ಡೆಂಗ್ಯು ದಿನ ಕಳೆಯಿತು….! ಎಲ್ಲೆಡೆ ಬೇಕಿನ್ನು ಎಚ್ಚರ…!

Advertisement
Advertisement

ಸುಳ್ಯ : ಡೆಂಗ್ಯು ಜ್ವರ ಹಾಗೆಯೇ ನಿಧಾನವಾಗಿ ಪಸರಿಸಲು ಆರಂಭವಾಗಿದೆ. ಜನರ ಆರೋಗ್ಯದ ಹಿತದೃಷ್ಠಿಯಿಂದ ಈಗಲೇ ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದೆ.

Advertisement

ಪ್ರತೀ ಬಾರಿಯೂ ಕೂಡಾ ಡೆಂಗ್ಯು ಜ್ವರದ ಲಕ್ಷಣಗಳು ವಿವಿದೆಡೆ ಕಾಣಿಸುತ್ತದೆ. ವ್ಯಾಪಕವಾಗಿ ಹರಡಿದ ಬಳಿಕ ಇಲಾಖೆಗಳು ಎಚ್ಚೆತ್ತುಕೊಳ್ಳುತ್ತವೆ. ಆ ಬಳಿಕ ಯಾವುದೇ ಕ್ರಮಗಳು ಪರಿಣಾಮವಾಗುವುದಿಲ್ಲ. ಅದಕ್ಕಾಗಿ ಆರಂಭದಲ್ಲಿಯೇ ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದೆ. ಈಗಲೇ ಬೇಕಾದ ಎಲ್ಲಾ ಸಿದ್ಧತೆಗಳು ನಡೆಸಿದರೆ ವ್ಯಾಪಕವಾಗಿ ಹರಡಬಹುದಾದ ಸಾಧ್ಯತೆಯನ್ನು ಕಡಿಮೆ ಮಾಡಬಹುದು.  ಇದುವರೆಗಿನ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ  ಇದುವರೆಗೆ ಒಟ್ಟು 58 ಡೆಂಗ್ಯು  ಪ್ರಕರಣಗಳು  ದೃಢಪಟ್ಟಿವೆ. ಕಳೆದ ವರ್ಷ ಒಟ್ಟು 600 ಡೆಂಗ್ಯು ಪ್ರಕರಣಗಳು ಅಧಿಕೃತವಾಗಿ ಇಲಾಖೆ ಪ್ರಕಟ ಮಾಡಿತ್ತು.

Advertisement
Advertisement

ಡೆಂಗ್ಯು ಲಕ್ಷಣ ಏನು ? :

ಇದ್ದಕ್ಕಿದ್ದಂತೆಯೇ ತೀವ್ರ ಜ್ವರ, ಹಣೆಯ ಭಾಗದಲ್ಲಿ ನೋವು, ಕಣ್ಣುಗುಡ್ಡೆಗಳಲ್ಲಿ ನೋವು, ಮಾಂಸಖಂಡಗಳಲ್ಲಿ ತೀವ್ರ ನೋವು ಇದ್ದಲ್ಲಿ ಅದನ್ನು ಡೆಂಗ್ಯು ಜ್ವರ ಎಂದು ಅಂದಾಜಿಸಬಹುದು. ಮೈಮೇಲೆ ಕೆಂಪು ಗುಳ್ಳೆಗಳು, ಕಣ್ಣು ಕೆಂಪಾಗುವುದು, ವಸಡು ಹಾಗೂ ಮೂಗಿನಲ್ಲಿ ರಕ್ತಸ್ರಾವದ ಲಕ್ಷಣ, ಕೆಂಪಾದ ಮೂತ್ರ, ಮಲ ಕಪ್ಪಾಗಿದ್ದಲ್ಲಿ ಕೂಡಲೇ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳಬೇಕು ಎಂದು ಆರೋಗ್ಯ ಇಲಾಖೆಯ ಹೇಳುತ್ತದೆ.

Advertisement
Advertisement

ನಿಯಂತ್ರಣ ಹೇಗೆ ?

ಸೋಂಕು ಹೊಂದಿದ ಈಡಿಸ್ ಈಜಿಪ್ಟೈ ಸೊಳ್ಳೆಗಳಿಂದಾಗಿ ಡೆಂಗ್ಯು ಹರಡುತ್ತದೆ. ಮುಖ್ಯವಾಗಿ ಈ ಸೊಳ್ಳೆಗಳು ಮುಸ್ಸಂಜೆ ಮತ್ತು ಮುಂಜಾನೆಯ ವೇಳೆ ಕಚ್ಚುತ್ತವೆ. ಆದುದರಿಂದ ಡೆಂಗ್ಯು ಜ್ವರದಿಂದ ತೊಂದರೆಗೊಳಗಾದವರು ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಹಗಲು ಹೊತ್ತಿನಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವ ಮಕ್ಕಳು, ಗರ್ಭಿಣಿಯರು, ಬಾಣಂತಿ, ಹಾಗೂ ವಯಸ್ಸಾದವರು ಕೂಡಾ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಪರಿಸರದಲ್ಲಿ ಸ್ವಚ್ಛತೆ, ಘನತ್ಯಾಜ್ಯ ಸಮರ್ಪಕ ವಿಲೇವಾರಿ, ನೀರು ಸಂಗ್ರಹಿಸುವಾಗ ಭದ್ರವಾದ ಮುಚ್ಚಳ ಅಳವಡಿಸುವುದು, ನೀರು ನಿಲ್ಲದಂತೆ ಎಚ್ಚರ ಸೇರಿದಂತೆ ಮುಂಜಾಗ್ರತೆ ವಹಿಸಬೇಕು.

Advertisement

ಈಗ ಎಲ್ಲಿದೆ ಜ್ವರ ಲಕ್ಷಣ ?

ಸುಳ್ಯ ತಾಲೂಕಿನ ವಿವಿಧ ಕಡೆ ಜ್ವರದ ಪ್ರಕರಣ ಇದೆ. ಆದರೆ ಎಲ್ಲೂ ಡೆಂಗ್ಯು ಬಗ್ಗೆ ವರದಿ ಇಲ್ಲ. ಆದರೆ ಕಡಬ ತಾಲೂಕಿನ ವಿವಿಧ ಕಡೆ ಜ್ವರದ ಲಕ್ಷಣ ಇದೆ. ಕೋಡಿಂಬಾಳ, ಕಲ್ಲುಗುಡ್ಡೆ, ಹೊಸ್ಮಠ, ಮರ್ದಾಳ, ಐತ್ತೂರು ಪ್ರದೇಶಗಳಲ್ಲಿ ಡೆಂಗ್ಯು ಹರಡಿದ ಬಗ್ಗೆ ಸಾರ್ವಜನಿಕರು ಹೇಳುತ್ತಾರೆ.

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಡೆಂಗ್ಯು ದಿನ ಕಳೆಯಿತು….! ಎಲ್ಲೆಡೆ ಬೇಕಿನ್ನು ಎಚ್ಚರ…!"

Leave a comment

Your email address will not be published.


*