ಜೂ.2 : ಸಂತ್ರಸ್ಥರಿಗೆ ನೆರವು ನೀಡುವ “ಪ್ರೇರಣೆ” ಕಾರ್ಯಕ್ರಮ

Advertisement

ಮಡಿಕೇರಿ: ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಜಲಪ್ರಳಯದಲ್ಲಿ ಸಂಕಷ್ಟಗೊಳಗಾದವರಿಗೆ ನೆರವು ನೀಡುವ ನಿಟ್ಟಿನಲ್ಲಿ ನಮ್ಮಕೊಡಗು ತಂಡವು , ಪ್ರೇರಣೆ ಎಂಬ ಹೆಸರಿನ ಕಾರ್ಯಕ್ರಮವನ್ನು ಜೂನ್ 2 ರಂದು ಭಾನುವಾರ ಕುಶಾಲನಗರದಲ್ಲಿ ಹಮ್ಮಿಕೊಂಡಿದೆ.

Advertisement

ನಮ್ಮಕೊಡಗು ತಂಡ” ಕೊಡಗಿನ ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿ ವೇತನ” ಹಾಗೂ ಕೊಡಗಿನ ಪ್ರವಾಹದಲ್ಲಿ ನಿರಾಶ್ರಿತರಾಗಿದ್ದು ಈಗಾಗಲೇ ಸಂಸ್ಥೆಗಳಿಂದ ಆಯ್ಕೆ ಮಾಡಲಾಗಿರುವ ಫಲಾನುಭವಿ ಕುಟುಂಬಗಳಿಗೆ “ಧನಸಹಾಯ” ನೀಡುವ ಕಾರ್ಯಕ್ರಮವನ್ನು “ಪ್ರೇರಣೆ” ಎಂಬ ಹೆಸರಿನೊಂದಿಗೆ ಜೂನ್ 2 ರಂದು ಬೆಳಗ್ಗೆ 10.30 ಗಂಟೆಗೆ ಕುಶಾಲನಗರದ “ಮಿನಿಸ್ಟರ್‍ಕೋಟ್” ನಲ್ಲಿ ಹಮ್ಮಿಕೊಂಡಿದ್ದು ಕಾಯ9ಕ್ರಮವನ್ನು ಬೆಂಗಳೂರಿನ ಹೆಸರಾಂತ ವೈದ್ಯೆ, ಸಾಮಾಜಿಕ ಹೋರಾಟಗಾರ್ತಿ ಡಾ.ನಾಗಲಕ್ಷ್ಮಿಚೌಧರಿ ಉದ್ಘಾಟಿಸಲಿದ್ದಾರೆ.

Advertisement
Advertisement

ಮುಖ್ಯ ಅತಿಥಿಗಳಾಗಿ ಅಮೇರಿಕಾದಕಾಟಿ ಪ್ರೀಮಿಯರ್ ಲೀಗ್ ನ ಅವಿನಾಶ್ ಬಸವರಾಜು, ಎಸ್.ಎಲ್.ಎನ್. ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎನ್.ವಿಶ್ವನಾಥ್, ಕೊಡಗು ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮಕೊಡಗು ಚಾರಿಟೇಬಲ್ ಸಂಸ್ಥೆ ಸಂಸ್ಥಾಪಕ ನೌಶದ್‍ ಜನ್ನತ್ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕುಶಾಲನಗರದ ಕಾವೇರಿ ಟೆಕ್ಟ್‍ಟೈಲ್ಸ್ ಮಾಲಕ ಎಸ್.ಕೆ.ಸತೀಶ್, ಬೈಲುಕುಪ್ಪೆ ಪೊಲೀಸ್‍ಠಾಣಾಧಿಕಾರಿ ಸಿ.ಯು.ಸವಿ, ದೃಷ್ಟಿ ಚಾರಿಟೇಬಲ್ ಟ್ರಸ್ಟ್ ನ ನನಿರ್ದೇಶಕ ಸಂತೋಷ್‍ ಕೊಡಂಕೇರಿ, ಬೆಂಗಳೂರಿನ ಯುವಶಕ್ತಿ ಸಂಸ್ಥೆಯ ಜಂಟಿನಿರ್ದೇಶಕ ಬಾಬುರೆಡ್ಡಿ ವಿ. ರಾಜ್ಯ ಜಂಟಿ ನಿರ್ದೇಶಕ ವಿಜಯ ಭಾವರೆಡ್ಡಿ ಪಾಲ್ಗೊಳ್ಳಲಿದ್ದಾರೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಜೂ.2 : ಸಂತ್ರಸ್ಥರಿಗೆ ನೆರವು ನೀಡುವ “ಪ್ರೇರಣೆ” ಕಾರ್ಯಕ್ರಮ"

Leave a comment

Your email address will not be published.


*