ತಡೆಯಾಜ್ಞೆ ಇದ್ದರೂ ಕಾಮಗಾರಿ ಮುಂದುವರಿಕೆ – ಆರೋಪ

( ಸಾಂದರ್ಭಿಕ ಚಿತ್ರ )
Advertisement

ಕಡಬ: ಐತ್ತೂರು ಗ್ರಾಮದ ಮಂಡೆಕರ ಎಂಬಲ್ಲಿ  ನ್ಯಾಯಾಲಯ ತಡೆಯಾಜ್ಞೆ ನೀಡಿದರೂ ಕೆ.ಎಫ್.ಡಿ.ಸಿಯವರು ಕಾಮಗಾರಿ ನಡೆಸಿದ್ದು ಈ ಬಗ್ಗೆ ಇಲಾಖೆಯ ವಿರುದ್ದ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಾಗಿದೆ. ಇದೂ ಅಲ್ಲದೆ ಕೆ.ಎಫ್.ಡಿ.ಸಿ.ಯವರು ನನಗೆ ವೃಥಾ ಕಿರುಕುಳ ನೀಡಿ ಸಾಕ್ಷಿ ನಾಶಕ್ಕೆ ಯತ್ನಿಸುತ್ತಿದ್ದಾರೆ, ಈ ಬಗ್ಗೆ ಹೈಕೋರ್ಟ್‍ನಲ್ಲಿ ದಾವೆ ಹೂಡುವುದಾಗಿ ನಾಗಪ್ಪ ಮಂಡೆಕರ ಹೇಳಿದ್ದಾರೆ.

Advertisement

ಅವರು ಬುಧವಾರ ಕಡಬದಲ್ಲಿ ಸುದ್ದಿಗೋಷ್ಟಿಯಲ್ಲಿ  ಮಾತನಾಡಿದರು.ಸರಕಾರಿ ಜಾಗದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದವರು ರಬ್ಬರ್ ಪ್ಲಾಂಟೆಷನ್, ವಿದ್ಯುತ್ ಬೇಲಿ ನಿರ್ಮಾಣ ಮಾಡಿದ್ದಾರೆ, ಪ್ಲಾಂಟೆಷನ್ ನಿರ್ಮಾಣದ ಮೊದಲೇ ನ್ಯಾಯಾಲಯ ತಡೆಯಾಜ್ಞೆ ನೀಡಿದರೂ ಕಾಮಗಾರಿ ನಡೆಸುತ್ತಿದ್ದಾರೆ. ನನ್ನ ಮನೆಗೆ ಹೋಗಲು ಇಲ್ಲಿ ರಸ್ತೆ ಇದ್ದು ಈ ರಸ್ತೆಯನ್ನು ಕರ್ನಾಟಕ ಅಭಿವೃದ್ದಿ ನಿಗಮ(ಕೆ.ಎಫ್.ಡಿ.ಸಿಯವರು) ಮುಚ್ಚಲು ಯತ್ನಿಸಿ ಅದರ ಜಾಗದಲ್ಲಿ ಬಲತ್ಕಾರವಾಗಿ ರಬ್ಬರ್ ಗಿಡಗಳನ್ನು ನೆಟ್ಟಿದ್ದಾರೆ, ಅಲ್ಲದೆ ಆ ಜಾಗದ ಸುತ್ತಲೂ ವಿದ್ಯುತ್ ಬೇಲಿ ನಿರ್ಮಾಣ ಮಾಡಿದ್ದಾರೆ, ಇದರಿಂದ ನಮಗೆ ಮನೆಯಿಂದ ಹೊರ ಹೋಗಲು ಆಗದಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ರಬ್ಬರ್ ಗಿಡ ನೆಡಲು ಪ್ರಯತ್ನಿಸುತ್ತಿದ್ದಾಗ ನಾನು ಅವರ ವಿರುದ್ದ ಪುತ್ತೂರು ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದು ಈ ಬಗ್ಗೆ ನ್ಯಾಯಾಲಯವು ಕೆ.ಎಫ್.ಡಿ.ಸಿಯ ವಿರುದ್ದ ರಸ್ತೆಯನ್ನು ಮುಚ್ಚದಂತೆ ನಿರ್ಬಂಧಾಜ್ಞೆ ನೀಡಿರುತ್ತದೆ, ಹೀಗಿದ್ದರೂ ಬಳಿಕ ಕೆ.ಎಫ್.ಡಿ.ಸಿಯ ಅಧಿಕಾರಿಗಳು ಬಲತ್ಕಾರವಾಗಿ ತಂತಿ ಬೇಲಿ ಹಾಕಿ ಹಾಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುತ್ತಾರೆ, ಅಲ್ಲದೆ ಆ ರಸ್ತೆಯಲ್ಲಿ ಹೋಗಲು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ತೊಂದರೆಯಾಗಿದೆ ಎಂದು  ನಾಗಪ್ಪ ಅವರು ಹೇಳಿದರು.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ತಡೆಯಾಜ್ಞೆ ಇದ್ದರೂ ಕಾಮಗಾರಿ ಮುಂದುವರಿಕೆ – ಆರೋಪ"

Leave a comment

Your email address will not be published.


*