ಜ್ಞಾನದೀಪದಲ್ಲಿ ನರ್ಸರಿ ಶಾಲಾ ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನ

Advertisement

ಬೆಳ್ಳಾರೆ : ಭಾರತ ಸರಕಾರದ ಯೋಜನಾ ಆಯೋಗದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯಾದ ಭಾರತ್ ಸೇವಕ್ ಸಮಾಜದ ವತಿಯಿಂದ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ 2019-20ನೇ ಸಾಲಿನ ಒಂದು ವರ್ಷದ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ತರಬೇತಿಗೆ ಸೇರಬಹುದಾಗಿದ್ದು, ತರಬೇತಿ ಪೂರ್ಣಗೊಳಿಸಿದವರಿಗೆ ಭಾರತ್ ಸೇವಕ್ ಸಮಾಜದ ಪ್ರಮಾಣ ಪತ್ರ ನೀಡಲಾಗುತ್ತದೆ. ತರಬೇತಿ ಪಡೆದವರಿಗೆ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮೊಂಟೆಸ್ಸರಿ ಶಿಕ್ಷಕಿಯರಾಗಿ, ಪಬ್ಲಿಕ್ ಸ್ಕೂಲ್‍ಗಳಲ್ಲಿ ನರ್ಸರಿ/ಮೊಂಟೆಸ್ಸರಿ ಶಿಕ್ಷಕಿಯರುಗಳಾಗಿ, ಅಡಲ್ಟ್ ಎಜ್ಯುಕೇಶನ್ ಸೆಂಟರ್‍ಗಳಲ್ಲಿ ಶಿಕ್ಷಕಿಯರುಗಳಾಗಿ, ಆರ್ಟ್ ಮತ್ತು ಕ್ರಾಫ್ಟ್ ಶಿಕ್ಷಕಿಯರುಗಳಾಗಿ ಸೇವೆ ಸಲ್ಲಿಸಬಹುದು ಅಥವಾ ಸ್ವಂತ ಪ್ಲೇಸ್ಕೂಲ್, ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬಹುದು. ಜ್ಞಾನದೀಪ ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ಈ ತರಬೇತಿಯನ್ನು ನಡೆಸಲಾಗುತ್ತಿದೆ.

Advertisement

ಜೂ.9ರಂದು ಉಚಿತ ಮಾಹಿತಿ ಕಾರ್ಯಾಗಾರ :

Advertisement
Advertisement

2019-20ನೇ ಸಾಲಿನ ದಾಖಲಾತಿಗಾಗಿ ಉಚಿತ ಮಾಹಿತಿ ಕಾರ್ಯಾಗಾರವು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಜೂ.9ರಂದು ಬೆಳಿಗ್ಗೆ 10.00ಗಂಟೆಗೆ ನಡೆಯಲಿದೆ. ಭಾರತ್ ಸೇವಕ್ ಸಮಾಜದ ವತಿಯಿಂದ ನಡೆಸಲ್ಪಡುವ ನರ್ಸರಿ ಶಾಲಾ ಶಿಕ್ಷಕಿಯರ ತರಬೇತಿ ಪ್ರಮಾಣ ಪತ್ರವು ದೇಶ ವಿದೇಶಗಳಲ್ಲಿ ಉದ್ಯೋಗ ಪಡೆಯಲು ಮಾನ್ಯತೆ ಹೊಂದಿದ್ದು, ಜ್ಞಾನದೀಪ ತರಬೇತಿ ಸಂಸ್ಥೆಯಲ್ಲಿ ಈ ತರಬೇತಿಯನ್ನು ಬಿ.ಎಡ್, ಡಿ.ಎಡ್ ಶಿಕ್ಷಣದ ಮಾದರಿಯಲ್ಲಿ ನೀಡಲಾಗುತ್ತಿದೆ. ಪಿಯುಸಿ ಅಥವಾ ಪದವಿ ಮುಗಿಸಿದ ಬಳಿಕ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿಯರುಗಳಾಗಿ ಉದ್ಯೋಗ ಪಡೆಯಲು ಈ ತರಬೇತಿಯನ್ನು ಪಡೆಯುವುದು ಅವಶ್ಯಕವಾಗಿದ್ದು ತರಬೇತಿ ಪಡೆಯಲಿಚ್ಚಿಸುವವರು ಉಚಿತ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ತರಬೇತಿಯ ಪೂರ್ಣ ವಿವರಗಳನ್ನು ಪಡೆದುಕೊಳ್ಳಬಹುದೆಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಜ್ಞಾನದೀಪದಲ್ಲಿ ನರ್ಸರಿ ಶಾಲಾ ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನ"

Leave a comment

Your email address will not be published.


*