ಸುಳ್ಯ: ವಿದೇಶದಿಂದ ಬಂದಿಳಿದ ಯುವಕನೋರ್ವ ಆಸ್ಪತ್ರೆಗೆ ತೆರಳಿ ರೋಗಿಯೋರ್ವರಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದ ಘಟನೆ ಇಂದು ಮುಂಜಾನೆ ನಡೆದಿದೆ. ಕನಕಮಜಲು ಸಮೀಪದ ಸುಣ್ಣಮೂಲೆಯ ಸಫ್ವಾನ್ ರಕ್ತದಾನದ ಮಾಡಿದ ಯುವಕ. ವಿಖಾಯ ರಕ್ತದಾನಿ ಬಳಗದ ಸದಸ್ಯನಾಗಿರುವ ಸಫ್ವಾನ್ ಇಂದು ಬೆಳಿಗ್ಗೆ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಮನೆಗೆ ಆಗಮಿಸಿದ್ದರು. ಬಳಗದ ವಾಟ್ಸಾಪ್ ಗ್ರೂಪ್ ನಲ್ಲಿ ‘ಒ ಪಾಸಿಟಿವ್’ ರಕ್ತದ ಬೇಡಿಕೆ ಕಂಡುಬಂದಾಗ ಮನೆಗೆ ಬಂದು ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
Advertisement
ಇವರು ಸುಣ್ಣಮೂಲೆ ಎಸ್.ಕೆ.ಎಸ್.ಎಸ್.ಎಫ್ ನ ಅಧ್ಯಕ್ಷರೂ, ವಿಖಾಯ ರಕ್ತದಾನಿ ಬಳಗ ಸುಳ್ಯ ಇದರ ಸಕ್ರಿಯ ಸದಸ್ಯರೂ ಆಗಿದ್ದಾರೆ.
ವಿಖಾಯ ಸುಳ್ಯ ರಕ್ತದಾನಿ ಬಳಗದ ಇನ್ನೊಬ್ಬ ಸದಸ್ಯ ಫಝಲ್ ರವರೂ ಕೂಡಾ ಇಂದು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement