ಡಿಸೆಂಬರ್​ ವೇಳೆಗೆ ಬಿಜೆಪಿಗೆ ನೂತನ ರಾಷ್ಟ್ರೀಯ ಅಧ್ಯಕ್ಷ: ಅಮಿತ್ ಷಾ ಸುಳಿವು

October 14, 2019
9:48 PM

ನವದೆಹಲಿ: ವರ್ಷಾಂತ್ಯದಲ್ಲಿ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್​ ಷಾ ಒಬ್ಬರಿಗೆ ಒಂದೇ ಹುದ್ದೆ ನೀತಿಯಡಿ ತಾವು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಸ್ಥಾನವನ್ನು ತೊರೆಯುವ ಸುಳಿವು ನೀಡಿದ್ದಾರೆ.

ಡಿಸೆಂಬರ್​ ವೇಳೆಗೆ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರು ಅಧಿಕಾರ ಸ್ವೀಕರಿಸುವುದು ಖಚಿತ ಎಂದು ಅಮಿತ್​ ಷಾ ಸ್ಪಷ್ಟಪಡಿಸಿದ್ದಾರೆ. ನೇಪಥ್ಯದಲ್ಲಿ ನಿಂತು ಪಕ್ಷವನ್ನು ನಿಯಂತ್ರಿಸುವ ಸಾಧ್ಯತೆ ಇಲ್ಲ ಎಂದು ಹೇಳಿದ ಅವರು, 2014ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ತಾವು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲೂ ಇಂಥದ್ದೆ ಮಾತುಗಳು ಕೇಳಿ ಬರುತ್ತಿದ್ದವು. ಬಿಜೆಪಿ ಎಂಬುದು ​ ಯಾರೋ ಒಬ್ಬರು ನೇಪಥ್ಯದಲ್ಲಿ ನಿಂತು ಮುನ್ನಡೆಸುವಂಥ ಪಕ್ಷವಲ್ಲ. ತಮ್ಮ ನಂತರದಲ್ಲಿ ಬೇರೊಬ್ಬರು ಪಕ್ಷದ ಸಾರಥ್ಯ ವಹಿಸಿಕೊಂಡ ಬಳಿಕ ಇಂಥ ಭಾವನೆಗಳು ತಮ್ಮಿಂತಾವೇ ದೂರವಾಗಲಿದೆ ಎಂದು ಹೇಳಿದ್ದಾರೆ. ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೆಟ್‌ವರ್ಕ್ ಇಲ್ಲದಿದ್ದರೂ ಕರೆ ಮಾಡಬಹುದು…! ₹1.34 ಲಕ್ಷಕ್ಕೆ BSNL ಸ್ಯಾಟಲೈಟ್ ಫೋನ್ ಬಿಡುಗಡೆ
July 10, 2026
7:44 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ ಪ್ರಕರಣಗಳಲ್ಲಿ ಎಂಸಿಒಸಿಎ ಜಾರಿ ಪ್ರಶ್ನಿಸಿದ ಬಾಂಬೆ ಹೈಕೋರ್ಟ್ – ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೋರಿದ ಕೋರ್ಟ್
July 9, 2026
9:28 PM
by: ದ ರೂರಲ್ ಮಿರರ್.ಕಾಂ
ಗುಟ್ಕಾ ಜಾಲಕ್ಕೆ ಮಹಾರಾಷ್ಟ್ರದ ಭಾರೀ ಹೊಡೆತ..! 700ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲು – ಕಳಪೆ ಅಡಿಕೆ ಸಾಗಾಟವೂ ಈ ವ್ಯಾಪ್ತಿಯಲ್ಲಿ..!
July 9, 2026
9:12 PM
by: ಮಿರರ್‌ ಡೆಸ್ಕ್‌
ಮಂಗಳೂರಿನಲ್ಲಿ ಉದ್ಯೋಗ ಮೇಳ – ಜುಲೈ 14ರಂದು ನೇರ ಸಂದರ್ಶನ – ಬ್ಯಾಂಕ್‌ನಿಂದ ಟೆಕ್ನಿಕಲ್‌ ಹುದ್ದೆಗಳವರೆಗೆ ಅವಕಾಶ
July 9, 2026
8:51 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror