ಡಾ. ಅನುರಾಧಾ ಕುರುಂಜಿಯವರ “ನುಡಿಯೊಳಗೊಂದಾಗಿ ನಡೆ” ಕೃತಿ ಅನಾವರಣ

Advertisement

ಸುಳ್ಯ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಅನುರಾಧಾ ಕುರಂಜಿ ಅವರ ಪಿ ಹೆಚ್.ಡಿ ಮಹಾ ಪ್ರಬಂಧದ ಕೃತಿ ರೂಪ “ನುಡಿಯೊಳಗೊಂದಾಗಿ ನಡೆ” ಇತ್ತೀಚೆಗೆ ಅನಾವರಣಗೊಂಡಿತು.

Advertisement

ಸುಳ್ಯದ ಅಚಲ ಪ್ರಕಾಶನವು ಹೊರತಂದ ಈ ಕೃತಿಯನ್ನು ಅರಂಬೂರು ಸರಳಿಕುಂಜದಲ್ಲಿ ನೂತನವಾಗಿ ನಿರ್ಮಿಸಿದ “ವಿಕಸನ” ದ ಗೃಹ ಪ್ರವೇಶದ ಸಂದರ್ಭದಲ್ಲಿ ಅಕಾಡೆಮಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅನಾವರಣಗೊಳಿಸಿ ಮಾತನಾಡಿ ‘ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಜ್ಞಾನಾಭಿವೃದ್ಧಿ ಸಾಧ್ಯ, ಆ ನಿಟ್ಟಿನಲ್ಲಿ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.

Advertisement
Advertisement

ಕಾರ್ಯಕ್ರಮದ ಆರಂಭದಲ್ಲಿ ಶುಭಾಶಂಸನೆಗೈದ ಪುರೋಹಿತ ನಾಗರಾಜ ಭಟ್ಟರು ‘ಶ್ರೀ ಲಕ್ಷ್ಮಿಯೊಂದಿಗೆ ಶ್ರೀ ಸರಸ್ವತಿಯ ಆರಾಧನೆಯನ್ನು ನಡೆಸುವ ಕಾರ್ಯ ಶ್ಲಾಘನೀಯ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಪಿಹೆಚ್.ಡಿ ಮಾರ್ಗದರ್ಶಕ ಡಾ. ಮಾಧವ ಪೆರಾಜೆ ಮಾತನಾಡಿ ‘ನಿರಂಜನರು ಸುಳ್ಯದ ಸುಪ್ರಸಿದ್ದ ಸಾಹಿತಿಯಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ಸಾಹಿತಿ ಎಂದು ಗುರುತಿಸಿಕೊಂಡವರು. ಅವರ ಬಗ್ಗೆ ಅಧ್ಯಯನಗಳು ನಡೆದದ್ದೇ ಕಡಿಮೆ. ಆ ನಿಟ್ಟಿನಲ್ಲಿ ಈ ಕೃತಿ ಅವರ ಬದುಕು ಹಾಗೂ ಸಾಹಿತ್ಯದ ಸಂಪೂರ್ಣ ಪರಿಚಯ ಮಾಡಿಕೊಡಲು ಸಹಕಾರಿಯಾಗಲಿದೆ ಎಂದರು.

Advertisement

ವೇದಿಕೆಯಲ್ಲಿ ಕುರುಂಜಿ ಪದ್ಮಯ್ಯ ಗೌಡ, ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ ಅಡ್ತಲೆ ಹಾಗೂ ಅಚಲ ಪ್ರಕಾಶನದ ಅಧ್ಯಕ್ಷ ಚಂದ್ರಶೇಖರ ಬಿಳಿನೆಲೆ ಉಪಸ್ಥಿತರಿದ್ದರು. ಲೇಖಕಿ ಡಾ. ಅನುರಾಧಾ ಕುರುಂಜಿ ಕೃತಿ ಹೊರತರಲು ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ವಂದನಾರ್ಪಣೆಗೈದರು.

ವಿಜೇತ್ ಶಿರ್ಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಡಾ. ಅನುರಾಧಾ ಕುರುಂಜಿಯವರ “ನುಡಿಯೊಳಗೊಂದಾಗಿ ನಡೆ” ಕೃತಿ ಅನಾವರಣ"

Leave a comment

Your email address will not be published.


*