ಡಿ.21 ರಂದು ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರ ಉದ್ಘಾಟನೆ

ಬದಿಯಡ್ಕ: ಪೆರ್ಲ ನಾಲಂದ ಕಾಲೇಜು ಎನ್ನೆಸೆಸ್ ಘಟಕದ ವಿಶೇಷ ಸಪ್ತದಿನ ಶಿಬಿರವು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಡಿ.21ರಂದು ಆರಂಭವಾಗಲಿದ್ದು 27ರ ತನಕ ನಡೆಯಲಿದೆ.

Advertisement

ಡಿ.21 ರಂದು ಸಂಜೆ 4 ಗಂಟೆಗೆ ಅಗಲ್ಪಾಡಿ ಶಾಲಾ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕುಂಬ್ಡಾಜೆ ಪಂಚಾಯತಿ ಅಧ್ಯಕ್ಷೆ ಫಾತಿಮತ್ ಝುಹರ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಗ್ರಾ.ಪಂ.ಉಪಾಧ್ಯಕ್ಷ ಆನಂದ ಕೆ. ಮವ್ವಾರ್ ಅಧ್ಯಕ್ಷತೆ ವಹಿಸಲಿದ್ದು, ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement

ನಾಲಂದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ, ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ., ಕುಂಬ್ಡಾಜೆ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಿಸಿರಿಯಾಬಿ ಎಂ., ಕ್ಷೇಮ ಸ್ಥಾಯಿ ಸಮಿತಿಯ ಅಧ್ಯಕ್ಷ ಅಡ್ವ. ಮೊಹಮ್ಮದ್ ಕ್ವಾಸಿಮ್ ಎ., ಆರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಯಶೋಧ ಎನ್., ವಾರ್ಡು ಸದಸ್ಯೆ, ಶಿಬಿರದ ಸಂಘಟನಾ ಸಮಿತಿಯ ಅಧ್ಯಕ್ಷೆ ಶಾಂತ ಎಸ್. ಭಟ್, ವಾರ್ಡು ಸದಸ್ಯ ಎಸ್. ಮೊಹಮ್ಮದ್ ಕುಂಞ, ಶಶಿಧರ ಟಿ., ಕುಂಬ್ಡಾಜೆ ಪಂಚಾಯತಿ ಕಾರ್ಯದರ್ಶಿ ಅಚ್ಚುತ ಮಣಿಯಾಣಿ ಕೆ. ಅಗಲ್ಪಾಡಿ ಶಾಲಾ ಮ್ಯಾನೇಜರ್ ನಾರಾಯಣ ಶರ್ಮ, ಪ್ರಾಂಶುಪಾಲ ಸತೀಶ್ ವೈ., ಹೈಸ್ಕೂಲ್ ಮುಖ್ಯ ಶಿಕ್ಷಕ ಗಿರೀಶ ಎಂ., ಎಲ್ ಪಿ. ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್, ಶಾಲಾ ಪಿಟಿಎ ಅಧ್ಯಕ್ಷ ರವಿರಾಜ ಶರ್ಮ, ಎಂಪಿಟಿಎ ಅಧ್ಯಕ್ಷೆ ನಯನ, ಉಪ್ಪಂಗಳ ಟ್ರಸ್ಟ್ ನ ಕಾರ್ಯದರ್ಶಿ ರಂಗ ಶರ್ಮ, ಅಗಲ್ಪಾಡಿ ಶಾಲಾ ನಿವೃತ್ತ ಶಿಕ್ಷಕ ರಾಮಚಂದ್ರ ಭಟ್, ನಾಲಂದ ಕಾಲೇಜಿನ ಸ್ಟಾಫ್ ಸೆಕ್ರೆಟರಿ ಕೇಶವ ಶರ್ಮ, ಪಿಟಿಎ ಅಧ್ಯಕ್ಷ ವಿಷ್ಣುಮೂರ್ತಿ ಎಚ್. ವಿ., ಕುಂಬ್ಡಾಜೆ ಪಂಚಾಯತಿ ಸಿಡಿಎಸ್ ಅಧ್ಯಕ್ಷೆ ಮೀನಾಕ್ಷಿ, ನಾಲಂದ ಕಾಲೇಜು ಯೂನಿಯನ್ ಅಧ್ಯಕ್ಷೆ ರಶ್ಮಿ ಕೆ., ಮಾಜಿ ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ರೂಪ ಕೆ., ಸುದೀಶ್, ಭವ್ಯ ಮತ್ತಿತರರು ಉಪಸ್ಥಿತರಿರುವರು.

ವಿಶೇಷ ಸಪ್ತ ದಿನ ಶಿಬಿರದ ಭಾಗವಾಗಿ ಅಗಲ್ಪಾಡಿ ಶಾಲೆಯಿಂದ ಮಾರ್ಪನಡ್ಕ, ಅಗಲ್ಪಾಡಿ ಶಾಲೆಯಿಂದ ನಾರಂಪಾಡಿ, ಜಯನಗರ ಎಸ್ ಸಿ ಕಾಲನಿಯ ರಸ್ತೆ ಬದಿ ಶುಚೀಕರಣ ಹಾಗೂ ಚರಂಡಿಗಳ ನಿರ್ಮಾಣ, ನಾರಂಪಾಡಿ ಪೇಟೆ ಹಾಗೂ ಶಾಲಾ ಪರಿಸರ ಶುಚೀಕರಣ, ಶೈಕ್ಷಣಿಕ, ವ್ಯಕ್ತಿತ್ವ ವಿಕಸನ ತರಗತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಡಿ.21 ರಂದು ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರ ಉದ್ಘಾಟನೆ"

Leave a comment

Your email address will not be published.


*