ಡಿಸಿಸಿ ಚುನಾವಣೆ : ಅಡ್ಡಮತದಾನದ ವಿರುದ್ಧ ಕ್ರಮಕ್ಕೆ ಮುಂದಾದ ಬಿಜೆಪಿ?

Advertisement
Advertisement

ಸುಳ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಪ್ರತಿನಿಧಿಗಳಿಂದ ಅಡ್ಡಮತದಾನ ನಡೆದರೂ ಯಾವುದೇ ಕ್ರಮ ಆಗದಿರುವ ಬಗ್ಗೆ ಸುಳ್ಯದ ಬಿಜೆಪಿಯಲ್ಲಿ ಈಗ ಚರ್ಚೆ ಹೆಚ್ಚಾಗಿದೆ. ಇದೀಗ ಬಿಜೆಪಿಯು ಅಡ್ಡಮತದಾನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement

ಹೇಗೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಪ್ರಮುಖರ  ಹಾಗೂ ಸಂಘಪರಿವಾರದ ಪ್ರಮುಖರ ಸಭೆ ನಡೆದಿದೆ ಎಂದು ತಿಳಿದುಬಂದಿದೆ.

Advertisement
Advertisement

ಬಿಜೆಪಿ ಹಾಗೂ ಸಂಘಪರಿವಾರದ ಭದ್ರಕೋಟೆಯಾದ ಸುಳ್ಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ  ಸಹಕಾರಭಾರತಿ ಬಹುಮತ ಇದ್ದರೂ ಸೋಲು ಕಂಡಿದೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸಹಕಾರ ಭಾರತಿ ಅಭ್ಯರ್ಥಿಯಾಗಿ ವೆಂಕಟ್ ದಂಬೆಕೋಡಿ ಹಾಗೂ ಸೌಹಾರ್ದ ಸಹಕಾರಿ ಅಭ್ಯರ್ಥಿಯಾಗಿ ಕೆ ಎಸ್ ದೇವರಾಜ್ ಸ್ಫರ್ಧೆ ಮಾಡಿದ್ದರು. ಸುಳ್ಯ ಕ್ಷೇತ್ರದಲ್ಲಿ ಸಹಕಾರ ಭಾರತಿ ಮೇಲುಗೈ ಹೊಂದಿತ್ತು. ಸಹಜವಾಗಿಯೇ ಸಹಕಾರ ಭಾರತಿ ಗೆಲ್ಲುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ 7 ಮಂದಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸದಸ್ಯರು ಅಡ್ಡಮತದಾನ ಮಾಡಿದ ಪರಿಣಾಮವಾಗಿ ಕೆ ಎಸ್ ದೇವರಾಜ್   ಅವರು ವೆಂಕಟ್ ದಂಬೆಕೋಡಿ ವಿರುದ್ಧ ಗೆಲುವು ಸಾಧಿಸಿದ್ದರು.

Advertisement
Advertisement

ಈ ಅಡ್ಡಮತದಾನದ ಬಗ್ಗೆ  ಬಿಜೆಪಿ ಕಾರ್ಯಕರ್ತರೊಳಗೆ ವ್ಯಾಪಕ ಚರ್ಚೆ ಹಾಗೂ ಟೀಕೆ ವ್ಯಕ್ತವಾಗಿತ್ತು.  ಅಡ್ಡಮತದಾನ ಮಾಡಿದವರ ವಿರುದ್ಧ ಕ್ರಮವಾಗಬೇಕು ಎಂಬ ಒತ್ತಾಯ ಅಂದೇ ಕೇಳಿಬಂದಿತ್ತು. ಆದರೆ ಲೋಕಸಭಾ ಚುನಾವಣೆಯ ಕಾರಣದಿಂದ ಬಿಜೆಪಿ ಹಾಗೂ ಸಹಕಾರ ಭಾರತಿ ಮೌನವಾಗಿತ್ತು.  ಪುತ್ತೂರು ಹಾಗೂ ಬಂಟ್ವಾಳದಲ್ಲಿ  ಅಡ್ಡಮತದಾನ ಮಾಡಿದವರ ಬಗ್ಗೆ ಸ್ಪಷ್ಠ ಮಾಹಿತಿ ಇದ್ದ ಕಾರಣ ಸಹಕಾರ ಭಾರತಿಯಿಂದ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಸುಳ್ಯದಲ್ಲಿ ಚುನಾವಣೆಯ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದರು.

ಇದೀಗ ಚುನಾವಣೆಯ ಬಳಿಕ ಮತ್ತೆ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರು ಹಾಗೂ ಸಂಘಪರಿವಾರದ ಪ್ರಮುಖರು ಸಭೆ ನಡೆಸಿದ್ದು , ಅಡ್ಡಮತದಾನ ಮಾಡಿದವರು ಪಕ್ಷದ ಹಿರಿಯ ಬಳಿ ಒಪ್ಪಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಯಾರೊಬ್ಬರೂ ಒಪ್ಪಿಕೊಂಡಿಲ್ಲ.

Advertisement

ಹೀಗಾಗಿ ಮತದಾನ ಮಾಡಿದ ಎಲ್ಲರೂ ಪಕ್ಷದ ಹಾಗೂ ಸಹಕಾರ ಭಾರತಿಯ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ನೀಡುವ ಬಗ್ಗೆ ಅಭಿಪ್ರಾಯ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಈಗಾಗಲೇ ಅಡ್ಡಮತದಾನ ಮಾಡಿರುವ ಬಗ್ಗೆ ಹಲವರಲ್ಲಿ ಹೇಳಿದ್ದು, ಉಳಿದ ಯಾರೊಬ್ಬರೂ ಈ ಬಗ್ಗೆ ಮಾತನಾಡಿಲ್ಲವಾದ್ದರಿಂದ ಪಕ್ಷದ ಪ್ರಮುಖರು ಎಲ್ಲರೂ ರಾಜಿನಾಮೆ ನೀಡುವಂತೆ ಈಗ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂತೂ ವಾರದೊಳಗೆ ಅಡ್ಡ ಮತದಾನ ಮಾಡಿದವರ ವಿರುದ್ಧ ಬಿಜೆಪಿ ಕ್ರಮಗೊಳ್ಳಲಿದೆಯೇ ಎಂಬ ಚರ್ಚೆ ಈಗ ಹೆಚ್ಚಾಗಿದೆ.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಡಿಸಿಸಿ ಚುನಾವಣೆ : ಅಡ್ಡಮತದಾನದ ವಿರುದ್ಧ ಕ್ರಮಕ್ಕೆ ಮುಂದಾದ ಬಿಜೆಪಿ?"

Leave a comment

Your email address will not be published.


*