ಪುತ್ತೂರು : ವಿವೇಕಾನಂದ ಕಾಲೇಜು ಪುತ್ತೂರು ಇದರ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ 40 ನೇ ಮಾನ್‍ಸೂನ್‍ಚೆಸ್ ಪಂದ್ಯಾಟವು ಜುಲೈ25, 26 ಮತ್ತು27, 2019ರಂದುಕಾಲೇಜಿನ ಸುವರ್ಣಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.
ದಕ್ಷಿಣಕನ್ನಡ, ಉಡುಪಿ ಮತ್ತುಕೊಡಗುಜಿಲ್ಲೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ಪದವಿ ಕಾಲೇಜು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಪಂದ್ಯಾಟವನ್ನುಮಾನ್ಸೂನ್ ಚೆಸ್‍ನ ಮೂರನೇ ಆವೃತ್ತಿಯ ವಿಜೇತರು ರತ್ನವರ್ಮ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಜೆರಾಲ್ಡ್ ಸಂತೋಷ್‍ಡಿಸೋಜ ಇವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ್ ಪೈ.ವಹಿಸುವರು. ಸಮಾರಂಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಜಯರಾಮ್ ಭಟ್‍ಎಂ.ಟಿ ಮತ್ತು ಮುಖ್ಯತೀರ್ಪುಗಾರರಾದ ಪ್ರಸನ್ನರಾವ್. ಮಂಗಳೂರು ಇವರು ಉಪಸ್ಥಿತರಿರುವರು.
ಬಹುಮಾನ ವಿತರಣೆಯನ್ನು ಮಾನ್ಸೂನ್ ಚೆಸ್‍ನ ಹ್ಯಾಟ್ರಿಕ್ ವಿಜೇತ ಡೆರಿಕ್ ಪಿಂಟೋ ಇವರು ಮಾಡಲಿದ್ದಾರೆ.ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದಡಾ.ಪೀಟರ್ ವಿಲ್ಸನ್ ಪ್ರಭಾಕರ್ ಇವರು ವಹಿಸಲಿರುವರು.
ಜುಲೈ 25ರಂದು ಪೂರ್ವಾಹ್ನ 10.00 ಘಂಟೆಗೆ ಪಂದ್ಯಾಟವು ಆರಂಭಗೊಳ್ಳಲಿದ್ದು, ಸ್ವಿಸ್ ಮಾದರಿಯಲ್ಲಿ ನಡೆಯುತ್ತದೆ.ಭಾಗವಹಿಸುವವರು ಚೆಸ್ ಬೋರ್ಡ್ ಮತ್ತುಚೆಸ್ ದಾಳವನ್ನು ಸ್ವತಃತರಬೇಕು ಹಾಗೂ ಪ್ರಾಂಶುಪಾಲರ ಸಹಿ ಇರುವಗುರುತಿನ ಪತ್ರವನ್ನು ಹೊಂದಿರಬೇಕು.
ಪಂದ್ಯಾಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಪ್ರವೇಶಪತ್ರ ಮತ್ತು ಶುಲ್ಕ ರೂ 50.00 ನ್ನು ಪ್ರಾಂಶುಪಾಲರು, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನೆಹರು ನಗರ, ಪುತ್ತೂರು ದ.ಕ-574203 ಇವರಿಗೆ ಪಾವತಿಸಬೇಕು.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿಜೇತರಿಗೆ ಶಾಶ್ವತ ಫಲಕ ಮತ್ತುಉತ್ತಮ 10 ಮಂದಿ ಆಟಗಾರರಿಗೆ ಪ್ರಮಾಣಪತ್ರದೊಂದಿಗೆ ಸ್ಮರಣಿಕೆ ನೀಡಲಾಗುತ್ತದೆ.ಎಲ್ಲಾಆಟಗಾರರಿಗೆ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಗುತ್ತದೆ.
ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಜುಲೈ 23 ದಿನಾಂಕದ ಮೊದಲುತಮ್ಮ ಪ್ರವೇಶವನ್ನು ನೊಂದಾಯಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಗಾಗಿದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ.ಎಸ್ ಇವರನ್ನು ಸಂಪರ್ಕಿಸಬಹುದು.