ಜ.18 ರಿಂದ ಮಡಿಕೇರಿಯಲ್ಲಿ ನೂತನ ಕಟ್ಟಡದಲ್ಲಿ ಮುಳಿಯ ಜ್ಯುವೆಲ್ಸ್

January 15, 2020
7:16 AM

ಮಡಿಕೇರಿ: ಕಳೆದ 12 ವರ್ಷಗಳಿಂದ ಮಡಿಕೇರಿಯಲ್ಲಿ ವೈವಿಧ್ಯಮಯ ಚಿನ್ನಾಭರಣಗಳು ಹಾಗೂ ವಿಶ್ವಾಸಾರ್ಹ ವ್ಯವಹಾರದೊಂದಿಗೆ ಕೊಡಗಿನ ಜನತೆಯ ಮನಗೆದ್ದಿರುವ  ಮುಳಿಯ ಜ್ಯುವೆಲ್ಸ್ ಈಗ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಜ.18 ರಂದು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ.

ಮಡಿಕೇರಿಯ ಮಹಾದೇವಪೇಟೆಯಲ್ಲಿ 12 ವರ್ಷಗಳ ಹಿಂದೆ, ಮೊತ್ತ ಮೊದಲ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ ವಿಶಾಲ ಶೋರೂಮ್ ಎನ್ನುವ ಹೆಗ್ಗಳಿಕೆಯೊಂದಿಗೆ ಆರಂಭವಾದ ಮುಳಿಯ ಜ್ಯುವೆಲ್ಸ್ ನ ಶಾಖೆ ಇದೀಗ ಸಮೀಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಬಹು ಅಂತಸ್ತಿನ ಮೂರು ಸಾವಿರ ಚದರ ಅಡಿಯ ನೂತನ ಶೋರೂಮ್ ಎಲ್ಲಾ ಅತ್ಯಾಧುನಿಕ ಹಾಗೂ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಮಾತ್ರವಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಕಟ್ಟಡದ ಬೇಸ್ಮೆಂಟ್ ನಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶೋರೂಮ್‍ಗೆ ಎರಡು ಕಡೆಯಿಂದ ಪ್ರವೇಶವಿದ್ದು ಗ್ರಾಹಕರು ಮಹದೇವಪೇಟೆ ಮತ್ತು ಗಣಪತಿ ಸ್ಟ್ರೀಟ್ ಕಡೆಯಿಂದ ಪ್ರವೇಶಿಸಬಹುದು.

ಮುಳಿಯ ಜ್ಯುವೆಲ್ಸ್ ಚೇರ್ಮನ್ & ಮ್ಯಾನೆಂಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ ಪ್ರಥಮ  ಬಾರಿಗೆ ಕೊಡಗಿನ ಪಾರಂಪರಿಕ ಆಭರಣಗಳನ್ನು ಶುದ್ಧ 916 ಬಂಗಾರದಲ್ಲಿ ತಯಾರಿಸಿ ಜಾಗತಿಕ ಮನ್ನಣೆಗಳಿಸಿದ ಹೆಗ್ಗಳಿಕೆ ಮುಳಿಯ ಜ್ಯುವೆಲ್ಸ್ ನದ್ದು. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮುಳಿಯ ಸಂಸ್ಥೆ, ಕೊಡಗಿನ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಿ ತನು-ಮನ-ಧನ ಸಹಾಯವನ್ನು ನೀಡಿದೆ ಎಂದರು.ಹಲವಾರು ವರ್ಷಗಳಿಂದ ಕೊಡಗಿನವರೊಂದಿಗೆ ಬೆರೆತು ಕೊಡಗಿನವರೇ ಆಗಿದ್ದೇವೆ. ಕೊಡಗಿನ ಜನತೆ ಕೂಡ ನಮ್ಮನ್ನ ತಮ್ಮವರಂತೆ ಸ್ವೀಕರಿಸಿದ್ದಾರೆ. ಎಂದು ಕೇಶವ ಪ್ರಸಾದ್ ಮುಳಿಯ ಹೇಳಿದರು.

24-48 ಗಂಟೆಯೊಳಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿನ್ಯಾಸ ಹಾಗೂ ತೂಕದ ಆಭರಣಗಳನ್ನು ಷರತ್ತು ಬದ್ದವಾಗಿ ತಯಾರಿಸಿಕೊಡುವುದು ಮುಳಿಯದ ವಿಶೇಷತೆ. ಕೊಡಗಿನ ಸಾಂಪ್ರದಾಯಿಕ ಆಭರಣಗಳಾದ ಕೊಕ್ಕೆತಾತಿ, ಜೋಮಾಲೆ, ಹಾಗೂ ಗಿಳಿಯೋಲೆ, ನೆಕ್ಲೇಸ್, ಉಂಗುರ, ತಾಳಿ, ಕರಿಮಣಿ, ಕಾಲ್ಗೆಜ್ಜೆ, ಬೆಳ್ಳಿ ಮತ್ತು ವಜ್ರದಾಭರಣಗಳು ಮುಳಿಯದಲ್ಲಿ ಗ್ರಾಹಕರಿಗೆ ದೊರೆಯುತ್ತದೆ.

ಮುಳಿಯ ಜ್ಯುವೆಲ್ಲರ್ಸ್‍ನ ನೂತನ ಶೋರೂಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರನಟಿ ಹರ್ಷಿಕಾ ಪೂಣಚ್ಚ ಹಾಗೂ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ(ಸನ್ನಿಧಿ) ಪಾಲ್ಗೊಳ್ಳಲಿದ್ದಾರೆ. ಚಿತ್ರ ನಟಿಯರೊಂದಿಗೆ ಗ್ರಾಹಕರಿಗೆ ಸೆಲ್ಫಿತೆಗೆಯುವ ಅವಕಾಶವಿರುತ್ತದೆ.

ಸಮಾರಂಭದಲ್ಲಿ ಶಾಸಕರುಗಳಾದ  ಕೆ.ಜಿ. ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ  ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಕೊಡಗು ಜೆಡಿಎಸ್ ಅಧ್ಯಕ್ಷ  ಕೆ.ಎಂ.ಬಿ ಗಣೇಶ್ , ಮುಳಿಯ ಸಮೂಹ ಸಂಸ್ಥೆ ದಿಗ್ದರ್ಶಕರು ಮುಳಿಯ ಶ್ಯಾಮ ಭಟ್ ಇವರುಗಳು ಪಾಲ್ಗೊಳ್ಳಲಿದ್ದಾರೆ.

ಮುಳಿಯ ಹೊಸ ಶೋರೂಂ ವಿಶೇಷತೆಗಳು

* ವಿಶಾಲ ಹಾಗೂ ಹವಾನಿಯಂತ್ರಿತ ಶೋರೂಂ
* ಪಾರ್ಕಿಂಗ್ ವ್ಯವಸ್ಥೆ
* ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ
* ಚಿನ್ನ ಕೊಳ್ಳುವ ಅಪೂರ್ವ ಅನುಭವ
* ಮುಳಿಯದ ಎಲ್ಲಾ ಆಭರಣಗಳು 916 ಹಾಲ್‍ಮಾರ್ಕ್ ಶುದ್ಧತೆ
* ಗ್ರಾಹಕ ಸ್ನೇಹಿ, ಪ್ರಾಮಾಣಿಕ ಮತ್ತು ಪಾರದರ್ಶಕ ವಿಶ್ವಾಸಾರ್ಹ ವ್ಯವಹಾರ
* ಅಪ್ರತಿಮ ಆಯ್ಕೆ
* ಬೆಳ್ಳಿಯ ಹಾಗೂ ವಜ್ರದ ಆಭರಣಗಳ ವಿಶೇಷ ಸಂಗ್ರಹ
* ನುರಿತ, ಅನುಭವಿ ಸಿಬ್ಬಂದಿ ವರ್ಗ
* ಮದುವೆ ಆಭರಣಗಳ ಅಪ್ರತಿಮ ಆಯ್ಕೆಯ ಅವಕಾಶ
* ಕೊಡಗು ಪಾರಂಪರಿಕ ಆಭರಣಗಳ ಅಪೂರ್ವ ಸಂಗ್ರಹ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ
August 16, 2026
12:00 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ
August 16, 2026
7:30 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ
August 15, 2026
2:07 PM
by: ಸಾಯಿಶೇಖರ್ ಕರಿಕಳ
ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror