ಸುಳ್ಯ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ 26ನೇ ತುರ್ತು ಸೇವಾ ಯೋಜನೆಯ ಸೇವಾ ಹಸ್ತಾಂತರ ನಡೆಯಿತು.
ಸುಳ್ಯ ದೊಡ್ಡತೋಟ ಗಬಲಡ್ಕ ಬಾಲಕೃಷ್ಣ ಭಂಡಾರಿಯವರ ಕಿರಿಯ ಮಗ ಪುನೀತ್ ಅವರು ಶಾಲಾ ಮೈದಾನದಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಟ ಆಡುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಕುತ್ತಿಗೆ ಮತ್ತು ಬೆನ್ನು ಹುರಿಯ ನಡುವಿನ ನರ ಸಡಿಲಗೊಂಡು ಉಸಿರಾಟವಾಡಲು ತೀವ್ರ ಸಮಸ್ಯೆಯಾಗಿ ತಕ್ಷಣ ಮಂಗಳೂರಿನ ಫಾಧರ್ ಮುಲ್ಲರ್ ಆಸ್ವತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಿದ ವೈದ್ಯರು ಬದುಕುವುದೇ ಕಷ್ಟ ಎಂದು ತಿಳಿಸಿದರು. ಆದರೆ ಸತತ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಚಿಕಿತ್ಸೆಯ ದಿನದ ವೆಚ್ಚ 15,000 ರೂಪಾಯಿ ತಗಲುತ್ತಿದ್ದು ಪುನೀತ್ ಅವರ ಅಣ್ಣನಿಗೆ ದೊಡ್ಡತೋಟದಲ್ಲಿ ಸೆಲೂನ್ ಅಂಗಡಿ ಇದೆ ಅಷ್ಟೇ ಬೇರೇನೂ ಆದಾಯ ಇಲ್ಲದ ಈ ಕುಟುಂಬ ಕಂಗಾಲಾಗಿತ್ತು. ಇವರ ಕಷ್ಟವನ್ನು ಅರಿತ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ರೂ.10,000 ಚೆಕ್ ಅನ್ನು ಇಂದು ಪುನೀತ್ ಅವರ ಮನೆಯಲ್ಲಿ ಹಸ್ತಾಂತರಿಸಲಾಯಿತು.
ಈ ಸಮಯದಲ್ಲಿ ಪುನೀತ್ ನ ಅಣ್ಣ ವಿನಯ್ ಕುಮಾರ್ ಮತ್ತು ಟ್ರಸ್ಟ್ ಸೇವಾ ಬಾಂಧವರು ಉಪಸ್ಥಿತರಿದ್ದರು.