ಜ.12 : ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನಿಂದ ಕಬಡ್ಡಿ ಪಂದ್ಯಾಟ

November 11, 2019
10:03 AM

ಗುತ್ತಿಗಾರು: ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ವತಿಯಿಂದ 16ನೇ ವರ್ಷದ ಕಬಡ್ಡಿ ಪಂದ್ಯಾಟ ಮತ್ತು ರಸ್ತೆ ಓಟ ಸ್ಪರ್ಧೆ ಜ.12 ರಂದು ಬೆಳಗ್ಗೆ 9 ಗಂಟೆಗೆ ದ.ಕ.ಜಿ.ಪ.ಸ.ಮಾ.ಹಿ.ಪ್ರಾ.ಶಾಲೆ ಗುತ್ತಿಗಾರಿನಲ್ಲಿ ನಡೆಯಲಿದೆ.

Advertisement

65 ಕೆ.ಜಿ. ಪುರುಷರ ಆಹ್ವಾನಿತ ತಂಡಗಳ ಹಾಗೂ ಸುಳ್ಯ ತಾಲೂಕು ಮಟ್ಟದ 14 ವರ್ಷದ ಬಾಲಕ ಬಾಲಕಿಯರ ಮತ್ತು 17 ವರ್ಷದ ಬಾಲಕ ಬಾಲಕಿಯರ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟ ನಡೆಯಲಿದೆ.

14 ವರ್ಷ ಹಾಗೂ 17 ವರ್ಷದ ಬಾಲಕ ಬಾಲಕಿಯರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 5000 ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ 3000 ನಗದು ಹಾಗೂ ಶಾಶ್ವತ ಫಲಕ, ಸೆಮಿಫೈನಲ್ ನಿರ್ಗಮಿತ 2 ತಂಡಕ್ಕೆ 2000 ನಗದು ಹಾಗೂ ಶಾಶ್ವತ ಫಲಕ ನೀಡಲಾಗುವುದು. 65 ಕೆ.ಜಿ ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 5000 ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ 4000 ನಗದು ಹಾಗೂ ಶಾಶ್ವತ ಫಲಕ, ಸೆಮಿಫೈನಲ್ ನಿರ್ಗಮಿತ 2 ತಂಡಕ್ಕೆ 2000 ನಗದು ಹಾಗೂ ಶಾಶ್ವತ ಫಲಕ ನೀಡಲಾಗುವುದು. 5 ವಿಭಾಗಗಳಿಗೆ ವೈಯಕ್ತಿಕ ಬಹುಮಾನಗಳಾದ ಉತ್ತಮ ದಾಳಗಾರ, ಹಿಡಿತಗಾರ ಹಾಗೂ ಸರ್ವಾಂಗೀಣ ಆಟಗಾರರಿಗೆ ನಗದು ಹಾಗೂ ಶಾಶ್ವತ ಫಲಕವಿರುವುದು.

10 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ರಸ್ತೆ ಓಟದಲ್ಲಿ ಪ್ರಥಮ ಬಹುಮಾನವಾಗಿ 500 ನಗದು ಹಾಗೂ ಚಿನ್ನದ ಪದಕ, ದ್ವಿತೀಯ ಬಹುಮಾನ 300 ನಗದು ಹಾಗೂ ಬೆಳ್ಳಿಯ ಪದಕ, ತೃತೀಯ ಬಹುಮಾನವಾಗಿ ನಗದು 200 ಹಾಗೂ ಕಂಚಿನ ಪದಕ ಮತ್ತು 4ರಿಂದ 10 ಸ್ಥಾನ ಪಡೆದ ಕ್ರೀಡಾಪಟುಗಳಿಗೆ ತಲಾ 100 ಹಾಗೂ ಕಂಚಿನ ಪದಕ ನೀಡಲಾಗುವುದು. ಈ ಬಗ್ಗೆ ಸಂಪರ್ಕಕ್ಕೆ: 9481620381 , 9448689861

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕುಶಾಲಿ ಗೌಡ, ಬೆಂಗಳೂರು
July 16, 2025
10:47 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅನ್ವಿತಾ ಸಿ
July 16, 2025
10:39 PM
by: ದ ರೂರಲ್ ಮಿರರ್.ಕಾಂ
ಕರಾವಳಿ ಕರ್ನಾಟಕ, ಕೇರಳ ಭಾರೀ ಮಳೆ ಸಾಧ್ಯತೆ
July 16, 2025
10:18 PM
by: The Rural Mirror ಸುದ್ದಿಜಾಲ
ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ
July 16, 2025
10:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group