ಸುಳ್ಯ:ಜಮ್ಮು ಕಾಶ್ಮೀರದ ವಿಶೇಷ ಅಧಿಕಾರ ತೆಗೆದುಹಾಕಿದ ಕೇಂದ್ರ ಸರಕಾರದ ಕ್ರಮವನ್ನು ಶ್ಲಾಘಿಸಿ ದೇಶಪ್ರೇಮಿ ಬಳಗ ಸುಳ್ಯ ಇದರ ಆಶ್ರಯದಲ್ಲಿ ವಿಜಯೋತ್ಸವ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ನಡೆಯಿತು.
ವಿಜಯೋತ್ಸವವನ್ನು ಉದ್ಧೇಶಿಸಿ ಶಾಸಕ ಎಸ್.ಅಂಗಾರ ಮಾತನಾಡಿ ಇದು ಸ್ವಾತಂತ್ರ್ಯಾನಂತರದ ದೇಶದ ಜನತೆಯ ಅತೀ ದೊಡ್ಡ ಜಯ ಮತ್ತು ಸಂವಿಧಾನದ ಜಯ ಎಂದು ಬಣ್ಣಿಸಿದರು.
ಸಂಭ್ರಮ ಪಡುವ ದಿನ. ಜಮ್ಮು ಕಾಶ್ಮಿರದ ಜನತೆಗೆ ಇಲ್ಲಿರುವ ಸ್ವಾತಂತ್ರ್ಯ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕಾಗಿ ಪ್ರತ್ಯೇಕ ಸ್ಥಾನ ನೀಡಿತ್ತು. ಕಾಂಗ್ರೆಸ್ ಗೆ ದೇಶ ಭಕ್ತಿ ಇರುತ್ತಿದ್ದರೆ ದೇಶ ಒಡೆಯುವ ಕೆಲಸ ಮಾಡುತ್ತಿರಲಿಲ್ಲ. ಆದರೆ ಕಾಲ ಬದಲಾಗಿದೆ. ಪರಿಹಾರ ಕಂಡುಕೊಳ್ಳುವ ಕೆಲಸ ಮೋದಿ, ಅಮಿತ್ ಶಾ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಾತನಾಡಿದರು.
ನ.ಪಂ.ಸದಸ್ಯರಾದ ಸುಧಾಕರ, ಪೂಜಿತಾ ಕೆ.ಯು., ಪ್ರಮುಖರಾದ ಪಿ.ಕೆ.ಉಮೇಶ್, ಹರೀಶ್ ಬೂಡುಪನ್ನೆ, ದಾಮೋದರ ಮಂಚಿ, ಗಿರೀಶ್ ಕಲ್ಲುಗದ್ದೆ, ಸುರೇಶ್ ಕಣೆಮರಡ್ಕ, ಸುನಿಲ್ ಕೇರ್ಪಳ, ಪ್ರೀತಮ್ ಡಿ.ಕೆ., ಸತೀಶ್ ಕಾಟೂರು, ಪ್ರಕಾಶ್ ಯಾದವ್, ವಿಘ್ನೇಶ್ ಆಚಾರ್ಯ, ಲೋಕೇಶ್ ಕೆರೆಮೂಲೆ, ಜನಾರ್ದನ, ಡಾ.ಮನೋಜ್ ಅಡ್ಡಂತಡ್ಕ, ರಾಮಕೃಷ್ಣ ಆಳಂಕಲ್ಯ, ಗುರುಪ್ರಕಾಶ್, ಶಂಕರ್ ಪೆರಾಜೆ, ಚಂದ್ರಾ ಕೋಲ್ಚಾರ್, ದಯಾನಂದ ಕೇರ್ಪಳ, ಶರತ್ ಮೊದಲಾದವರಿದ್ದರು.