ದೇವಸ್ಥಾನ ಮತ್ತು ಮಠ ಪರಸ್ಪರ ಸಂಘರ್ಷ ನಡೆಸಬಾರದು – ವಿಹಿಂಪ

Advertisement
ಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠ ಪರಸ್ಪರ ಸಂಘರ್ಷ ನಡೆಸಬಾರದು ಎಂದು ವಿಹಿಂಪ ವತಿಯಿಂದ ಎರಡೂ ಕಡೆಯವರಿಗೂ ಈ ಹಿಂದೆಯೇ ಮನವಿ ಮಾಡಿತ್ತು.  ಮಠದದಲ್ಲಿ ಸರ್ಪ ಸಂಸ್ಕಾರ ವೈಯಕ್ತಿಕವಾಗಿ ನಡೆಸಲಾಗುತ್ತದೆ ಹೀಗಾಗಿ ಮಠದಲ್ಲಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸಾಮೂಹಿಕವಾಗಿ ನಡೆಸಲಾಗುತ್ತದೆ ಎಂದು ವಿಹಿಂಪ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಹೇಳಿದ್ದಾರೆ.
ಬುಧವಾರ ಮಂಗಳೂರಿನಲ್ಲಿ  ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಪ್ರೊ.ಎಂ.ಬಿ. ಪುರಾಣಿಕ್, ಮಠದಲ್ಲಿ ಸರ್ಪಸಂಸ್ಕಾರ ನಡೆಸುವುದರಿಂದ ದೇವಸ್ಥಾನದ ಆದಾಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಏಕೆಂದರೆ ಮಠದಲ್ಲಿ ಸರ್ಪ ಸಂಸ್ಕಾರ ನಡೆಸುವವರೂ ದೇವಸ್ಥಾನಕ್ಕೆ ಶುಲ್ಕ ಪಾವತಿಸುತ್ತಾರೆ ಎಂದ ಅವರು

Advertisement
ಮಠದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಪೂಜೆ ನಡೆಸಿದರೆ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಕೆಯಾಗುವುದಿಲ್ಲ ಎಂದು ಬೋರ್ಡ್ ಹಾಕಿರುವುದು, ಮೈಕ್ ಮೂಲಕ ಹೇಳುವುದು ಸರಿಯಲ್ಲ. ಕೆಲವೇ ಮಂದಿ ಸ್ಥಾಪಿತ ಹಿತಾಸಕ್ತಿಗಳ ವೈಯಕ್ತಿಕ ದ್ವೇಷ ಸಾಧನೆಗೆ ಈ ವಿಚಾರ ಬಳಸಿಕೊಳ್ಳಲಾಗುತ್ತಿದೆ ಎಂದರು. ಸಾಮರಸ್ಯ ಧಾರ್ಮಿಕ ವಾತಾವರಣ ನಿರ್ಮಾಣಕ್ಕೆ ವಿಹಿಂಪ ಆದ್ಯತೆ ನೀಡಲಿದೆ.  ಪರಸ್ಪರ ಒಗ್ಗಟ್ಟಿನ ಸಾಮರಸ್ಯ ನಿರ್ಮಾಣಕ್ಕೆ ವಿಹಿಂಪ ಶ್ರಮಿಸಲಿದೆ ಎಂದರು.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಮಠದ ಪಾವಿತ್ರ್ಯಕ್ಕೆ ಧಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. ಕಳೆದ ಮೂರು ದಿನದ ಹಿಂದೆ ನಡೆದ ದೇವಸ್ಥಾನ ಮತ್ತು ಮಠದ ನಡುವೆ ಸಂಘರ್ಷ ಸೃಷ್ಟಿ ಮಾಡುವ ಘಟನೆ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಬೇಕು ಎಂದು ಇದೇ ವೇಳೆ ಎಂ.ಬಿ.ಪುರಾಣಿಕ್ ಒತ್ತಾಯಿಸಿದ್ದಾರೆ.
ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಹಿಂಪ ಪ್ರಾಂತ ಸಹ ಗೋರಕ್ಷಾ ಪ್ರಮುಖ್ ಜಗದೀಶ ಶೇಣವ, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ವಿಹಿಂಪ ಕಾರ್ಯದರ್ಶಿ ಶಿವಾನಂದ ಮೆಂಡನ್ ಉಪಸ್ಥಿತರಿದ್ದರು.
ಸುದ್ದಿಗೋಷ್ಟಿಯ ವಿಡಿಯೋ ಇಲ್ಲಿದೆ…
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ದೇವಸ್ಥಾನ ಮತ್ತು ಮಠ ಪರಸ್ಪರ ಸಂಘರ್ಷ ನಡೆಸಬಾರದು – ವಿಹಿಂಪ"

Leave a comment

Your email address will not be published.


*