದರಿಂದ ಕೊರೊನಾ ವೈರಸ್ ಆಯಾ ಪ್ರದೇಶದಲ್ಲಿ ಇದ್ದರೆ ಬಹುಬೇಗನೆ ಹರಡಲು ಸಾಧ್ಯವಿದೆ. ಅದಕ್ಕಾಗಿ ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅವರದೇ ಆದ ಗ್ರಾಮದ ವ್ಯಾಪ್ತಿಯಲ್ಲಿ ವಾಹನದಲ್ಲಿ..ನಿಧಾನವಾಗಿ.. ದ್ವನಿ ವರ್ಧಕದ ಮೂಲಕ ಕೊರೊನ ಕುರಿತಾಗಿ ಅದರ ತೀವ್ರತೆಯ ವಿಚಾರ ತಿಳಿಸಿ. ಜನರಳಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಮೂಲಕ ಜನಗಳು ಎಚ್ಛೆತ್ತುಕೊಳ್ಳುವಂತೆ ಮಾಡಬೇಕು ಎಂಬುದು ಮೂಡಬಿದ್ರೆಯ ಜಯಕೃಷ್ಣ ಭಟ್ ಅವರ ಅಭಿಪ್ರಾಯ.