ಜೂನ್ 8 ಮತ್ತು 9 ರಂದು ಸುಳ್ಯದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಲಗೋರಿ ಪಂದ್ಯಾಟ

May 30, 2019
4:03 PM

ಸುಳ್ಯ: ದ.ಕ. ಜಿಲ್ಲಾ ಲಗೋರಿ ಅಸೋಸಿಯೇಶನ್ ಮತ್ತು ಸಂಘಟನಾ ಸಮಿತಿಯ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಲಗೋರಿ ಪಂದ್ಯಾಟ ಜೂನ್ 8 ಮತ್ತು 9ರಂದು ಸುಳ್ಯದ ಸರಕಾರಿ ಪ.ಪೂ. ಕಾಲೇಜಿನ ಕೆಳಗಿನ ಮೈದಾನದಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಲಗೋರಿ ಅಸೋಸಿಯೇಶನ್‍ನ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ತಿಳಿಸಿದ್ದಾರೆ.

Advertisement
Advertisement
Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಗೋರಿ ಆಟ ಇಂದು ಎಲ್ಲೆಡೆ ಜನಪ್ರಿಯವಾಗುತ್ತಿದೆ. ಗ್ರಾಮೀಣ ಜನಪದ ಕ್ರೀಡೆಯಾಗಿ ಎಲ್ಲರೂ ಮೆಚ್ಚಿಕೊಳ್ಳುವ ಆಟವಾಗಿ ಮಾರ್ಪಾಡಾಗಿದೆ. ಈ ಬಗ್ಗೆ 2001ರಲ್ಲಿ ಲಗೋರಿ ಆಟದ ನಿಯಮಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಈ ಆಟಕ್ಕೊಂದು ಚೌಕಟ್ಟು ತರಲಾಗಿದೆ.
ಲಗೋರಿ ಆಟವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿ ಮುಂದಿನ ದಿನಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಮತ್ತು ದಸರಾ ಕ್ರೀಡೆಗಳಲ್ಲಿ ಇದನ್ನು ಬಳಸಿಕೊಳ್ಳುವ ದೃಷ್ಠಿಯಿಂದ, ಇದಕ್ಕೆ ಪ್ರಚಾರ ಹಾಗೂ ಒತ್ತಡ ರೂಪಿಸುವ ದೃಷ್ಠಿಯಿಂದ ರಾಜ್ಯಮಟ್ಟದ ಆಹ್ವಾನಿತ ತಂಡಗಳಿಂದ ಹೊನಲು ಬೆಳಕಿನಲ್ಲಿ ಲಗೋರಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಪಂದ್ಯಾಟಗಳಲ್ಲಿ ಮೈಸೂರು, ಮಂಡ್ಯ, ಕಾರವಾರ, ಕೊಡಗು, ಶಿವಮೊಗ್ಗ, ಬೆಂಗಳೂರು, ಹಾಸನದ 7 ತಂಡಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 9 ತಂಡಗಳು ಸೇರಿ ಒಟ್ಟು 16 ತಂಡಗಳು ಭಾಗವಹಿಸಲಿದೆ.

Advertisement

ಜೂನ್ 8 ರಂದು ಸಂಜೆ 4.00 ರಿಂದ ಕ್ರೀಡಾ ಪಟುಗಳ ಮೆರವಣಿಗೆ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪಂದ್ಯಾಟವನ್ನು ಉದ್ಘಾಟಿಸುವರು. ಕ್ರೀಡಾ ಧ್ವಜಾರೋಹಣವನ್ನು ಶಾಸಕ ಎಸ್. ಅಂಗಾರ ನೆರವೇರಿಸುವರು. ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ ನಂದಕುಮಾರ್ ಪಂದ್ಯಾಟಕ್ಕೆ ಚಾಲನೆ ನೀಡುವರು. ಲಗೋರಿ ಆಟದ ನಿಯಮಾವಳಿಗಳ ಇಂಗ್ಲೀಷ್ ಭಾಷಾಂತರ ಪುಸ್ತಕವನ್ನು ಸುಳ್ಯದ ಎ.ಓ.ಎಲ್.ಇಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಬಿಡುಗಡೆಗೊಳಿಸುವರು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ, ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಎಂ.ಬಿ. ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಎಂ.ಬಿ. ಸದಾಶಿವ, ಸುಳ್ಯ ತಾಲೂಕು ಕಬ್ಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್‍ನ ಅಧ್ಯಕ್ಷ ಎಸ್. ಸಂಶುದ್ದೀನ್, ಬೆಳ್ಳಾರೆ ಕಾಮಧೇನು ಟವರ್ಸ್ ಮಾಲಕ ಎಂ. ಮಾಧವಗೌಡ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಪ್ರೋ. ಸೀತಾರಾಮ ಕೇವಳ ಭಾಗವಹಿಸಲಿದ್ದಾರೆ.

Advertisement

ಜೂನ್ 9 ರಂದು ರಾತ್ರಿ 8.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ವಿಜೇತರಿಗೆ ಪ್ರಥಮ ಬಹುಮಾನ ರೂ.20,000, ದ್ವಿತೀಯ ಬಹುಮಾನ ರೂ.10,000, ತೃತೀಯ ಮತ್ತು ಚತುರ್ಥ ಬಹುಮಾನ ತಲಾ ರೂ.5,000 ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಸಂಯೋಜಕ ದಿನೇಶ್ ಮಡಪ್ಪಾಡಿ, ದಿಲೀಪ್ ಬಾಬ್ಲುಬೆಟ್ಟು, ಸತೀಶ್ ಕೆ.ಜಿ ಉಪಸ್ಥಿತರಿದ್ದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಳ್ಯ ಎನ್ನೆoಪಿಯುಸಿಯಲ್ಲಿ ಜಾಗೃತಿ ಕಾರ್ಯಕ್ರಮ
September 24, 2023
1:38 PM
by: ದ ರೂರಲ್ ಮಿರರ್.ಕಾಂ
ಅಮೇರಿಕಾ ಪ್ರವಾಸದಲ್ಲಿರುವ ಚಿತ್ರನಟ ರವಿಚಂದ್ರನ್‌ ಅವರಿಗೆ ಹಲ್ಲುನೋವು…! | ಭಾರತೀಯ ದಂತ ವೈದ್ಯೆಯಿಂದ ಚಿಕಿತ್ಸೆ ಪಡೆದ ಚಿತ್ರನಟ |
September 22, 2023
2:28 PM
by: ದ ರೂರಲ್ ಮಿರರ್.ಕಾಂ
ಉತ್ತರದಿಂದ ವೈವಾಹಿಕ ಸಂಬಂಧ | ಶ್ರೀರಾಮಚಂದ್ರಾಪುರ ಮಠ ಸ್ಪಷ್ಟನೆ
September 21, 2023
10:32 PM
by: ದ ರೂರಲ್ ಮಿರರ್.ಕಾಂ
ವಿಷ್ಣುಗುಪ್ತ ವಿಶ್ವವಿದ್ಯಾಪೀಠ | ಮುಂದಿನ ವರ್ಷದಿಂದ ಪದವಿ ಶಿಕ್ಷಣ : ರಾಘವೇಶ್ವರ ಶ್ರೀ
September 20, 2023
9:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror