ಜೂ.30 ರವರೆಗೆ ಮಾದಕ ವ್ಯಸನದ ವಿರುದ್ಧ ಜನಜಾಗೃತಿ

( ಫೋಟೊ ಕೃಪೆ : ಅಂತರ್ಜಾಲ)
Advertisement

ಸುಳ್ಯ: ತಾಲೂಕಿನಾದ್ಯಂತ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನ
ಏ. 21 ರಿಂದ  ಜೂ. 30 ರವರೆಗೆ ನಡೆಯಲಿದೆ.

Advertisement

ಮಾದಕ ವ್ಯಸನವು ಇಂದು ಬಹುದೊಡ್ಡ ಜಾಲವಾಗಿ ಹರಡುತ್ತಿದೆ.  ರಾಜ್ಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ ದ.ಕ ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ಮಾದಕ ವ್ಯಸನದ ಚಟ      ಸುಳ್ಯ ತಾಲೂಕಿನಾದ್ಯಂತ ದಿನದಿಂದ ದಿನಕ್ಕೆ ವೃದ್ಧಿಸುತ್ತಿರುವುದು ಜನರಲ್ಲಿ ಆತಂಕದ ವಾತವರಣ ಸೃಷ್ಟಿಸಿದೆ. ಭವ್ಯ ಭಾರತದ  ಭವಿಷ್ಯವನ್ನು ರೂಪಿಸಬೇಕಾದಂತಹ ಯವ ಸಮುದಾಯ ಮಾದಕ ವ್ಯಸನಕ್ಕೆ ತುತ್ತಾಗಿರುವುದು ಅಘಾತಕಾರಿ ಮತ್ತು ದಯನಿಯ ವಿಷಯ. ಇವುಗಳನ್ನು ಮನಗಂಡು ಇಬ್ಬನಿ ಸುಳ್ಯ ತಾಲೂಕಿನಾದ್ಯಂತ ಮಾದಕ ವ್ಯಸನದ ವಿರುದ್ದ ಬೃಹತ್ ಜನಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಿದೆ. ಈ  ಅಭಿಯಾನದ ಅಂಗವಾಗಿ ವಿವಿಧ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ.

Advertisement
Advertisement

ಪ್ಲೇ ಕಾರ್ಡ್ ಪ್ರದರ್ಶನ: ಸುಳ್ಯ ತಾಲೂಕಿನ ವಿವಿಧ ಸಾಧಕರು, ಅಧಿಕಾರಿಗಳು, ರಾಜಕಾರಣಿಗಳು, ಧಾರ್ಮಿಕ ಪಂಡಿತರು, ಮತ್ತು ಯುವಕರೊಂದಿಗೆ ಮಾದಕ ವ್ಯಸನದ ವಿರುದ್ದ ಪ್ಲೇ ಕಾರ್ಡ್ ಪ್ರದರ್ಶನ.

ಕರ ಪತ್ರ ವಿತರಣೆ: ಸುಳ್ಯ ತಾಲೂಕಿನ  ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ  ಮಾದಕ ವ್ಯಸನದ ವಿರುದ್ದ ಜಾಗೃತಿ ಮೂಡಿಸುವ ಕರಪತ್ರ ವಿತರಣೆ.

Advertisement

ವಿಚಾರ ಸಂಕಿರಣ:ಆರೋಗ್ಯ ಇಲಾಖೆ, ಸಾರ್ವಜನಿಕರು, ಸುಳ್ಯ ತಾಲೂಕಿನ ಸ್ನಾತಕೋತ್ತರ ವಿಧ್ಯಾರ್ಥಿಗಳು, ಸ್ನಾತಕೋತ್ತರ ಸಮಾಜ ಕಾರ್ಯ ವಿಧ್ಯಾರ್ಥಿಗಳು ಮತ್ತು ಸಮಾಜ ಕಾರ್ಯ ಪದವಿ ವಿಧ್ಯಾರ್ಥಿಗಳ ಸಮ್ಮುಖದಲ್ಲಿ ಮಾದಕ ವ್ಯಸನದ ವಿರುದ್ಧ ವಿಚಾರ ಸಂಕಿರಣ.

ಪ್ರತಿಜ್ಞೆ ಸ್ವೀಕಾರ: ಸುಳ್ಯ ತಾಲೂಕು ವ್ಯಾಪ್ತಿಯ ಪ್ರತೀ ಕಾಲೇಜು ಮತ್ತು ಶಾಲೆಗಳಲ್ಲಿ ಮಾದಕ ವ್ಯಸನದ ವಿರುದ್ಧ ಜನ ಜಾಗೃತಿ ಕಾರ್ಯಗಾರ ಹಾಗೂ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ.

Advertisement

ಬೀದಿ ನಾಟಕ:ಸುಳ್ಯ ತಾಲೂಕಿನ ವಿವಿಧ ಪಟ್ಟಣ ಪ್ರದೇಶದಲ್ಲಿ ಪ್ರತಿಷ್ಠಿತ ಬೀದಿ ನಾಟಕ ತಂಡದಿಂದ ಮಾದಕ ವ್ಯಸನದ ವಿರುದ್ದ ಬೃಹತ್ ಬೀದಿ ನಾಟಕ.

ಜನಜಾಗೃತಿ ಕಾಲ್ನಡಿಗೆ ಜಾಥ:ಮಾದಕ ವ್ಯಸನದ ವಿರುದ್ಧ ವಿವಿಧ ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಹಯೋಗದಿಂದಿಗೆ ಬೃಹತ್ ಜಾಗೃತಿ ಕಾಲ್ನಡಿಗೆ ಜಾಥ.

Advertisement

ಇ-ಪೋಸ್ಟರ್:ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ವಾಟ್ಸಪ್ ಇನ್ಸ್ಟಾಗ್ರಾಮ್ ಗಳಲ್ಲಿ ಮಾದಕ ವ್ಯಸನದ ವಿರುದ್ಧ ಜನ ಜಾಗೃತಿ.

ಜನಜಾಗೃತಿ ಕ್ರಾಂತಿ ಯಾತ್ರೆ:ಸುಳ್ಯ ನಗರದ 18 ವಾರ್ಡ್ ಗಳಲ್ಲಿ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಕ್ರಾಂತಿ ಯಾತ್ರೆ ಮತ್ತು ಪ್ರತೀ ವಾರ್ಡ್ ಗಳಲ್ಲಿ ಸಭಾ ಕಾರ್ಯಕ್ರಮ.

Advertisement

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಜೂ.30 ರವರೆಗೆ ಮಾದಕ ವ್ಯಸನದ ವಿರುದ್ಧ ಜನಜಾಗೃತಿ"

Leave a comment

Your email address will not be published.


*