ಸುಳ್ಯ: ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕು ಇದರ ನೇತೃತ್ವದಲ್ಲಿ ಡಾ| ಕುರುಂಜಿ ವೆಂಕಟರಮಣ ಗೌಡರವರ 91ನೇ ಜಯಂತೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಹಾಗೂ ರೋಟರಿ ಕ್ಲಬ್ ಸುಳ್ಯ ಇದರ ಸಹಯೋಗದಲ್ಲಿ ಡಿಸೆಂಬರ್ 23 ಸೋಮವಾರ ಪೂರ್ವಾಹ್ನ ಗಂಟೆ 10 ರಿಂದ ಡಾ. ಕುರುಂಜಿ ವೆಂಕಟರಮಣ ಗೌಡರಿಂದ ಸುಳ್ಯ ಅಭಿವೃದ್ಧಿಯ ಕೊಡುಗೆ ಎನ್ನುವ ವಿಷಯದಲ್ಲಿ ವಿಚಾರ ಸಂಕಿರಣ ಹಾಗೂ ವಿನಿಮಯಗಳು ಹಮ್ಮಿಕೊಳ್ಳಲಾಗಿದ್ದು ಸಾಹಿತಿ ಹಾಗೂ ನಿವೃತ್ತ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಡಾ| ಪ್ರಭಾಕರ ಶಿಶಿಲರವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇದರೊಂದಿಗೆ ಅರ್ಕಿಟೆಕ್ ಇಂಜಿನಿಯರ್ ಸಾಯಿರಾಂರವರು ನೀರಿಂಗಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕಿನ ಯುವಕ- ಯುವತಿ ಮಂಡಲಗಳು ಹಾಗೂ ಇತರ ಹವ್ಯಾಸಿ ಸಂಸ್ಥೆಗಳ ಸದಸ್ಯರುಗಳು ಭಾಗವಹಿಸಬೇಕೆಂದು, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಶಂಕರ್ ಪೆರಾಜೆ ಹಾಗೂ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲುರವರು ಜಂಟಿಯಾಗಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿಕೊಂಡಿರುತ್ತಾರೆ.