ಬೆಂಗಳೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಸಹ ಪೈಲಟ್ ಆಗಿ ಸ್ವದೇಶಿ ನಿರ್ವಿುತ ಲಘು ಯುದ್ಧವಿಮಾನ ತೇಜಸ್ನಲ್ಲಿ ಹಾರಾಟ ನಡೆಸಿದರು. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೊರಟು ಅವರು ತೇಜಸ್ ನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಹಾರಾಟ ನಡೆಸಿದರು. ಆ ಮೂಲಕ ತೇಜಸ್ನಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹಿರಿಮೆಗೆ ಪಾತ್ರರಾದರು.
‘ನನ್ನ ಜೀವನದಲ್ಲಿ ಇದೊಂದು ವಿಶೇಷವಾದ ದಿನ. ನಾನು ಮೊದಲ ಬಾರಿಗೆ ರಕ್ಷಣಾ ಸಚಿವನಾಗಿದ್ದೇನೆ. ನಮ್ಮ ಸ್ವದೇಶಿ ನಿರ್ವಣದ ತೇಜಸ್ನ ಸಾಮರ್ಥ್ಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದರಿಂದ ಹಾರಾಟ ನಡೆಸಿದ್ದೇನೆ. ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲು ನಮ್ಮ ಸೈನಿಕರಲ್ಲಿರುವ ಸ್ಥೈರ್ಯ, ಧೈರ್ಯ ನೋಡಿ ಖುಷಿಯಾಗಿದೆ. ತೇಜಸ್ ನಿರ್ವಣಕ್ಕೆ ಕೈ ಜೋಡಿಸಿರುವ ಎಚ್ಎಎಲ್, ಎಡಿಎ, ಡಿಆರ್ಡಿಒ ಸಂಸ್ಥೆಗೆ ಸಚಿವರು ಅಭಿನಂದನೆ ತಿಳಿಸಿದರು.
ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಒಟ್ಟು ಎರಡು ತೇಜಸ್ ಯುದ್ಧ ವಿಮಾನಗಳನ್ನು ತರಲಾಗಿತ್ತು. ಅದರಲ್ಲಿ ಟ್ರೖೆನರ್ ಜೆಟ್ ಫೈಟರ್ನಲ್ಲಿ ರಾಜನಾಥ್ ಸಿಂಗ್ ಹಾರಾಟ ನಡೆಸಿದರು.