ಧರ್ಮಸ್ಥಳದಲ್ಲಿ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ : ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ

October 13, 2019
6:53 AM

ಧರ್ಮಸ್ಥಳ:  ಪಾಶ್ಚಾತ್ಯ ಸಂಗೀತದ ಪ್ರಭಾವದಿಂದಯಕ್ಷಗಾನ, ಜನಪದ ಕಲೆಗಳು, ಶಾಸ್ತ್ರೀಯ ಸಂಗೀತ ಮೊದಲಾದ ಭಾರತೀಯ ಕಲಾಪ್ರಕಾರಗಳು ಮರೆಯಾಗಬಹುದೆಂಬ ಭಯ, ಆತಂಕ ಅಗತ್ಯವಿಲ್ಲ ಎಂದುಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement
Advertisement
Advertisement
Advertisement

ಅವರು ಧರ್ಮಸ್ಥಳದಲ್ಲಿ ವಸಂತ ಮಹಲ್‍ನಲ್ಲಿ ಶ್ರೀ ಮಂಜುನಾಥ ಸ್ವಾಮಿದೇವಸ್ಥಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್‍ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದಲ್ಲಿ ಸಂಗೀತ ಕಲಾನಿಧಿ ಎ. ಕನ್ಯಾಕುಮಾರಿ ಅವರಿಗೆ ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ (ಒಂದು ಲಕ್ಷರೂ. ನಗದು) ಹಾಗೂ ಸಂಗೀತಕಲಾರತ್ನ ನೀಲಾ ರಾಂಗೋಪಾಲ್‍ಅವರಿಗೆ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕರಾಷ್ಟ್ರೀಯ ಪ್ರಶಸ್ತಿ (ಒಂದು ಲಕ್ಷರೂ. ನಗದು) ನೀಡಿ ಗೌರವಿಸಿದರು. ಅನೇಕ ಮಂದಿ ಯುವಕಲಾವಿದರುವಿವಿಧ ಭಾರತೀಯ ಸಂಗೀತ ಕಲಾಪ್ರಕಾರಗಳನ್ನು ಆಸಕ್ತಿಯಿಂದಅಧ್ಯಯನ ಮಾಡಿಇಂದುಜಾಗತಿಕ ಮಟ್ಟದಲ್ಲಿಉನ್ನತ ಸಾಧನೆ ಮಾಡಿರುವುದೇಇದಕ್ಕೆ ಸಾಕ್ಷಿಯಾಗಿದೆ.ಯಾವುದೇರೀತಿಯ ಪಾಶ್ಚಾತ್ಯ ಸಂಗೀತ ಹಾಗೂ ವಾದ್ಯಗಳು ಭಾರತೀಯ ಮೂಲದ ಸಂಗೀತ ಪರಂಪರೆಯನ್ನು ಮೀರಿಸಲು ಸಾಧ್ಯವಿಲ್ಲ ಎಂದುಅವರು ಹೇಳಿದರು. ವೀಣೆ ಶೇಷಣ್ಣ ಸಂಗೀತೋತ್ಸವ, ಹಿರಿಯಕಲಾವಿದರನ್ನುಗೌರವಿಸುವುದು, ವಿಚಾರ ಸಂಕಿರಣ, ಸಂಗೀತ ಕಲಿಯುವವರಿಗೆ ಪ್ರೋತ್ಸಾಹ ನೀಡುವುದುಇತ್ಯಾದಿ ಕಾರ್ಯಕ್ರಮಗಳು ನಮ್ಮ ಭಾರತೀಯ ಸಂಗೀತ ಪರಂಪರೆಯನ್ನು ಉಳಿಸಿ – ಬೆಳೆಸಲು ಸಮಗೆ ಹೆಚ್ಚಿನ ಪ್ರೇರಣೆ ಮತ್ತು ಉತ್ಸಾಹವನ್ನು ನೀಡುತ್ತವೆ. ಭಾರತೀಯ ಸಂಗೀತ ಪ್ರಕಾರದ ವಾದ್ಯಗಳನ್ನು, ಸಂಗೀತ ಪರಿಕರಗಳನ್ನು ಉಳಿಸುವ ಕಾರ್ಯ ಮಾಡಬೇಕುಎಂದುಅವರು ಸಲಹೆ ನೀಡಿದರು.

Advertisement

ಕದ್ರಿ ಗೋಪಾಲನಾಥ್‍ ದಕ್ಷಿಣಕನ್ನಡಜಿಲ್ಲೆಯ ಅಮೂಲ್ಯ ಕಲಾರತ್ನ ಎಂದು ಬಣ್ಣಿಸಿದ ಹೆಗ್ಗಡೆಯವರು ಅವರ ಆತ್ಮಕ್ಕೆಚಿರಶಾಂತಿಯನ್ನುಕೋರಿದರು.ಇಂದಿನ ಸಮಾರಂಭಕ್ಕೆ ಆಹ್ವಾನಿಸುವ ಯೋಚನೆಇತ್ತು.

ಪ್ರಶಸ್ತಿ ಪುರಸ್ಕೃತರಾದ ಎ. ಕನ್ಯಾಕುಮಾರಿ ಮಾನಾಡಿ,ತನ್ನಕಲಾಸಾಧನೆಗೆ ಪ್ರೋತ್ಸಾಹಿಸಿದ ಎಂ.ಎಲ್. ವಸಂತಕುಮಾರಿ, ಕದ್ರಿ ಗೋಪಾಲನಾಥ್ ಮೊದಲಾದವರನ್ನುಕೃತಜ್ಞತೆಯಿಂದ ಸ್ಮರಿಸಿದರು.

Advertisement

ಪ್ರಶಸ್ತಿ ಪುರಸ್ಕೃತರಾದ ನೀಲಾ ರಾಂಗೋಪಾಲ್ ಮಾತನಾಡಿ ಶ್ರೀ ಮಂಜುನಾಥ ಸ್ವಾಮಿಯಅನುಗ್ರಹದಿಂದತಾನು ಮುಂದೆಯೂ ನಿರಂತರ ಕಲಾಸೇವೆ ಮಾಡುವುದಾಗಿ ಹೇಳಿದರು.

ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್‍ ಟ್ರಸ್ಟ್ ನ ಅಧ್ಯಕ್ಷ ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವೀಣೆ ಮತ್ತು ಮೈಸೂರಿಗೆಇರುವ ಅವಿನಾಭಾವ ಸಂಬಂಧವನ್ನು ವಿವರಿಸಿ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದ ಮೂಲಕ ಅನೇಕ ಹಿರಿಯ ಕಲಾವಿದರನ್ನು ಗೌರವಿಸಲಾಗುತ್ತದೆಎಂದರು.

Advertisement

ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಿ. ಹರ್ಷೇಂದ್ರಕುಮಾರ್ ಸ್ವಾಗತಿಸಿದರು. ಶ್ಯಾಮ ಸುಂದರಶರ್ಮ ಧನ್ಯವಾದವಿತ್ತರು. ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ
February 24, 2025
10:16 PM
by: The Rural Mirror ಸುದ್ದಿಜಾಲ
ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror