ಜು.9 ರಂದು ನಿಗದಿಯಾಗಿದ್ದ ಮೆಸ್ಕಾಂ ಸಭೆ ಮುಂದೂಡಿಕೆ

July 9, 2019
10:28 AM

ಸುಳ್ಯ: ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಗ್ರಾಹಕರ ಸಭೆಯನ್ನು ಜು.9 ರಂದು ಸುಳ್ಯ ತಾ.ಪಂ.ಸಭಾಂಗಣದಲ್ಲಿ ಸಭೆ ‌ ನಿಗದಿ ಮಾಡಲಾಗಿತ್ತು. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನೂ ನೀಡಲಾಗಿತ್ತು. ಇದೀಗ ದಿಢೀರ್ ರದ್ದಾಗಿದ್ದು  ಜು. 18 ಕ್ಕೆ ಮುಂದೂಡಲಾಗಿದೆ.

ಮೆಸ್ಕಾಂ ಜಿಲ್ಲಾ ಮಟ್ಟದ ಅಧಿಕಾರಿಗಳು ಕೊನೆ ಕ್ಷಣದಲ್ಲಿ ಮಳೆಗಾಲದ ತುರ್ತು ಕೆಲಸದ ನಿಮಿತ್ತ ಸಭೆ ರದ್ದು ಪಡಿಸಿ ದಿನಾಂಕ‌ ಬದಲಾಯಿಸಿ  ಸಭೆ ಮುಂದೂಡಲಾಗಿದೆ.

ಸಭೆ ಮುಂದೂಡಿದ ಬಗ್ಗೆ  ಸಾರ್ವಜನಿಕರಿಗೆ‌‌  ಮಾಹಿತಿ ಸಿಕ್ಕಿಲ್ಲ‌ ಎಂಬ ಆರೋಪ‌ ಕೇಳಿ ಬಂದಿದೆ. ಮೆಸ್ಕಾಂ ಜಿಲ್ಲಾಮಟ್ಟದ ಅಧಿಕಾರಿಗಳು ಹಲವು ಬಾರಿ ದಿಢೀರ್ ಆಗಿ‌ ಸಭೆ ಮುಂದೂಡಿದ ಘಟನೆಗಳು ಈ ಹಿಂದೆಯು‌ ನಡೆದಿತ್ತು. ವಿದ್ಯುತ್ ಬಳಕೆದಾರರು ಸಮಯ ಹೊಂದಾಣಿಕೆ ಮಾಡಿಕೊಂಡು ಸಭೆಗೆ ಬಂದರೆ ಸಭೆ ರದ್ದಾದ ಘಟನೆಗಳು ನಡೆದಿದೆ.

ಕಳೆದ ಒಂದು ವಾರದಿಂದ ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ರಾತ್ರಿ ಇಡೀ ವಿದ್ಯುತ್ ಕೈಕೊಡುತ್ತಿದೆ. ವಿದ್ಯುತ್ ಕೈಕೊಟ್ಟರೆ ಬಿ ಎಸ್ ಎನ್ ಎಲ್ ಮೊಬೈಲ್ ನೆಟ್ವರ್ಕ್ ಹಾಗೂ ಹಗಲು ವೇಳೆ ಅಂಚೆಕಚೇರಿ ವ್ಯವಹಾರಗಳು ಗ್ರಾಮೀಣ ಭಾಗದಲ್ಲಿ ಸ್ಥಗಿತಗೊಳ್ಳುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ
April 17, 2026
1:55 PM
by: ಸಾಯಿಶೇಖರ್ ಕರಿಕಳ
ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ
April 16, 2026
7:25 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ
April 16, 2026
7:06 AM
by: ಮಿರರ್‌ ಡೆಸ್ಕ್
ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’
April 15, 2026
10:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror