ಜ.26 ರಂದು ಮಾನವ ಸರಪಳಿ : ಸುಳ್ಯದಲ್ಲಿ ಸಭೆ

January 19, 2020
10:02 AM

ಸುಳ್ಯ:   ಎಸ್ ಕೆ ಎಸ್ ಎಸ್ ಎಫ್  ಕೇಂದ್ರ ಸಮಿತಿಯ ನಿರ್ದೇಶನದಂತೆ ಪ್ರತಿಯೊಂದು ಜಿಲ್ಲೆಯಲ್ಲಿಯೂ ಜನವರಿ 26 ರ ಪ್ರಜಾಪ್ರಭುತ್ವ ದಿನದಂದು ಎಸ್ ಕೆ ಎಸ್ ಎಸ್ ಎಫ್ ಮಾನವ ಸರಪಳಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ದ,ಕ,ಜಿಲ್ಲೆಯಲ್ಲಿ ಈ ಬಾರಿ ವಿಟ್ಲದಲ್ಲಿ ನಡೆಯಲಿದೆ.
ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಎಲ್ಲ ವಿಖಾಯ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಅಜ್ಜಾವರ ಖತೀಬ್ ಉಮ್ಮರ್ ಫೈಝಿ ವಿಖಾಯ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು  ಸುಳ್ಯದ ಸುಪ್ರೀಂ ಕಂಪೌಂಡ್ ನಲ್ಲಿ ನಡೆದ ವಿಖಾಯ ಕಾರ್ಯಕರ್ತರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಳ್ಯ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಹಸ್ಸನ್ ಆರ್ಷದಿ, ಮದ್ರಸಾ ಮೆನೇಜ್ ಮೆಂಟ್ ಅಧ್ಯಕ್ಷರಾದ
ತಾಜ್ ಮಹಮ್ಮದ್ ಸಂಪಾಜೆ, ಸುನ್ನಿ ಮಹಲ್ ಫೆಡರೇಷನ್ ಸುಳ್ಯ ಇದರ ಅಧ್ಯಕ್ಷರಾದ ಖತ್ತರ್ ಇಬ್ರಾಹಿಂ ಹಾಜಿ, ಎಸ್ ವೈ ಎಸ್  ಅಧ್ಯಕ್ಷರಾದ ಹಮೀದ್ ಹಾಜಿ ಸುಳ್ಯ, ಬೆಳ್ಳಾರೆ ಶಂಸುಲ್ ಉಲಮಾ ಟ್ರಸ್ಟ್ ಅಧ್ಯಕ್ಷರಾದ ಮಂಗಳ ಅಬೂಬಕ್ಕರ್, ಸುಪ್ರೀಂ ಅಹಮದ್ ಹಾಜಿ
ವಿಖಾಯ ಎಕ್ಟೀವ್ ವಿಂಗ್ ಸದಸ್ಯ ಆಶಿಕ್ ಸುಳ್ಯ , ರಝಾಕ್ ಉಸ್ತಾದ್ ಅಜ್ಜಾವರ , ಶಾಫಿ ಮುಕ್ರಿ,ಫಾರೂಕ್ ಅಡ್ಕ
ಕಲಂದರ್ ಎಲಿಮಲೆ,  ಷರೀಫ್ ಅಜ್ಜಾವರ, ತಾಜುದ್ದೀನ್ ಆರಂತೋಡು, ಹಾಗೂ  ವಿಖಾಯ ಕಾರ್ಯಕರ್ತರು ಭಾಗವಹಿಸಿದ್ದರು.

ವಿಖಾಯ ಕನ್ವೀನರ್ ತಾಜುದ್ದೀನ್ ಟರ್ಲಿ ಸ್ವಾಗತಿಸಿ, ಚೇರ್ಮನ್ ಜಮಾಲ್ ಬೆಳ್ಳಾರೆ ವಂದಿಸಿದರು,

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ
March 12, 2026
7:20 AM
by: ಮಿರರ್‌ ಡೆಸ್ಕ್
ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ
March 12, 2026
7:16 AM
by: ಮಿರರ್‌ ಡೆಸ್ಕ್
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತ ಇಲ್ಲ | ಉತ್ತಮ ದರಕ್ಕಾಗಿ ಓಪನ್‌ ಮಾರ್ಕೆಟ್‌ಗೆ ರೈತರ ಒಲವು
March 12, 2026
7:11 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಇಲ್ಲ | ಪ್ರತಿ 25 ದಿನಕ್ಕೊಂದು ಸಿಲಿಂಡರ್‌ ಪೂರೈಕೆ – ಸಚಿವ ಮುನಿಯಪ್ಪ ಭರವಸೆ
March 12, 2026
7:08 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror