ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಹಿಳಾ ಪೊಲೀಸರನ್ನೊಳಗೊಂಡ “ರಾಣಿ ಅಬ್ಬಕ್ಕ ಪಡೆ”ಯನ್ನು ಪೊಲೀಸು ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಉದ್ಘಾಟಿಸಿ ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸು ಅಧೀಕ್ಷಕ ವಿಕ್ರಮ್ ಆಮ್ಟೆ , ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅದಾವತ್, ಪೊಲೀಸ್ ವೃತ್ತ ನಿರೀಕ್ಷಕ ಶರಣಗೌಡ ವಿ ಹೆಚ್ ,
ಪೊಲೀಸ್ ಅಧಿಕಾರಿಗಳಾದ ಸಂದೇಶ್ ಪಿ ಸಿ , ಸತೀಶ್ ಕುಮಾರ್ , ಮಂಜುನಾಥ್ ಹಾಗೂ ಜಿಲ್ಲಾ ಮಟ್ಟದ “ರಾಣಿ ಅಬ್ಬಕ್ಕ ಪಡೆ” ತಂಡದ ಎಲ್ಲಾ ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಣಿ ಅಬ್ಬಕ್ಕ ಪಡೆ” ತಂಡವು ಪ್ರತೀ ತಾಲೂಕಿಗೆ 2 ತಂಡವನ್ನು ರಚಿಸಿದ್ದು ಪ್ರತೀ ತಂಡದಲ್ಲಿ 06 ಜನ ಯುವ ಉತ್ಸಾಹಿ ಮಹಿಳಾ ಸಿಬ್ಬಂದಿಗಳಿರುತ್ತಾರೆ. ತಾಲೂಕು ಮಟ್ಟದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಮೇಲ್ವೀಚಾರಕಾಗಿದ್ದು, ಸಹಾಕಯಕ ಪೊಲೀಸ್ ಅಧೀಕ್ಷಕರವರು ಮಾರ್ಗದರ್ಶಕರಾಗಿರುತ್ತಾರೆ. ರಾಣಿ ಅಬ್ಬಕ್ಕ ಪಡೆಯ ಸಿಬ್ಬಂಧಿಗಳು ವಿಶೇಷ ಸಮವಸ್ತ್ರ ಹೊಂದಿರುತ್ತಾರೆ. ನೀಳಿ ಬಣ್ಣದ ಟೀ-ಶರ್ಟ್ ಮತ್ತು ಡಾಂಗ್ರಿ ಪ್ಯಾಂಟ್ , ಕಮಾಂಡೋ ಶೂ ಮತ್ತು ಟೋಪಿ ಸಿಬ್ಬಂಧಿಯವರ ಸಮವಸ್ತ್ರವಾಗಿರುತ್ತದೆ.ಪ್ರತೀ ತಾಲೂಕು ಮಟ್ಟದ ತಂಡಗಳಿಗೆ ರಾಣಿ ಅಬ್ಬಕ್ಕ ಪಹರೆ ಪಡೆ ವಾಹನದಲ್ಲಿ ಗಸ್ತು ಮಾಡುತ್ತಾ ಕರ್ತವ್ಯ ನಿರ್ವಹಿಸುತ್ತಾರೆ .
“ರಾಣಿ ಅಬ್ಬಕ್ಕ ಪಡೆ” ಕಾರ್ಯಚಟುವಟಿಕೆ :
“ರಾಣಿ ಅಬ್ಬಕ್ಕ ಪಡೆ” ತಂಡವು ಹೆಣ್ಣುಮಕ್ಕಳು ಮತ್ತು ಮಹಿಳೆಯವರಿಗೆ ಸ್ವರಕ್ಷಣೆಯ ಬಗ್ಗೆ ಮಾಹಿತಿ ನೀಡುವುದು ಹಗಲು ಹೊತ್ತಿನಲ್ಲಿ ಶಾಲಾ ಕಾಲೇಜುಗಳ ಹತ್ತಿರ ರೌಂಡ್ಸ್ ಕರ್ತವ್ಯ ನಿರ್ವಹಿಸಿ ಬಾಲಕಿಯರಿಗೆ ರಕ್ಷಣೆ ನೀಡುವುದು ಸಾಯಂಕಾಲದ ವೇಳೆ ವಿಧ್ಯಾರ್ಥಿಗಳು ತಂಗುವ ಪಿ ಜಿಗಳು ಹಾಸ್ಟೇಲ್‌ಗಳ ಹತ್ತಿರ ಗಸ್ತು ಕರ್ತವ್ಯ ಮಾಡುವುದು.
ಕೋಟ್ಪಾ ಕಾಯ್ದೆಯನ್ವಯ ಕೇಸುಗಳನ್ನು ದಾಖಲಿಸುವುದು , ಬಸ್‌ಸ್ಟ್ಯಾಂಡ್‌ಗಳು, ರೈಲ್ವೇ ನಿಲ್ದಾಣಗಳು, ಪಾರ್ಕ್, ದೇವಸ್ಥಾನ, ಮಾರುಕಟ್ಟೆ ಪ್ರದೇಶಗಳು ಹಾಗೂ ಪ್ರವಾಸಿ ತಾಣಗಳ ಹತ್ತಿರ ಗಸ್ತು ತಿರುಗುವುದು ಕಿಡಿಗೇಡಿಗಳು ಮತ್ತು ಹೆಣ್ಣುಮಕ್ಕಳನ್ನು ಚುಡಾಯಿಸುವವರ ಮೇಲೆ ಕಣ್ಣಿಟ್ಟು ಅಂತವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವುದು.
ಜಾತ್ರೆ, ಉತ್ಸವಗಳು, ಪ್ರತಿಭಟನೆ ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವುದು.