ಸುಳ್ಯ: ಜನಪ್ರತಿನಿಧಿಗಳು ಎಂದರೆ ಪ್ರತಿ ಹೆಜ್ಜೆ ಹೆಜ್ಜೆಗೂ ಹವಾ ನಿಯಂತ್ರಿತ ವಾಹನದಲ್ಲಿಯೇ ಓಡಾಡಬೇಕು ಎಂಬ ಒಂದು ವಾತಾವರಣ ಇದೆ. ಆದರೆ ಜನಪ್ರತಿನಿಧಿಗಳ ಮಧ್ಯೆ ಉರಿ ಬಿಸಿಲಿನಲ್ಲಿಯೂ ತಾಲೂಕು ಪಂಚಾಯತ್ ನಿಂದ ನಗರ ಪಂಚಾಯತ್ ಗೆ ನಡೆದುಕೊಂಡೇ ಬಂದ ಸಚಿವರು ಮತ್ತು ಶಾಸಕರು ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಎಸ್.ಅಂಗಾರ ಪಾದಯಾತ್ರೆ ನಡೆಸಿ ಸರಳತೆ ಮೆರೆದರು.
ಶನಿವಾರ ಸುಳ್ಯ ಪ್ರವಾಸ ಮಾಡಿದ ಸಚಿವ ಖಾದರ್ ತಾಲೂಕು ಪಂಚಾಯತ್ ನಲ್ಲಿ ಸಭೆ ಮುಗಿಸಿ ಹತ್ತಿರದಲ್ಲೇ ಇರುವ ನ.ಪಂ.ನತ್ತ ಹೆಜ್ಜೆ ಹಾಕಿದರು. ಸಚಿವರ ಜೊತೆ ಶಾಸಕರು ಪಾದಯಾತ್ರೆಗೆ ಸಾಥ್ ನೀಡಿದಾಗ ವಾಹನ ಏರದೇ ಇತರ ಜನಪ್ರತಿನಿಧಿಗಳು ಅಧಿಕಾರಿಗಳೂ ಸಚಿವ, ಶಾಸಕರ ಜೊತೆ ನಡೆದುಕೊಂಡೇ ಬಂದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ತಾಲೂಕು ಪಂಚಾಯತ್ ನಿಂದ ನಗರ ಪಂಚಾಯತ್ ಗೆ ಸಚಿವರು, ಶಾಸಕರು ನಡೆದೇ ಬಂದರು..!"