ತೊಡಿಕಾನ ಜಾತ್ರೆ: ಪೂರ್ವಭಾವಿ ಸಭೆ

April 10, 2019
4:18 AM

ತೊಡಿಕಾನ ಜಾತ್ರೆ: ಪೂರ್ವಭಾವಿ ಸಭೆ
ಸುಳ್ಯ ಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಎ.13ರಿಂದ 19ರವರೆಗೆ ನಡೆಯಲಿದ್ದು ಇವರ ಪೂರ್ವಭಾವಿ ಸಭೆಯು ಮಾ.31ರಂದು ದೇವಳದ ಸಭಾಂಗಣದಲ್ಲಿ ವ್ಯ.ಸ.ಅಧ್ಯಕ್ಷ ಕೇಶವ ಯು.ಕೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಜೀ.ಸ.ಅಧ್ಯಕ್ಷ ಪಿ.ಬಿ ದಿವಾಕರ ರೈಯವರು ಜಾತ್ರೋತ್ಸವದ ಪೂರ್ವ ತಯಾರಿಯ ಕುರಿತು ವಿವರ ನೀಡಿದರು. ಈ ಸಂದರ್ಭದಲ್ಲಿ ಉಪಸಮಿತಿಗಳನ್ನು ರಚಿಸಿ ಸಂಚಾಲಕರನ್ನು ನೇಮಿಸಿ ಜವಾಬ್ದಾರಿ ಹಂಚಲಾಯಿತು. ಸೀಮೆಗೆ ಸಂಬಂಧಪಟ್ಟ ಗ್ರಾಮಗಳಿಗೆ ಆಮಂತ್ರಣ ಪತ್ರಿಕೆ ಹಂಚಿ ಸ್ವಯಂಸೇವಕರಾಗಿ ಸಹಕರಿಸುವ ಸಂಘ ಸಂಸ್ಥೆಗಳಿಗೆ ಪತ್ರ ಕಳುಹಿಸುವಂತೆ ನಿರ್ಧರಿಸಲಾಯಿತು. ವ್ಯ.ಸ.ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದರು. ದೇವಳದ ಸಿಬ್ಬಂದಿ ವರ್ಗದವರು ಸಹಕರಿಸಿದರು.

Advertisement

ಜೇಸಿಐ ಪಂಜ ಪಂಚಶ್ರೀ ಬಹುಘಟಕದ ಭಾಷಣ ಕಲೆ ತರಬೇತಿ ಶಿಬಿರ ಮಿನಿಸ್ಪೀಚ್ ಕ್ರಾಪ್ಟ್ ಸ್ಪೀಕರ್
ಜೇಸಿಐ ಪಂಜ ಪಂಚಶ್ರೀಯ ಆಶ್ರಯದಲ್ಲಿ ಬಹುಘಟಕದ ಭಾಷಣ ಕಲೆ ತರಬೇತಿ ಶಿಬಿರ ಮಿನಿಸ್ಪೀಚ್ ಕ್ರಾಪ್ಟ್ ಸ್ಪೀಕರ್-2019 ಕಾರ್ಯಕ್ರಮವು ಪೈದೊಂಡಿ ಸುಬ್ರಾಯ ಸ್ವಾಮಿ ಸಭಾಭವನ ಪಂಜದಲ್ಲಿ ಮಾ.31ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಜೇಸಿಸ್‍ನ ವಲಯ 15ರ ತರಬೇತಿ ವಿಭಾಗದ ನಿರ್ದೇಶಕಿ ಜೇಸಿಐ ಸೆನೆಟರ್ ಅಕ್ಷತಾ ಗಿರೀಶ್ ಇವರು ಉದ್ಘಾಟಿಸಿದರು. ಮುಖ್ಯ ಅಥಿತಿಯಾ ದ ವಲಯ ಉಪಾಧ್ಯಕ್ಷ ಜೇಸಿ ರೋಯನ್ ಉದಯ್ ಕ್ರಾಸ್ತಾರವರು ಮಾತನಾಡಿ ಈ ಕಾರ್ಯಕ್ರಮದ ಬಗ್ಗೆ ಆಭಿನಂದನೆ ಸಲ್ಲಿಸಿದರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ವಾಸುದೇವ ನಡ್ಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪಂಜ ಜೇಸಿಐ ಪಂಚಶ್ರೀಯ ಘಟಕಾಧ್ಯಕ್ಷ ವಾಸುದೇವ ಮೇಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಠಿಯ ತರಬೇತುದಾರರಾದ ಜೇಸಿ ಕೃಷ್ಣಮೂರ್ತಿ ಉಜಿರೆ ಪ್ರಧಾನ ತರಬೇತುದಾರರಾಗಿ ಹಾಗೂ ಸಹ ತರಬೇತುದಾರರಾಗಿ ವಲಯ ತರಬೇತುದಾರರಾದ ಜೇಸಿ ಸವಿತಾರ ಮುಡೂರು ಮತ್ತು ಜೇಸಿ ಸೋಮಶೇಖರ ನೇರಳ ತರಬೇತಿ ನಡೆಸಿಕೊಟ್ಟರು. ಕಾರ್ಯಕ್ರಮ ನಿರ್ದೇಶಕ ತೀರ್ಥಾನಂದ ಕೊಡೆಂಕಿರಿ ಪ್ರಾಸ್ತವನೆಗೈದರು. ಈ ತರಬೇತಿ ಶಿಬಿರದಲ್ಲಿ ಕುಂದಾಪುರ, ಪುತ್ತೂರು, ಸುಳ್ಯ ಸಿಟಿ, ಸುಬ್ರಹ್ಮಣ್ಯ, ಸುಳ್ಯ ಪಯಸ್ವಿನಿ, ಬೆಳ್ಳಾರೆ, ನೆಕ್ಕಿಲಾಡಿ, ಕಡಬ, ಅಲಂಕಾರು, ಉಪ್ಪಿನಂಗಡಿ ಘಟಕದ ಒಟ್ಟು 30 ಜನ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದರು.
ಕಾರ್ಯಕ್ರಮವನ್ನು ಜೇಸಿಐ ಪಂಜ ಪಂಚಶ್ರೀಯ ಘಟಕಧ್ಯಕ್ಷ ಜೇಸಿ ವಾಸುದೇವ ಮೇಲ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ಜೇಸಿ ಪ್ರವೀಣ್ ಕಾಯರ ವಂದಿಸಿದರು. ಜೇಸಿಐ ಪಂಜ ಪಂಚಶ್ರೀ ಜೇಸಿ ಕೌಶಿಕ್ ಕುಳ, ಜೇಸಿಐ ಸುಬ್ರಹ್ಮಣ್ಯ ಜೇಸಿ ಶೇಷಕುಮಾರ್ ಹಾಗೂ ಜೇಸಿ ಕಾಶಿನಾಥ್ ಗೋಗಟೆ ಜೇಸಿಐ ಕಡಬದ ಸದಸ್ಯರುಗಳಾಗಿ ಆಯ್ಕೆಯಾದರು.

ಬರಡಾದ ಜಲಮೂಲಗಳು ಕುಡಿಯುವ ನೀರಿಗೂ ತತ್ವಾರ: ಹರಿವು ನಿಲ್ಲಿಸಿದ ಪಯಸ್ವಿನಿ
ಮಳೆಗಾಲದಲ್ಲಿ ಭೀಕರ ಜಲಪ್ರಯಳ ಸಂಭವಿಸಿ ಉಕ್ಕಿ ಹರಿದ ನದಿಗಳು ಬರಡಾಗಿದ್ದು ತಾಲೂಕಿನಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. 2016ರಲ್ಲಿ ಸಂಭವಿಸಿದ ಭೀಕರ ಬರಗಾಲ ಮತ್ತೆ ಮರುಕಳಿಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತವೆ.
ಕಳೆದ ಕೆಲ ವಾರಗಳಿಂದ ಸುಳ್ಯ ಸೇರಿದಂತೆ ತಾಲೂಕಿನಾದ್ಯಂತ ವಿಪರೀತ ಸೆಕೆ ಹಾಗೂ ಮೋಡದ ವಾತವರಣವಿದ್ದಲ್ಲಿ ಜಲ ಮೂಲಗಳು ಬರಿದಾಗುತ್ತಿವೆ. ಕೆರೆ ಕಟ್ಟೆಗಳು ಒಣಗುತ್ತಿದ್ದಲ್ಲಿ ತಾಲುಕಿನ ಪ್ರಮುಖ ಜೀವನದಿ ಪಯಸ್ವನಿ ಹರಿವು ನಿಲ್ಲಿಸಿದೆ. ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ನೀರಿಗೆ ಅಭಾವ ಎದುರಾಗಿದ್ದು ಕುಮಾರಧಾರೆಯಲ್ಲೂ ನೀರಿನ ಹರಿವು ಇಳಿಮುಖವಾಗಿದ್ದು ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ತೊಂದರೆ ಯಾಗುವ ಸಾದ್ಯತೆಯಿದೆ.
ಏರಿದ ಬಿಸಿಲಿನ ತಾಪ ಒಣಗುತ್ತಿರುವ ಕೃಷಿ
ಫೆಬ್ರವರಿ ತಿಂಗಳಿನಿಂದಲೇ ಬಿಸಿಲಿನ ತಾಪ ಹಾಗೂ ಸೆಕೆ ಏರಿಕೆಯಾಗುತ್ತಿದ್ದು ವಾತಾವರಣದಲ್ಲಿ 41 ಡಿಗ್ರಿವರೆಗೂ ಏರಿಕೆ ಕಂಡ ಉಷ್ಣಾಂಶದಿಂದ ನೀರು ದಿನೇ ದಿನೇ ಆವಿ ಆಗುತ್ತಿದೆ. ಬಿಸಿಲು ಮತ್ತು ಮೋಡದ ವಾತಾವರಣದಿಂದ ನೀರಿನ ಅಭಾವ ಉಂಟಾಗಲು ಕಾರಣವಾಗು ತ್ತಿದ್ದು ನದಿ, ತೊರೆ, ಕೆರೆ, ಭಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಅಂತರ್ಜಲ ಮಟ್ಟವೂ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಕೊಳವೆ ಬಾವಿಗ ಳಲ್ಲೂ ನೀರು ಕಡಿಮೆಯಾಗಿದೆ.
ಕೃಷಿ ತೋಟಗಳಿಗೆ ನೀರು ಹಾಯಿಸಲು ನೀರಿಲ್ಲದೆ ತೋಟಗಳು ಒಣಗುತ್ತಿವೆ. ಒಂದೆಡೆ ನೀರಿನ ಅಭಾವ ಜೊತೆಗೆ ವಿದ್ಯುತ್ ವ್ಯತ್ಯಯದಿಂದ ಅಡಿಕೆ ಹಾಗೂ ಇತರ ಕೃಷಿ ತೋಟಗಳು ಕರಡುತ್ತಿವೆ.
ಮಳೆಗಾಗಿ ನಿರೀಕ್ಷೆ : ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದರೂ ನೀರು ಭೂಮಿಯಲ್ಲಿ ಸಂಗ್ರಹವಾಯಾಗದೇ ಸಮುದ್ರ ಸೇರಿರುವುದು ನೀರಿನ ಅಭಾವಕ್ಕೆ ಒಂದು ಕಾರಣವಾಗಿದೆ. ಬೇಸಿಗೆಯಲ್ಲಿ ಅಕಾಲಿಕವಾಗಿ ಸುರಿಯುತ್ತದ್ದ ಮಳೆ ಬರದಿರುವುದೂ ನೀರಿನ ಕೊರತೆಗೆ ಮತ್ತೊಂದು ಕಾರಣ. ಕಳೆದ ವರ್ಷ ಮಾರ್ಚ್‍ನಲ್ಲೇ ಕಾಣಿಸಿಕೊಂಡ ಮಳೆ ಈ ಬಾರಿ ಎಪ್ರಿಲ್‍ನಲ್ಲಿ ಕಾಣಿಸಿಕೊ ಳ್ಳಲಿಲ್ಲ. ಕೆಲವೆಡೆ ಸಣ್ಣ ಪುಟ್ಟ ಮಳೆ ಬರದಿದ್ದರೂ ಇದ ನೀರಿನ ದಾಹವನ್ನು ತೋರಿಸುವ ಲಕ್ಷಣಗಳಿಲ್ಲ. ಇದೀಗ ಜನ ನೀರಿಗಾಗಿ ಆಕಾಶವನ್ನೇ ನೋಡುವಂತಾಗಿದೆ.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

ಹವಾಮಾನ ವರದಿ | 26-03-2025 | ಇಂದೂ ಕೆಲವು ಕಡೆ ಗಾಳಿ ಸಹಿತ ಮಳೆ ಸಾಧ್ಯತೆ | ಮಾ.27 ರಿಂದ ಮಳೆ ಕಡಿಮೆ |
March 26, 2025
1:29 PM
by: ಸಾಯಿಶೇಖರ್ ಕರಿಕಳ
ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರ | ಬದು ನಿರ್ಮಾಣದಿಂದ ಮಳೆ ನೀರು ಪೋಲು ನಿಯಂತ್ರಣ |
March 26, 2025
7:06 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ | ಸೆರೆ ಹಿಡಿದ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
March 26, 2025
6:49 AM
by: The Rural Mirror ಸುದ್ದಿಜಾಲ
ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು  ಕಾರ್ಯಾಚರಣೆ
March 26, 2025
6:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror