ಗುರುವಾಯೂರು: ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಗುರುವಾಯೂರು ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದ್ದಾರೆ.
ಎರಡನೇ ಬಾರಿ ಪ್ರಧಾನಿಯಾದ ಬಳಿಕ ತನ್ನ ಪ್ರಥಮ ಕೇರಳ ಭೇಟಿ ಸಂದರ್ಭದಲ್ಲಿ ಗುರುವಾಯೂರು ಶ್ರೀಕೃಷ್ಣ ದೈವಸ್ಥಾನದಲ್ಲಿ ದರ್ಶನ ಪಡೆದ ಅವರು ತಾವರೆ ಹೂವಿನಲ್ಲಿ ತುಲಾಬಾರ ಸೇವೆ ನಡೆಸಿದರು. 91 ಕೆ.ಜಿ. ತಾವರೆ ಹೂವಿನಲ್ಲಿ ತುಲಾಬಾರ ನಡೆಸಲಾಯಿತು. ಪ್ರಧಾನಿ ತುಲಾಭಾರಕ್ಕಾಗಿ ತಮಿಳುನಾಡಿನ ಶುಚೀಂದ್ರದಿಂದ 111 ಕೆ.ಜಿ. ತಾವರೆ ಹೂವನ್ನು ತರಿಸಲಾಗಿತ್ತು ಅತ್ಯಂತ ಪವಿತ್ರವಾದ ಮತ್ತು ಇತಿಹಾಸ ಪ್ರಸಿದ್ಧ ದೇವಾಲಯ ಗುರುವಾಯೂರು ಎಂದು ಪ್ರಧಾನಿ ಬಣ್ಷಿಸಿದರು. ಗುರುವಾಯೂರು ದೇವಸ್ಥಾನದ ವಿವಿಧ ಅಭಿವೃದ್ಧಿಗಾಗಿ 450 ಕೋಟಿಯ ವಿವಿಧ ಯೋಜನೆಗಳ ಬೇಡಿಕೆಗಳನ್ನು ದೇವಾಲಯ ಆಡಳಿತ ಪ್ರಧಾನಿಗೆ ಸಲ್ಲಿಸಿದರು. ಈ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ದೇಶದ ಸಮೃದ್ಧಿಗಾಗಿ ಪ್ರಾರ್ಥನೆ : ಪ್ರಧಾನಿ ಮೋದಿ"