ಸುಳ್ಯ: ಜಟ್ಟಿಪಳ್ಳ – ಬೊಳಿಯಮಜಲು ಸಂಪರ್ಕ ರಸ್ತೆಯು ನಿರಂತರ ಮಳೆಯಿಂದಾಗಿ ನೀರು ರಸ್ತೆಯ ಮೇಲಿನಿಂದಲೇ ಹರಿಯುವುದರಿಂದ ಶಾಲೆ ,ಕಾಲೇಜು, ಮದರಸ ವಿಧ್ಯಾರ್ಥಿಗಳಿಗೆ, ಮಹಿಳೆಯರಿಗೆ, ವೃದ್ದರಿಗೆ ಹಾಗೂ ವಾಹನ ಚಾಲಕರಿಗೂ ಸಂಚರಿಸಲು ಪೂರಕ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಈ ಒಂದು ರಸ್ತೆಯನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಜು.28 ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸ್ವಚ್ಛತಾ ಅಭಿಯಾನವನ್ನು ಮುಂದುವರೆಸಿ ಜಟ್ಟಿಪಳ್ಳದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಜಟ್ಟಿಪಳ್ಳವನ್ನು ಮಾದರಿ ಸ್ವಚ್ಚ ವಾರ್ಡ್ ಆಗಿಸುವ ಉದ್ದೇಶವನ್ನಿಟ್ಟಿರುತ್ತೇವೆ ಎಂದು ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಅಧ್ಯಕ್ಷ ನಾಸಿರ್ ಜಟ್ಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel